4.2 ಸೋಡಿ (Discounts):

 

 

ಕೆಳಗಿನ ಸಮಸ್ಯೆಗೆ ನಿಮ್ಮ ಉತ್ತರ ಏನು?

 

ನಿಮ್ಮ ಮನೆಯಲ್ಲಿ ಒಂದು ಮದುವೆಯ ಸಮಾರಂಭವಿದೆ ಎಂದು ಊಹಿಸಿ. ಸಂಪ್ರದಾಯದಂತೆ, ಬಂಧು ಬಾಂಧವರಿಗೆಲ್ಲಾ ಸೀರೆ ಮತ್ತು ಅಂಗಿಗಳನ್ನು ನಿಮ್ಮ ಮನೆಯವರು ಕೊಡಬೇಕಿದೆ. ನಿಮ್ಮ ಸಂಬಂಧಿಕರಲ್ಲಿ ಒಟ್ಟು 24 ಹೆಂಗಸರಿಗೆ ಸೀರೆಗಳನ್ನು ಕೊಡಬೇಕಿದೆ. 16 ಗಂಡಸರಿಗೆ ಅಂಗಿಗಳನ್ನು ಕೊಡಬೇಕಿದೆ. ಒಂದೇ ಕಂಪನಿಯ ಬಟ್ಟೆಗಳು ಎರಡು ಅಂಗಡಿಗಳಲ್ಲಿ ಒಂದೇ ದರಕ್ಕೆ ಸಿಗುತ್ತವೆ, ಎಂದು ಊಹಿಸಿ. (ಸೀರೆಯ ಮಾರಾಟದ ಬೆಲೆ ರೂ.350 ರೆಡಿಮೇಡ್ ಅಂಗಿಯ ಬೆಲೆ ರೂ. 300).ಆದರೆ ಎರಡೂ ಅಂಗಡಿಯವರು ಎರಡು ಬೇರೆ ಬೇರೆ ರೀತಿಯಲ್ಲಿ ರಿಯಾಯತಿ ನೀಡುತ್ತಾರೆ.

A ಅಂಗಡಿ:  ಇಲ್ಲಿ ಒಟ್ಟು ವ್ಯಾಪಾರದ ಮೇಲೆ 10% ರಿಯಾಯತಿ ನೀಡುತ್ತಾರೆ.

B ಅಂಗಡಿ: ಇಲ್ಲಿ 5 ಸೀರೆಗಳಿಗೆ 1ಸೀರೆ ಉಚಿತ, 7 ಅಂಗಿಗಳಿಗೆ 1 ಅಂಗಿ ಉಚಿತ ನೀಡುತ್ತಾರೆ.

 

ಈಗ, ನೀವು ಲೆಕ್ಕ ಕಲಿತಿರುವುದರಿಂದ , ನಿಮ್ಮ ಮನೆಯವರು ನಿಮ್ಮನ್ನು ಕೇಳಿದರೆ ಯಾವ ಅಂಗಡಿಯಲ್ಲಿ ಬಟ್ಟೆ ಖರೀದಿಸಬೇಕೆಂದು ನೀವು ಸಲಹೆ ನೀಡುವಿರಿ?

 

ಪೀಠಿಕೆ:

ನೀವು ಹಬ್ಬಗಳ ಅವಧಿಯಲ್ಲಿ, ಹೊಸ ವರ್ಷದ ಸಂದರ್ಭದಲ್ಲಿ ಟಿ.ವಿ. ಮತ್ತು ವಾರ್ತಾಪತ್ರಿಕೆಗಳಲ್ಲಿ ರಿಯಾಯಿತಿ ಮಾರಾಟದ ಜಾಹೀರಾತುಗಳನ್ನು ನೋಡಿದ್ದೀರಿ. ರಿಯಾಯಿತಿ ಮಾರಾಟವು ವಸ್ತುವಿನ ನಮೂದಿಸಿದ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದು.

ಹಾಗಾದರೆ ರಿಯಾಯಿತಿ ಮಾರಾಟದಿಂದ ವ್ಯಾಪಾರಿಯು ನಷ್ಟ ಅನುಭವಿಸುವನೆ?

ಕೆಲವು ಸಾರಿ ಹೌದು. ಆದರೆ ಹೆಚ್ಚಿನ ಸಲ ವ್ಯಾಪಾರಿಯು ನಷ್ಟ ಅನುಭವಿಸುವುದಿಲ್ಲ,ಆದರೆ ಗಳಿಸುವ ಲಾಭದ ಪ್ರಮಾಣ ಕಡಿಮೆ ಇರುತ್ತದೆ.

ತಯಾರಕ/ವ್ಯಾಪಾರಿ ಇಬ್ಬರಲ್ಲಿ ಯಾರು ಬೇಕಾದರೂ ರಿಯಾಯಿತಿಯನ್ನು ನೀಡಬಹುದು. ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಕೆಲವು ಕಾರಣಗಳು ಹೀಗಿವೆ:-

 

1.      ಕಡಿತದ ವ್ಯಾಪಾರದ ಸಮಯದಲ್ಲಿ(ಹಬ್ಬಗಳು, ವರ್ಷದ ಆರಂಭ ಮತ್ತು ಅಂತ್ಯ,) ವ್ಯಾಪಾರವನ್ನು ಹೆಚ್ಚಿಸಲು.

2.      ದಾಸ್ತಾನಿರುವ ಸರಕನ್ನು (ಹೆಚ್ಚಾಗಿ ಹಳೆಯದು) ಖಾಲಿ ಮಾಡಲು.

3.      ಹೊಸ ಗ್ರಾಹಕರನ್ನು ಆಕರ್ಷಿಸಲು.

4.      ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಲು

ರಿಯಾಯಿತಿ (ಕಡಿತ) ವ್ಯಾಪಾರದ ವಿವಿಧ ಸ್ವರೂಪಗಳು

ಉದಾಹರಣೆಗಳು

ವಿವಿಧ ಸ್ವರೂಪಗಳು

ಸ್ಕೂಲ್ ಬ್ಯಾಗ್ ನ ಮೇಲೆ 5% ದರ ಕಡಿತ

ಶೇಕಡಾ ಸೋಡಿ (ರಿಯಾಯಿತಿ)

ಕಾಲ್ಚೆಂಡಿನ ಮೇಲೆ ರೂ.10 ರ ಕಡಿತ

ನಗದು ಸೋಡಿ

ಒಂದು ಟಿ.ವಿ.ಯ ಜತೆಗೆ ಒಂದು ಡಿ ವಿ ಡಿ ಪ್ಲೇಯರ್ ಉಚಿತ

ಇನ್ನೊಂದು ಉತ್ಪನ್ನ ಉಚಿತ

3 ಅಂಗಿಗಳಿಗೆ 1 ಅಂಗಿ ಉಚಿತ

ಅದೇ ಉತ್ಪನ್ನ ಉಚಿತ

 

ಕೆಲವು ವ್ಯಾಖ್ಯೆಗಳು:

1.      ನಗದು ಸೋಡಿ ಕೊಟ್ಟಾಗ  : ರಿಯಾಯಿತಿ (ಸೋಡಿ) = ನಮೂದಿಸಿದ ಬೆಲೆ (Marked price) - ಮಾರಾಟದ ಬೆಲೆ (Selling price) = MP-SP ಅಥವಾ

2.      ಶೇಕಡಾ ಸೋಡಿ ಕೊಟ್ಟಾಗ  : ರಿಯಾಯಿತಿ (ಸೋಡಿ)  = ಶೇಕಡಾ ಸೋಡಿ (Discount%) * ನಮೂದಿಸಿದ ಬೆಲೆ /100

3.      ಮಾರಾಟದ ಬೆಲೆ =  ನಮೂದಿಸಿದ ಬೆಲೆ - ಸೋಡಿ

4.      ಸೋಡಿಯ ಶೇಕಡಾ ದರ = ಸೋಡಿ *100/ ನಮೂದಿಸಿದ ಬೆಲೆ

 

 

4.2 ಸಮಸ್ಯೆ 1: ಒಂದು ಅಂಗಡಿಯಲ್ಲಿ ರೂ.15,000 ನಮೂದಿಸಿದ ಬೆಲೆಯ ಟಿ.ವಿ.ಯನ್ನು ಕೊಂಡಾಗ ರೂ.1200 ಬೆಲೆಯ ವೋಲ್ಟೇಜ್ ಸ್ಟೆಬಿಲೈಸರನ್ನು ಉಚಿತವಾಗಿ ಕೊಡುತ್ತಾರೆ. ಹಾಗಾದರೆ ಸೋಡಿಯ ದರವನ್ನು ಮತ್ತು ಟಿ.ವಿಯ ಮಾರಾಟದ ಬೆಲೆಯನ್ನು ಕಂಡುಹಿಡಿಯಿರಿ

 

ಪರಿಹಾರ:

ಇಲ್ಲಿ ಸೋಡಿಯು 1200 ರೂ.ನ ಉಚಿತ ಉತ್ಪನ್ನದ ರೂಪದಲ್ಲಿದೆ

 ಸೋಡಿ=1200 ರೂ.

ಟಿ.ವಿಯ ಮಾರಾಟದ ಬೆಲೆ = ನಮೂದಿಸಿದ ಬೆಲೆ - ಸೋಡಿ

   = 15000-1200

      =13,800 ರೂ.

ಸೋಡಿಯದರ = ಸೋಡಿ *100/ ನಮೂದಿಸಿದ ಬೆಲೆ

= 1200*100/15000 = 8%

 

ತಾಳೆ:

 

ಸೋಡಿ = ನಮೂದಿಸಿದ ಬೆಲೆ * ಸೋಡಿಯದರ /100

= 15000*8/100 = 8*150 = 1200 ರೂ.

ಇದು ಉಚಿತವಾಗಿ ಕೊಟ್ಟ ಸ್ಟೆಬಿಲೈಸರಿನ ಬೆಲೆಯಾಗಿರುತ್ತದೆ.

 

4.2 ಸಮಸ್ಯೆ 2:  ಒಬ್ಬ ಪುಸ್ತಕ ವ್ಯಾಪಾರಿಯು ಪುಸ್ತಕಗಳ ಮೇಲೆ 15% ಸೋಡಿಯನ್ನು ಬಿಡುತ್ತಾನೆ. ನೀವು 1500 ರೂ. ಬೆಲೆಯ ಪುಸ್ತಕಗಳನ್ನು ಕೊಂಡರೆ, ನಿಮಗೆ ಸಿಗುವ ಸೋಡಿ ಎಷ್ಟು?

 

ಪರಿಹಾರ:

ಸೋಡಿ = ನಮೂದಿಸಿದ ಬೆಲೆ*ಸೋಡಿಯ ದರ /100

= 1500*15/100

= 225 ರೂ.

ಮಾರಾಟದ ಬೆಲೆ = ನಮೂದಿಸಿದ ಬೆಲೆ - ಸೋಡಿ

 = 1500-225

  = 1275 ರೂ.

 

ತಾಳೆ:

 

ಸೋಡಿಯ ದರ = ಸೋಡಿ*100/ ನಮೂದಿಸಿದ ಬೆಲೆ

  = 225*100/1500 =15 % - ದತ್ತಾಂಶ.

ಸೋಡಿಯ ದರ ಮತ್ತು ಮಾರಾಟದ ಬೆಲೆಯನ್ನು ಕೊಟ್ಟಾಗ, ನಮೂದಿಸಿದ ಬೆಲೆಯನ್ನು ಹೀಗೆ ಕಂಡುಹಿಡಿಯುತ್ತೇವೆ:-

ನಮೂದಿಸಿದ ಬೆಲೆ = 100*ಮಾರಿದ ಬೆಲೆ /(100- ಸೋಡಿಯದರ)

 

4.2 ಸಮಸ್ಯೆ 3 :   ಒಂದು ಕಂಪನಿಯು 12% ಸೋಡಿ ಬಿಟ್ಟು ಒಂದು ಹೊಲಿಗೆ ಯಂತ್ರವನ್ನು 3520 ರೂ.ಗಳಿಗೆ ಮಾರಿದರೆ, ನಮೂದಿಸಿದ ಬೆಲೆ ಕಂಡುಹಿಡಿ.

 

ಪರಿಹಾರ:

ನಮೂದಿಸಿದ ಬೆಲೆ = 100* ಮಾರಿದ ಬೆಲೆ /(100- ಸೋಡಿಯ ದರ)

    = 100*3520/(100-12)

    = 100*3520/88 = 4000 ರೂ.

 

ತಾಳೆ:

 

ನಮೂದಿಸಿದ ಬೆಲೆ = 4000 ರೂ. ಸೋಡಿಯದರ = 12%.

ಸೋಡಿ = ಸೋಡಿಯ ದರ*ನಮೂದಿಸಿದ ಬೆಲೆ /100 = 12*4000/100 = 480 ರೂ.

  ಮಾರಾಟದ ಬೆಲೆ = ನಮೂದಿಸಿದ ಬೆಲೆ - ಸೋಡಿ = 4000-480 = 3520 - ದತ್ತಾಂಶ.

 

4.2 ಸಮಸ್ಯೆ 4 :  ಒಬ್ಬ ಗ್ರಾಹಕನು 10 ಸಾಬೂನನ್ನು ಕೊಳ್ಳುವ ಮೂಲಕ 20 ರೂಪಾಯಿಗಳನ್ನು ಉಳಿಸಿದನು. ಪ್ರತಿ ಸಾಬೂನಿನ ಮೇಲೆ 10% ಸೋಡಿ ಬಿಡಲಾಯಿತು. ಪ್ರತಿ ಸಾಬೂನಿನ ನಮೂದಿಸಿದ ಬೆಲೆ ಕಂಡುಹಿಡಿ.

 

ಪರಿಹಾರ:

ನಮಗೀಗ ಉಳಿತಾಯ (ಸೋಡಿ) ಮತ್ತು ಸೋಡಿಯ ದರವನ್ನು ಕೊಟ್ಟಿದೆ. ನಮೂದಿಸಿದ ಬೆಲೆಯನ್ನು ಕಂಡುಹಿಡಿಯಬೇಕು.

ಗ್ರಾಹಕನು 10 ಸಾಬೂನುಗಳಿಗೆ 20 ರೂ. ಉಳಿಸಿದನು.

ಅವನ ಉಳಿತಾಯ = ಒಂದು ಸಾಬೂನಿಗೆ 2 ರೂ. ನಮೂದಿಸಿದ ಬೆಲೆ MP ಆಗಿರಲಿ.

ಸೋಡಿ = ಸೋಡಿಯದರ*ನಮೂದಿಸಿದ ಬೆಲೆ /100

 2 = 10*MP/100 (ಸೋಡಿ = 2. ಸೋಡಿಯದರ =10%)

 200 = 10*MP (ಎರಡೂ ಬದಿಗಳಿಗೆ 100ರಿಂದ ಗುಣಿಸಿದೆ)

ನಮೂದಿಸಿದ ಬೆಲೆ (MP)=20

 

ತಾಳೆ:

 

ನಮೂದಿಸಿದ ಬೆಲೆ = 20 ರೂ. ಸೋಡಿ = 10%

 ಸೋಡಿ = ನಮೂದಿಸಿದ ಬೆಲೆ*ಸೋಡಿಯದರ /100

    = 20*10/100 = 2 ರೂ.

 10 ಸಾಬೂನು ಕೊಂಡಾಗ ಉಳಿತಾಯ = 10*2 = 20 ರೂ. ದತ್ತ.

 

4.2 ಸಮಸ್ಯೆ 5 : ನಿಮ್ಮ ಮನೆಯಲ್ಲಿ ಒಂದು ಮದುವೆಯ ಸಮಾರಂಭವಿದೆ ಎಂದು ಊಹಿಸಿ. ಸಂಪ್ರದಾಯದಂತೆ, ಬಂಧು ಬಾಂಧವರಿಗೆಲ್ಲಾ ಸೀರೆ ಮತ್ತು ಅಂಗಿಗಳನ್ನು ನಿಮ್ಮ ಮನೆಯವರು ಕೊಡಬೇಕಿದೆ. ನಿಮ್ಮ ಸಂಬಂಧಿಕರಲ್ಲಿ ಒಟ್ಟು 24 ಹೆಂಗಸರಿಗೆ ಸೀರೆಗಳನ್ನು ಕೊಡಬೇಕಿದೆ. 16 ಗಂಡಸರಿಗೆ ಅಂಗಿಗಳನ್ನು ಕೊಡಬೇಕಿದೆ. ಒಂದೇ ಕಂಪನಿಯ ಬಟ್ಟೆಗಳು ಎರಡು ಅಂಗಡಿಗಳಲ್ಲಿ ಒಂದೇ ದರಕ್ಕೆ ಸಿಗುತ್ತವೆ, ಎಂದು ಊಹಿಸಿ. (ಸೀರೆಯ ಮಾರಾಟದ ಬೆಲೆ ರೂ.350 ರೆಡಿಮೇಡ್ ಅಂಗಿಯ ಬೆಲೆ ರೂ. 300).ಆದರೆ ಎರಡೂ ಅಂಗಡಿಯವರು ಎರಡು ಬೇರೆ ಬೇರೆ ರೀತಿಯಲ್ಲಿ ರಿಯಾಯತಿ ನೀಡುತ್ತಾರೆ.

A ಅಂಗಡಿ:  ಇಲ್ಲಿ ಒಟ್ಟು ವ್ಯಾಪಾರದ ಮೇಲೆ 10% ರಿಯಾಯತಿ ನೀಡುತ್ತಾರೆ.

B ಅಂಗಡಿ: ಇಲ್ಲಿ 5 ಸೀರೆಗಳಿಗೆ 1ಸೀರೆ ಉಚಿತ, 7 ಅಂಗಿಗಳಿಗೆ 1 ಅಂಗಿ ಉಚಿತ ನೀಡುತ್ತಾರೆ.

 

ಈಗ, ನೀವು ಲೆಕ್ಕ ಕಲಿತಿರುವುದರಿಂದ , ನಿಮ್ಮ ಮನೆಯವರು ನಿಮ್ಮನ್ನು ಕೇಳಿದರೆ ಯಾವ ಅಂಗಡಿಯಲ್ಲಿ ಬಟ್ಟೆ ಖರೀದಿಸಬೇಕೆಂದು ನೀವು ಸಲಹೆ ನೀಡುವಿರಿ?

ಪರಿಹಾರ:

 

A ಅಂಗಡಿ::

24 ಸೀರೆಗಳ ಮಾರಾಟದ ಬೆಲೆ = 24*350 = ರೂ.8,400

16 ಅಂಗಿಗಳ ಮಾರಾಟದ ಬೆಲೆ = 16*300 = ರೂ.4,800

ಬಟ್ಟೆಗಳ ಒಟ್ಟು ಕ್ರಯ                   =  ರೂ.13, 200

ಸೋಡಿ = ಸೋಡಿಯದರ*ನಮೂದಿಸಿದ ಬೆಲೆ /100

= 10*13200/100 = 1320 ರೂ..

ಮಾರಾಟದ ಬೆಲೆ = ನಮೂದಿಸಿದ ಬೆಲೆ - ಸೋಡಿ = 13200-1320 = ರೂ.11, 880

 

B ಅಂಗಡಿ:

ನಮಗೆ ಬೇಕಾದದ್ದು = 24 ಸೀರೆಗಳು

ಅಂಗಡಿಯವನು 5 ಸೀರೆಗಳಿಗೆ 1 ಸೀರೆಯನ್ನು ಉಚಿತವಾಗಿ ಕೊಡುತ್ತಾನೆ.

 ನಾವು ಖರೀದಿಸಬೇಕಾದ ಸೀರೆಗಳು = 20

( 20 ಸೀರೆಗಳು + 4 ಉಚಿತ ಸೀರೆಗಳು = 24 ಸೀರೆಗಳು)                                 

ನಮಗೆ ಬೇಕಾದದ್ದು = 16 ಅಂಗಿಗಳು

7 ಅಂಗಿಗಳಿಗೆ 1 ಅಂಗಿಯನ್ನು ಉಚಿತವಾಗಿ ಕೊಡುತ್ತಾನೆ.

 ನಾವು ಖರೀದಿಸಬೇಕಾದ ಅಂಗಿಗಳು = 14

( 14 ಅಂಗಿಗಳು + 2 ಉಚಿತ ಅಂಗಿಗಳು = 16 ಅಂಗಿಗಳು)

20 ಸೀರೆಗಳ ಕ್ರಯ = 20*350 = ರೂ. 7,000

14 ಅಂಗಿಗಳ ಕ್ರಯ = 14*300 = ರೂ..  4,200

ಒಟ್ಟು ಮಾರಾಟದ ಬೆಲೆ                 = ರೂ. 11,200

ಈಗ, B ಯ ಮಾರಾಟದ ಬೆಲೆಯು A ಗಿಂತ ಕಡಿಮೆ. ಆದ್ದರಿಂದ B ಅಂಗಡಿಯಲ್ಲಿ ಬಟ್ಟೆ ಖರೀದಿಸುವುದೊಳ್ಳೆಯದೆಂದು ನೀವು ಹೇಳುವಿರಿ ತಾನೆ?

 

4.2 ಕಲಿತ ಸಾರಾಂಶ

 

 

 

ಕ್ರ.ಸಂ.

ಕಲಿತ ಮುಖ್ಯಾಂಶಗಳು

1

ಸೋಡಿ = ನಮೂದಿಸಿದ ಬೆಲೆಮಾರಿದ ಬೆಲೆ= MP-SP

2

ಸೋಡಿ = ಸೋಡಿಯದರ * ನಮೂದಿಸಿದ ಬೆಲೆ /100

3

ಮಾರಿದ ಬೆಲೆ  = ನಮೂದಿಸಿದ ಬೆಲೆ  - ಸೋಡಿ

4

ಸೋಡಿಯದರ = ಸೋಡಿ *100/ನಮೂದಿಸಿದ ಬೆಲೆ

5

ಸೋಡಿಯದರ = 100* ಮಾರಿದ ಬೆಲೆ  /(100 ಸೋಡಿಯದರ)