Text lessons in English
ಇಂಗ್ಲೀಷ್ ನಲ್ಲಿ ಪಾಠಗಳು
Text lessons in Kannada
ಕನ್ನಡದಲ್ಲಿ ಪಾಠಗಳು(ಪಠ್ಯ)
Solutions to all Exercises
ಪಠ್ಯದಲ್ಲಿನ ಎಲ್ಲಾ ಅಭ್ಯಾಸಗಳಿಗೆ ಪರಿಹಾರ
Audio lessons in Kannada
ಧ್ವನಿಮುದ್ರಿತ ಗಣಿತ ಪಾಠಗಳು
Handbook on definition and formulas
ಗಣಿತ ಸೂತ್ರ ಮತ್ತು ವ್ಯಾಖ್ಯೆಗಳ ಕೈಪಿಡಿ
Download All lessons
ಎಲ್ಲಾ ಪಾಠಗಳ ಡೌನ್ ಲೋಡ್
Maths Response Center
ನಿಮ್ಮ ಸಂದೇಹಗಳಿಗೆ ಫೋನ್ ಮೂಲಕ ಪರಿಹಾರ
Our Other Projects
ನಮ್ಮ ಇತರ ಯೋಜನೆಗಳು
This site is for teaching of Mathematics free for students of class 8 to 10.
THIS SITE IS DEDICATED TO.
1. Numerous unknown Indian Mathematicians whose contribution to mankind has been 0 and decimal numbering system.
2.
Aryabhata (476AD) who gave the value of nearer to 4 decimal places and also said that this is an approximate value (suggesting that it is an irrational number). |
3.Bhaskaracharya (1160AD) who introduced Algebra through his work
'Siddhanta Shiromani' with sections 'Leelavati' on Arithmatic, 'Bijaganita' on Algebra, 'Goladhyaya' on Geometry and
'Grahaganita' on Astronomy.
(Click here for details)
|
4.Many of my teachers who taught me Mathematics.
Somayaji K V R (
freeganita@gmail.com )
Strong foundation in mathematics is necessary for achieving excellence in any field, more so in science and engineering fields. It is a challenge for most of the students to score good marks in Mathematics.
In that respect, High school education is an important stage in an individual's life. If that has to be successful, the teachers should not only be very knowledgeable but they should also be good at delivering lectures. We should accept the fact that there can only be few teachers of that caliber.
To address the issue of quality amd consistancy an attempt has been made here to teach mathematics by way of reasoning in a interesting way, so that the questioning attitude is inculcated in the early stages of learning.
In general, we expect governments to address all the issues, however we believe that efforts of individuals will go a long way in strengthening the hands of governments and hence this private initiative. To make sure that this benefit reaches all students, particularly those who are under privileged, this service is provided free of charges.
This mode of delivery for teaching Mathematics does not eliminate the need for classroom teaching. This can only be supplementary to what is taught in classes. The topics covered are as per the syllabus prescribed by CBSE, ICSE and five State Education boards for classes 8th to 10th.
Our focus is to help those students whose proficiency is average in Mathematics. Hence, our aim will be achieved if we can help students score at least 5% more marks in mathematics and more and more students pursue career in basic science streams.
For non commercial use, Individuals/organisations can copy/ download/ distribute the contents of this website, without any restrictions.
For commercial use, please contact us for approval.
ಇದು ಗಣಿತಾಭ್ಯಾಸ ಮಾಡುತ್ತಿರುವ ಪ್ರೌಢಶಾಲೆಯ ಮಕ್ಕಳ ಅಧ್ಯಯನಕ್ಕೆ ಸಹಕಾರಿಯಾಗಿರುವ ಉಚಿತ ವ್ಯವಸ್ಥೆ..
ಅರ್ಪಣೆ
-
ಮನುಕುಲಕ್ಕೆ ಶೂನ್ಯ ಮತ್ತು ದಶಮಾಂಶ ಪದ್ಧತಿಯನ್ನು ಪರಿಚಯಿಸಿದ ಅನಾಮಧೇಯ ಗಣಿತ ಶಾಸ್ತ್ರಜ್ಞರಿಗೆ
-
"ಪೈ" ಬೆಲೆಯನ್ನು ಮೊತ್ತ ಮೊದಲಿಗೆ 4 ದಶಮಾಂಶ ಸ್ಥಾನಗಳಿಗೆ ಕಂಡುಹಿಡಿದು, ಅದೊಂದು ಅಭಾಗಲಬ್ಧ ಸಂಖ್ಯೆಯೆಂದು ಸಾರಿದ ಗಣಿತ ವಿದ್ವಾಂಸ ಆರ್ಯಭಟರಿಗೆ(ಕ್ರಿ.ಶ 476)
-
ತಮ್ಮ ಮೇರು ಗ್ರಂಥ "ಸಿದ್ಧಾಂತಶಿರೋಮಣಿ" ಯಲ್ಲಿ ಅಂಕಗಣಿತ, ಬೀಜಗಣಿತ, ರೇಖಾಗಣಿತ, ಖಗೋಳಶಾಸ್ತ್ರಗಳನ್ನು ಕ್ರಮವಾಗಿ ’ಲೀಲಾವತಿ’, ’ಬೀಜಗಣಿತ’, ’ಗೋಳಾಧ್ಯಾಯ’ ಮತ್ತು ’ಗೃಹಗಣಿತ’ ಎನ್ನುವ ಪುಸ್ತಕಗಳಲ್ಲಿ ವಿವರಿಸಿದ ಕರ್ಣಾಟಕದ ಗಣಿತ ವಿದ್ವಾಂಸ ಭಾಸ್ಕರಾಚಾರ್ಯರಿಗೆ( ಕ್ರಿ ಶ 1160)
(ವಿವರಗಳಿಗೆ ಕ್ಲಿಕ್ಕಿಸಿ)
-
ನನಗೆ ಗಣಿತ ಕಲಿಸಿದ ಅಧ್ಯಾಪಕರುಗಳಿಗೆ
ಕೋಟ ರಾಜಶೇಖರ ಸೋಮಯಾಜಿ
ಪ್ರೌಢಶಾಲೆಯ ಶಿಕ್ಷಣಾವಧಿಯೆಂಬುದು ವಿದ್ಯಾರ್ಥಿಯ ಬದುಕಿನಲ್ಲಿ ಬಹು ದೊಡ್ಡ ಕಾಲ ಘಟ್ಟ. ಅದು ಯಶಸ್ವಿಯಾಗಬೇಕಾದರೆ ಕಲಿಸುವ ಅಧ್ಯಾಪಕನಲ್ಲಿ ಅಸಾಧಾರಣ ಜ್ಞಾನ ಇರಬೇಕು. ಅರ್ಥವಾಗುವಂತೆ ಕಲಿಸುವ ಕೌಶಲ ಇರಬೇಕು.ಅಂತಹ ಗುಣಮಟ್ಟದ ಅಧ್ಯಾಪಕರ ಸಂಖ್ಯೆ ಕಡಿಮೆ. ನಮ್ಮ ಬಹುತೇಕ ವಿದ್ಯಾರ್ಥಿಗಳಿಗೆ ಗಣಿತವು ಸುಲಭ ಗ್ರಾಹ್ಯವಲ್ಲ. ಅಧಿಕ ಅಂಕ ಗಣಿಕೆ ಅವರಿಗೆ ಸವಾಲೇ ಆಗಿದೆ. ಈ ಹಿನ್ನೆಲೆಯಲ್ಲಿ ಒಂದು ಹೊಸಕಲಿಕೆಯ ಕ್ರಮವನ್ನು ಅಭಿವೃದ್ಧಿ ಪಡಿಸಲಾಗಿದೆ. ಯಾವುದನ್ನು ಕಲಿಯಬೇಕಾದರೂ, ಅದರಲ್ಲೂ ವಿಜ್ಞಾನದ ವಿವಿಧ ವಿಭಾಗಗಳಲ್ಲಿ ಪರಿಣತಿಗಾಗಿ ಗಣಿತದ ಭದ್ರ ತಳಹದಿ ಅಗತ್ಯ. ಸಾಮಾನ್ಯವಾಗಿ ಸರಕಾರವೇ ನಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸೆಬೇಕೆಂದು ನಾವು ಬಯಸುತ್ತೇವೆ. ಆದರೆ ಪ್ರತಿಯೋರ್ವನೂ ಸರಕಾರದ ಜೊತೆಗೆ ಕೈ ಸೇರಿಸಿದರೆ ಶಿಕ್ಷಣ ಕ್ಶೇತ್ರದಲ್ಲಿಯೂ ಬೇಕಾದಷ್ಟು ಸಾಧಿಸಬಹುದು ಎನ್ನುವುದು ನಮ್ಮ ನಂಬಿಕೆ. ಈ ದಿಸೆಯಲ್ಲಿ ಇದೊಂದು ಪುಟ್ಟ ಖಾಸಗಿ ಪ್ರಯತ್ನ. ನಮ್ಮ ಗ್ರಾಮೀಣ ಪ್ರದೇಶದ ಹಾಗೂ ಅನುಕೂಲಸ್ಥರಲ್ಲದ ವಿದ್ಯಾರ್ಥಿಗಳ ಪ್ರಯೋಜನಕ್ಕಾಗಿ ಇದೊಂದು ಶುಲ್ಕ ರಹಿತ ವ್ಯವಸ್ಥೆ ಆಗಿರುತ್ತದೆ. ಶಾಲೆಯಲ್ಲಿ ಕಲಿಯುವುದಕ್ಕೆ ಇದು ಪೂರಕ ವ್ಯವಸ್ಥೆಯಾಗಿರುತ್ತದೆಯೇ ಹೊರತು, ಅದಕ್ಕೆ ಪರ್ಯಾಯವಾಗಿ ಅಲ್ಲ ಎಂಬುದನ್ನು ಇಲ್ಲಿ ಒತ್ತಿ ಹೇಳಬೇಕಾಗುತ್ತದೆ ಇಲ್ಲಿ ಹೊಸ ವಿಷಯ(ಪದ/ಪಾಠ) ವನ್ನು ಪರಿಚಯಿಸುವಾಗ ಸಮಾನಾರ್ಥಕ ಇಂಗ್ಲೀಷ್ ಪದಗಳನ್ನು ಜೊತೆಯಲ್ಲಿ ಕೊಟ್ಟಿದೆ. ಇದರಿಂದ ಕನ್ನಡ ಮಾಧ್ಯಮದಿಂದ ಮುಂದಿನ ತರಗತಿಗಳಲ್ಲಿ ಇಂಗ್ಲೀಷ್ ಮಾಧ್ಯಮಕ್ಕೆ ಬದಲಾಯಿಸಿಕೊಂಡವರಿಗೆ ಆ ಮಾಧ್ಯಮದಲ್ಲಿ ಕಲಿಯಲು ಸುಲಭವಾಗಲಿದೆ. ಕನ್ನಡದಲ್ಲಿ ಇರುವ ಪಾಠಗಳು ಇಂಗ್ಲೀಷ್ ನಲ್ಲೂ ಇವೆ. ಆದುದರಿಂದ ಹೆಚ್ಚು ಕಲಿಯಬೇಕೆಂಬ ಆಸಕ್ತಿಯಿರುವ ವಿದ್ಯಾರ್ಥಿಗಳು ಇಂಗ್ಲೀಷ್ ಪಾಠದ ಕೊನೆಯಲ್ಲಿ ಇರುವ ’ಅಧಿಕ ವಿಷಯ’ ಗಳನ್ನು ಅಭ್ಯಸಿಸಬಹುದು. ಇಂಗ್ಲೀಷ್ ಪಾಠಗಳು CBSE/ICSE ಮತ್ತು ಇತರ ರಾಜ್ಯಗಳ ಪಠ್ಯಕ್ರಮಗಳನ್ನು ಒಳಗೊಂಡಿವೆ. ಇದರಿಂದಾಗಿ ಕರ್ಣಾಟಕದ ವಿದ್ಯಾರ್ಥಿಗಳು NTSE ಮತ್ತು ಇತರ ಸಂಸ್ಠೆಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಧಿಕ ಅಂಕ ಗಳಿಸಲು ಸಹಾಯವಾಗುತ್ತದೆ ಎಂದು ನಂಬಿರುತ್ತೇವೆ.
ಮುನ್ನುಡಿ
ಕೆಲವರಲ್ಲಿ ಗಣಿತ ’ಕಬ್ಬಿಣದ ಕಡಲೆ’ ಎನ್ನುವ ಅಭಿಪ್ರಾಯವಿದೆ. ಆ ಅಭಿಪ್ರಾಯ ಸರಿಯಲ್ಲ. ಕಾಯಿಸಿದಾಗ ಕಬ್ಬಿಣವೂ ಕೂಡ ಮೃದುವಾಗುವಂತೆ, ನಿರಂತರ ಅಭ್ಯಾಸದಿಂದ ಗಣಿತವೂ ಕೂಡ ಸುಲಭವಾಗುತ್ತದೆ.. ಶಾಲಾ ವಿದ್ಯಾರ್ಥಿಗಳಿರಲಿ, ಮನೆಯಲ್ಲಿಯೇ ಕುಳಿತು ಸ್ವತಂತ್ರವಾಗಿ ಅಭ್ಯಾಸ ಮಾಡಿ ಪರೀಕ್ಷೆಗೆ ಖಾಸಗಿಯಾಗಿ ಹಾಜರಾಗ ಬಯಸುವವರಿರಲಿ, ಅವರಿಗೆ ಗಣಿತ ಕಲಿಕೆ ಸುಲಭಗೊಳಿಸಲು ಶ್ರೀಯುತ ಸೋಮಯಾಜಿಯವರು ದಾರಿಯೊಂದನ್ನು ಹುಡುಕಿದ್ದಾರೆ. ಅದೇ ತರಗತಿ 8,9,10
ರ ಗಣಿತ ಪಠ್ಯವಸ್ತುವಿಗೆ ಸಂಬಂಧಿಸಿದ ವೆಬ್ ಸೈಟ್. ಆಂಗ್ಲ ಮಾಧ್ಯಮದಲ್ಲಿರುವ ವೆಬ್ ಸೈಟ್ ನ ಪ್ರಯೋಜನ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೂ ಸಿಗುವಂತೆ ಮಾಡುವ ಹಂಬಲದಿಂದ ಆಂಗ್ಲ ಭಾಷೆಯಲ್ಲಿರುವ ಆ ಪಾಠಗಳನ್ನು ಅವರು ಕನ್ನಡದಲ್ಲಿ ಅನುವಾದಿಸಬಯಸಿದರು. ಆ ಕೆಲಸ ನನ್ನಿಂದಾಗಬೇಕೆಂದು ಕೇಳಿಕೊಂಡಾಗ, ಗಣಿತದ ಮೇಲಿನ ಅಭಿಮಾನದಿಂದ, ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ನಾನು ಸಂತೋಷದಿಂದ ಒಪ್ಪಿ ಅದನ್ನು ಮಾಡಿದೆ. ಅದರಿಂದಾಗಿ ಅನೇಕರಿಗೆ ಉಪಯೋಗವಾಗುವಂತಾದಲ್ಲಿ ಅವರ ಉದ್ದೇಶವೂ, ನನ್ನ ಪ್ರಯತ್ನವೂ ಸಾರ್ಥಕ. ಈ ಪಾಠಗಳಲ್ಲಿ ಪ್ರತೀ ವಿಷಯವನ್ನೂ ವಿವರವಾಗಿ ಚರ್ಚಿಸಲಾಗಿದೆ. ಆ ವಿವರ ಮಾರ್ಗದರ್ಶಿ(ಗೈಡ್) ಯಲ್ಲಿರುವಂತೆ ಇರದೆ ನಿಜವಾದ ಪಾಠದಲ್ಲಿರುವಂತಿದೆ. ಹಾಗಾಗಿ ಕಂಪ್ಯೂಟರ್ ನಲ್ಲಿ ಈ ಪಾಠಗಳನ್ನು ನೋಡುತ್ತಿರುವಾಗ ವಿದ್ಯಾರ್ಥಿಗೆ ತಾನೊಂದು ಗಣಿತ ತರಗತಿಯಲ್ಲಿ ಇದ್ದೇನೆ ಎಂದು ಅನಿಸದಿರದು. ಅಷ್ಟು ಚೆನ್ನಾಗಿ ಇಲ್ಲಿ ಗಣಿತ ವಿಚಾರಗಳನ್ನು ವಿವರಿಸಲಾಗಿದೆ. ಹಲವು ಲೆಕ್ಕಗಳನ್ನು ಮಾಡುವ ಸುಲಭ ವಿಧಾನಗಳನ್ನೂ ಇಲ್ಲಿ ತಿಳಿಸಲಾಗಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಇದು ತುಂಬಾ ಉಪಯುಕ್ತವಾಗುವುದರಲ್ಲಿ ಸಂದೇಹವಿಲ್ಲ. ಅಂತೂ ಹೆಚ್ಚು ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆದು, ಗಣಿತದಲ್ಲಿ ಆಸಕ್ತಿಯನ್ನು ಹೆಚ್ಚಿಸಿಕೊಂಡು ಉತ್ತಮ ಅಂಕಗಳನ್ನು ಗಳಿಸುವಂತಾಗಲಿ ಎಂಬುದೇ ನನ್ನ ಹಾರೈಕೆ.
ಪಿ ವಿಶ್ವೇಶರ ಹಂದೆ, ಬಿ ಎಸ್ ಸಿ, ಬಿ ಎಡ್.
ಸಹಾಯಕ ಅಧ್ಯಾಪಕ, ವಿವೇಕ ಪದವಿ ಪೂರ್ವ ವಿದ್ಯಾಲಯ, ಕೋಟ(ಉಡುಪಿ ಜಿಲ್ಲೆ)