7.2 ಎರಡು ಬಿಂದುಗಳ ನಡುವಿನ ದೂರ ಮತ್ತು ಭಾಗ ಪ್ರಮಾಣ ಸೂತ್  (Distance between 2 points and Section Formula):

 

7.2.1 ದತ್ತ ಅನುಪಾತದಲ್ಲಿ ರೇಖೆಯನ್ನು ವಿಭಜಿಸುವುದು:

10 cms ಉದ್ದವಿರುವ ಒಂದು ರೇಖೆಯನ್ನು ನಿಖರವಾಗಿ ಅಳತೆಪಟ್ಟಿ ಉಪಯೋಗಿಸಿ   3:4 ರ ಅನುಪಾತದಲ್ಲಿ ವಿಭಾಗಿಸಲು ಸಾಧ್ಯವೇ?.  ಹೀಗೆ ಮಾಡಲು  ಈ ರೇಖೆಯನ್ನು ಸಮನಾಗಿ 7  ಭಾಗ ಮಾಡಿ ಅದರಲ್ಲಿ ರೇಖೆಯ ಆದಿಭಾಗದಿಂದ ಮೊದಲ ಮೂರು ಭಾಗ ಮತ್ತು ನಂತರದ  4 ಭಾಗ ತೆಗೆದುಕೊಳ್ಳಬೇಕಾಗುತ್ತದೆ. ಆ ಭಾಗಗಳನ್ನು  ಗುರುತಿಸಲು *3 ರ ಬೆಲೆಯನ್ನು ತೆಗೆದುಕೊಳ್ಳಬೇಕು.  *3 ರ ಬೆಲೆ 4.28571… . ಸಹಜವಾಗಿ  ಈ ಬಿಂದುವನ್ನು  ರೇಖೆಯ ಮೇಲೆ ಅಳತೆಪಟ್ಟಿ ಉಪಯೋಗಿಸಿ ನಿಖರವಾಗಿ  ಗುರುತಿಸಲು ಸಾಧ್ಯವಿಲ್ಲ. ಆದರೆ  ಜ್ಯಾಮಿತಿಯ ಆಧಾರದಿಂದ ನಿಖರವಾಗಿ ಗುರುತಿಸಲು ಸಾಧ್ಯ.

 

ರೇಖಾಖಂಡವನ್ನು  m:n ಅನುಪಾತದಲ್ಲಿ ವಿಭಾಗಿಸುವ ಸಾಮಾನ್ಯ ಕ್ರಮ: 

ಸಂ

ಹಂತಗಳು

ಚಿತ್ರ

1

AB ಎನ್ನುವುದು ಒಂದು ರೇಖಾಖಂಡವಾಗಿರಲಿ(11CM  ಉದ್ದ ಇದೆ ಎನ್ನೋಣ). ಇದನ್ನು m:n ಅನುಪಾತದಲ್ಲಿ(ಉದಾಹರಣೆಗೆ 3:2) ವಿಭಾಗಿಸಬೇಕು

 

 

 

2

AB ಯೊಂದಿಗೆ ಲಘುಕೋನ ಆಗುವಂತೆ AX ರೇಖೆ ಎಳೆಯಿರಿ(ಉದಾ 30 ಅಥವಾ 45o)

3

AX ರೇಖೆಗೆ ಸಮಾನಾಂತರ ರೇಖೆ ಎಳೆಯುವ ಕ್ರಮ:

(i) ಕೈವಾರದ ಸಹಾಯದಿಂದ ಸೂಕ್ತ ತ್ರಿಜ್ಯದ ಅಳತೆಯಿಂದ ಕಂಸ PQ ವನ್ನು A ಯಿಂದ AX ಮೇಲೆ ಎಳೆಯಿರಿ.

(ii) ಅದೇ ಅಳತೆಯ ತ್ರಿಜ್ಯದಿಂದ ಕಂ  RS ನ್ನು B ಯಿಂದ BA ಮೇಲೆ ಎಳೆಯಿರಿ.

(iii) PQ ಅಳತೆಯ ತ್ರಿಜ್ಯದಿಂದ ಕಂಸ RS ನ್ನು T ನಲ್ಲಿ ಕಡಿಯಿರಿ

(iV) B ಮತ್ತು T ಯನ್ನು ಜೋಡಿಸಿ Y ತನಕ ವಿಸ್ತರಿಸಿ.

BY  AX  ಗೆ ಸಮಾನಾಂತರವಾಗಿರುವುದನ್ನು ಗಮನಿಸಿ. 

4

AA1=A1A2=A2A3=A3A4=…Am-1Am ಆಗಿರುವಂತೆ ಸಹಾಯದಿಂದ AX ರೇಖೆಯನ್ನು     ‘m’  ಂಖ್ಯೆಗಳ ಸಮನಾದ ಭಾಗಗಳಾಗುವಂತೆ ಬಿಂದುಗಳನ್ನು AX ಮೇಲೆ ಗುರುತಿಸಿ(ಉದಾ: m=3).

5

ಅದೇ ಅಳತೆಯಿಂದ(=AA1) BB1=B1B2=B2B3=B3B4=…Bn-1Bn(=AA1) ಆಗಿರುವಂತೆ  BY ರೇಖೆಯನ್ನು ‘n’ ಸಂಖ್ಯೆಗಳ ಸಮನಾದ ಭಾಗಗಳಾಗುವಂತೆ ಬಿಂದುಗಳನ್ನು BY ಮೇಲೆ ಗುರುತಿಸಿ(ಉದಾಹರಣೆಯಲ್ಲಿ n= 2).

6

Am ಮತ್ತ  Bn ಗಳನ್ನು ಸೇರಿಸಿ(ಉದಾಹರಣೆಯಲ್ಲಿ A3 ಮತ್ತು B2).  ಈ ರೇಖೆಯು AB ಯನ್ನು  C ಯಲ್ಲಿ ಕಡಿಯಲಿ. ಅಗ AC:CB=m:n(ಉದಾಹರಣೆಯಲ್ಲಿ 3:2).  

7

ಸಾಧನೆ:

AAmC ಮತ್ತ  BBnC ಗಳಲ್ಲಿನ  ಅನುರೂಪ ಕೋನಗಳು ಸಮ.   

AAmCBBnC (ಕೋ.ಕೋ.ಕೋ. ಸ್ವಯಂಸಿದ್ಧ)

=( ಅನುರೂಪ ಬಾಹುಗಳು ಸಮಾನುಪಾತದಲ್ಲಿ)

ಆದರೆ = ( ರಚನೆಯಂತೆ)( ಉದಾಹರಣೆಯಲ್ಲಿ )

=

 

ಗಮನಿಸಿ : ಉದಾಹರಣೆಯಲ್ಲಿ AB=11Cm;  m=3 ಮತ್ತು n=2 ಮತ್ತು Am= A3  ಮತ್ತು Bn= B2


ದತ್ತ ತ್ರಿಕೋನಕ್ಕೆ ಸಮರೂಪವಾಗಿದ್ದು ಅನುರೂಪಬಾಹುಗಳ   ರಷ್ಟು ಇರುವ ತ್ರಿಕೋನದ ರಚನೆಯ ಸಾಮಾನ್ಯ ವಿಧಾನ: 

ಸಂ

ಹಂತಗಳು

ಚಿತ್ರ

1

 ABC ದತ್ತ ತ್ರಿಕೋನವಾಗಿರಲಿ. ಇದರ  ಬಾಹುಗಳ    ರಷ್ಟು ಇರುವ ಸಮರೂಪಿ ತ್ರಿಕೋನ ರಚಿಸಬೇಕಾಗಿದೆ. 

 

2

BC ಯ ಕೆಳಭಾಗದಲ್ಲಿ  ಇದಕ್ಕೆ ಲಘುಕೋನ ಏರ್ಪಡುವಂತೆ (30ಅಥವಾ 45o  )  BX ರೇಖೆಯನ್ನು ಎಳೆಯಿರಿ.   

3

BB1=B1B2=B2B3=B3B4=…Bx-1Bx ಆಗುವಂತ  BX  ರೇಖೆಯನ್ನು ವಿಭಾಗಿಸಿ.

ಇಲ್ಲಿ x= (‘m’ ಮತ್ತು n’  ಗಳಲ್ಲಿ  ದೊಡ್ಡ ಸಂಖ್ಯೆ). 

 

ಸಂದರ್ಭ 1: <1 ;m<n:  ಆಗ x=n  (ಉದಾಹರಣೆಯಾಗಿ  ರಷ್ಟು ಇರುವ ತ್ರಿಕೋನದ ರಚನೆ)

  1. Bx (=Bn) ನ್ನು C ಜೊತೆಗೆ ಸೇರಿಸಿ. 
  2. Bm ನಿಂದ BxC  ೆ ಸಮಾನಾಂತರ ರೇಖೆ ಎಳೆಯಿರಿ. ಅದು  BC ಯನ್ನು Q ನಲ್ಲಿ ಕಡಿಯಲಿ.
  3. Q ನಿಂ  AC ಗೆ  ಸಮಾನಾಂತರ ರೇಖೆ ಎಳೆಯಿರಿ. ಅದು  BA ಯನ್ನು P ನಲ್ಲಿ ಕಡಿಯಲಿ

 BPQ ಎನ್ನುವುದ  BAC  ಬಾಹುಗಳ  ರಷ್ಟು ಇರುವ ತ್ರಿಕೋನ. 

BPQ ವು BAC ಗಿಂತ  ಚಿಕ್ಕದು ಆಗಿರುವುದನ್ನು ಗಮನಿಸಿ

 

 

ಸಂದರ್ಭ 2: >1 m>n: then x=m (ಉದಾಹರಣೆಯಾಗಿ  ರಷ್ಟು ಇರುವ ತ್ರಿಕೋನದ ರಚನೆ)

  1. Bn ನ್ನು C ಜೊತೆಗೆ ಸೇರಿಸಿ
  2. Bx(=Bm) ನಿಂದ BnC ಗೆ ಸಮಾನಾಂತರ ರೇಖೆ ಎಳೆಯಿರಿ. ಅದು ವೃದ್ಢಿಸಿದ BC ಯನ್ನು Q ನಲ್ಲಿ ಕಡಿಯಲಿ
  1. Q ನಿಂದ AC ಗೆ ಸಮಾನಾಂತರ ರೇಖೆ ಎಳೆಯಿರಿ. ಅದು ವೃದ್ಢಿಸಿದ BA ಯನ್ನು P ನಲ್ಲಿ ಕಡಿಯಲಿ

 BPQ ಎನ್ನುವುದು  BAC  ಬಾಹುಗಳ  ರಷ್ಟು ಇರುವ ತ್ರಿಕೋನ

ರಚಿಸಿದ ತ್ರಿಕೋನವು  <1 ಆದಾಗ ದತ್ತ ತ್ರಿಕೋನಕ್ಕಿಂತ ಚಿಕ್ಕದು ಆಗಿದ್ದು >1 ಆದಾಗ ದತ್ತ ತ್ರಿಕೋನಕ್ಕಿಂತ ದೊಡ್ಡದು   ಆಗಿರುವುದನ್ನು ಗಮನಿಸಿ.

 

7.2.2 ಎರಡು ಬಿಂದುಗಳ ನಡುವಿನ ದೂರ:  ಬಿಂದುಗಳನ್ನು ನಕ್ಷಾಹಾಳೆಯ ಮೇಲೆ ಗುರುತಿಸುವುದನ್ನು ನಾವು ಈಗಾಗಲೇ ಕಲಿತಿದ್ದೇವೆ. ಆಗಾಗ ಎರಡು ಬಿಂದುಗಳ ನಡುವಿನ ದೂರವನ್ನು( ಬಿಂದುಗಳನ್ನು ನೇರವಾಗಿ ಸೇರಿಸುವ ರೇಖಾಕಂಡದ ಉದ್ದ)  ಕಂಡುಹಿಡಿಯಬೇಕಾಗುತ್ತದೆ.

ಯಾವುದೇ ಬಿಂದುವನ್ನು x ಮತ್ತು y ನಿರ್ದೇಶಾಂಕಗಳ ಮೂಲಕ ಗುರುತಿಸಬಹುದು ಎಂದು ಕಲಿತಿದ್ದೇವೆ

P (x1,y1) ಮತ್ತು Q (x2,y2) ಎರಡು ಬಿಂದುಗಳಾಗಿರಲಿ.

ನಾವು PQ ರೇಖಾಖಂಡದ ಉದ್ದವನ್ನು ಕಂಡುಹಿಡಿಯಬೇಕಾಗಿದೆ.

P ಮತ್ತು Q ಗಳಿಂ  X ಅಕ್ಷಕ್ಕೆ PA ಮತ್ತು QB ಎನ್ನುವ ಲಂಬಗಳನ್ನು ಕ್ರಮವಾಗಿ ಎಳೆಯಿರಿ.

OA = x1 ಮತ್ತು OB = x2 ಎನ್ನುವುದನ್ನು ಗಮನಿಸಿ

P ಮತ್ತು Q ಗಳಿಂ  Y ಅಕ್ಷಕ್ಕೆ PC ಮತ್ತು QD ಎನ್ನುವ ಲಂಬಗಳನ್ನು ಕ್ರಮವಾಗಿ ಎಳೆಯಿರಿ.

OC = y1 ಮತ್ತು OD = y2  ಎನ್ನುವುದನ್ನು ಗಮನಿಸಿ.

CP ಯನ್ನು ವಿಸ್ತರಿಸಿದಾಗ ಅದು BQ ಯನ್ನು R ನಲ್ಲಿ ಸಂಧಿಸಲಿ.

PR = OB-OA = x2-x1   QR = OD-OC = y2-y1

 

PRQ ಎನ್ನುವುದು ಲಂಬಕೋನತ್ರಿಕೋನವಾಗಿರುವುದರಿಂದ ಪೈಥಾಗೊರಸ್ ಪ್ರಮೇಯದಂತೆ

PQ2 = PR2+RQ2= (x2-x1)2+ (y2-y1)2 PQ =  {(x2-x1)2+ (y2-y1)2}

ಇದನ್ನೇ ದೂರದ ಸೂತ್ರ('Distance formula') ಎಂದು ಕರೆಯುತ್ತೇವೆ.

 

ಉಪಪ್ರಮೇಯ : ಒಂದು ಬಿಂದು ಮೂಲಬಿಂದು(0,0) ಆದರೆ ಸೂತ್ರ ಏನಾಗುತ್ತದೆ?

ಆಗ ಮೂಲಬಿಂದುವಿನಿಂದ O(0,0)   P (x,y) ಗೆ ಇರುವ  ದೂರ OP =  (x2+ y2)


       7.2 ಸಮಸ್ಯೆ 1: P(0,2) ಬಿಂದುವು  Q(3,k) ಮತ್ತು R(k,5)  ಬಿಂದುಗಳಿಂದ ಸಮಾನದೂರದಲ್ಲಿದ್ದರೆ  k ಯ ಬೆಲೆ ಕಂಡುಹಿಡಿ.

ಪರಿಹಾರ:

PQ =  {(3-0)2+ (k-2)2} =  (9 +k2-4k+4)

PR =  {(k-0)2+ (5-2)2} =  ( k2+9)

PQ=PR ಆಗಿರುವುದರಿಂದ

9 +k2-4k+4 = k2+9

ಇದನ್ನು ಸುಲಭೀಕರಿಸಿದಾಗ  k = 1

P(0,2) ಬಿಂದುವು Q(3,1) ಮತ್ತು R(1,5) ಬಿಂದುಗಳಿಂದ  ಸಮಾನದೂರದಲ್ಲಿದೆ.

 

7.2 ಸಮಸ್ಯೆ 2:  A(10,-18), B(3,6) ಮತ್ತು C(-5,2) ಮೂರು ಬಿಂದುಗಳಿಂದ ಉಂಟಾಗಿರುವ ತ್ರಿಕೋನದ ವಿಶೇಷತೆ ಏನು?

ಪರಿಹಾರ:

AB =  {(3-10)2+ (6-(-18))2} =  (49+ 576) =  (625) =25

AC =  {(-5-10)2+ (2-(-18))2} =  (225+ 400) =  (625) =25

BC =  {(-5-3)2+ (2-6)2} =  (64+ 16) =  (80)

 

AB=AC ಆಗಿರುವುದರಿಂದ  ದತ್ತ ಮೂರು ಬಿಂದುಗಳಿಂದ ಉಂಟಾಗಿರುವ ತ್ರಿಕೋನವು ಸಮದ್ವಿಬಾಹು  ತ್ರಿಕೋನ

 

 


7.2 ಸಮಸ್ಯೆ 3: ದೂರದ ಸೂತ್ರವನ್ನು ಉಪಯೋಗಿಸಿ  A(2,5), B(-1,2) ಮತ್ತು C(4,7) ಬಿಂದುಗಳು ಏಕ ರೇಖಾಗತ ಎಂದು ತೋರಿಸಿ.

ಸುಳಿವು: BA+AC = BC ಎಂದು ತೋರಿಸಿ

(ಆನಂತರ ಬಿಂದುಗಳನ್ನು ಸೇರಿಸಿ ಅವು  ಏಕ ರೇಖಾಗತ ಎಂದು ತೋರಿಸಿ)

 

7.2 ಸಮಸ್ಯೆ 4: ಒಂದು ತ್ರಿಕೋನ ABC ಯ ಮೂರು ಶೃಂಗಬಿಂದುಗಳು A(4,6),B(0,4) ಮತ್ತು C(6,2) ಆಗಿದ್ದರೆ  ಅದರ ಪರಿಕೇಂದ್ರದ ನಿರ್ದೇಶಾಂಕಗಳನ್ನು ಕಂಡುಹಿಡಿಯಿರಿ.

ಪರಿಹಾರ:

O(x,y) ಪರಿಕೇಂದ್ರವಾಗಿರಲಿ. ಆಗ OA=OB=OC. ಆದುದರಿಂದ OA2 = OB2 =OC2

OA2 = (x-4)2+(y-6)2=x2-8x+16+y2-12y+36

OB2 = (x-0)2+(y-4)2=x2+y2-8y+16

OC2 = (x-6)2+(y-2)2=x2-12x+36+y2-4y+4

OA2 = OB2  ಆಗಿರುವುದರಿಂದ  2x+y =9  ------(1)

OA2 = OC2 ಆಗಿರುವುದರಿಂದ x-2y = -3   ------(2)

ಮೇಲಿನ  ಎರಡು ಸಮೀಕರಣಗಳನ್ನು ಬಿಡಿಸಿದಾಗ x=3 ಮತ್ತು y=3 ಆಗಿರುತ್ತದೆ.

ಆದುದರಿಂದ O(3,3) ಯು ABC ಯ ಪರಿಕೇಂದ್ರ.

 


7.2.2 ಭಾಗ ಪ್ರಮಾಣ ಸೂತ್ರ:   

ಒಂದು ಸರಳರೇಖೆಯನ್ನು ನೀಡಿದ ಅನುಪಾತದಂತೆ ವಿಭಜಿಸುವ ಬಿಂದುವನ್ನು ಕಂಡುಹಿಡಿಯುವ ಸೂತ್ರದ ಕುರಿತು ಇಲ್ಲಿ ಕಲಿಯಲಿದ್ದೇವೆ.

 

AB ಯು A (x1, y1) ಮತ್ತು B(x2, y2) ಬಿಂದುಗಳನ್ನು ಸೇರಿಸುವ ಸರಳರೇಖೆಯಾಗಿರಲಿ.

AB  ಯನ್ನು   ನೀಡಿದ  m1:m2  ಅನುಪಾತದಲ್ಲಿ ವಿಭಜಿಸುವ  P(x, y)  ಬಿಂದುವನ್ನು ಕಂಡುಹಿಡಿಯಬೇಕಾಗಿದೆ

A, P ಮತ್ತು B ಗಳಿಂ x-ಅಕ್ಷಕ್ಕೆ ಎಳೆದ ಲಂಬಗಳು x- ಅಕ್ಷವನ್ನು  C,Q ಮತ್ತು D ಗಳಲ್ಲಿ ಕ್ರಮವಾಗಿ ಸಂಧಿಸಲಿ.

A ಮತ್ತು P ಗಳಿಂ x-ಅಕ್ಷಕ್ಕೆ ಎಳೆದ ಸಮಾನಾಂತರ ರೇಖೆಗಳು PQ ಯನ್ನು E ಯಲ್ಲಿ  ಮತ್ತು  BD ಯನ್ನು R ನಲ್ಲಿ ಸಂಧಿಸಲಿ.

P ಬಿಂದುವು AB ಯನ್ನು m1:m2 ಅನುಪಾತದಲ್ಲಿ ವಿಭಜಿಸಿದರೆ  ಆಗ AP/PB =

ಪಕ್ಕದ ಚಿತ್ರದಲ್ಲಿ ತೋರಿಸಿದಂತೆ   AEP ಮತ್ತು PRB ಸಮರೂಪಿ ತ್ರಿಕೋನಗಳು (ಕೋ.ಕೋ.ಕೋ ಸ್ವಯಂಸಿದ್ಧ).

AE/PR = PE/BR=AP/PB =                               --------à(1)

AE = OQ-OC = x-x1 ; PR = OD-OQ = x2-x;  PE = QP-QE(=CA) = y-y1 ; BR = DB-DR = y2-y     ಈ ಬೆಲೆಗಳನ್ನು  (1) ರಲ್ಲಿ ಆದೇಶಿಸಿದಾಗ

AE/PR = (x-x1)/(x2-x) = PE/PR = (y-y1)/ (y2-y) =   --------à(2)

 (x-x1)/(x2-x) = m1/m2  ;  m2(x-x1) = m1(x2-x) (ಅಡ್ಡ ಗುಣಾಕಾರ);  m2x - m2x1 = m1x2- m1x (ಬಿಡಿಸಿದಾಗ)

 x(m2+m1) = m1x2+ m2x1(ಪಕ್ಷಾಂತರದಿಂದ); x = (m1x2+ m2x1)/(m2+m1)(ಭಾಗಿಸಿದಾಗ)

ಅದೇ ರೀತಿ (2) ರಿಂದ y = (m1y2+ m2y1)/(m2+m1)

A(x1, y1) ಮತ್ತು B(x2, y2)  ಬಿಂದುಗಳನ್ನು ಸೇರಿಸುವ  ರೇಖೆಯನ್ನು P ಯು m1:m2 ಅನುಪಾತದಲ್ಲಿ  ಕಡಿಯುವುದಾದರೆ ಅದರ ನಿರ್ದೇಶಾಂಕಗಳು :

{(m1x2+ m2x1)/(m1+m2), (m1y2+ m2y1)/(m1+m2) }

 

ಇದೇ ಭಾಗ ಪ್ರಮಾಣ ಸೂತ್ರ  ‘section formula’.

 

1.   AB ರೇಖೆಯ ಮಧ್ಯಬಿಂದುವಿ(:= 1:1) ನಿರ್ದೇಶಾಂಕಗಳು ಯಾವುವು?

ಅದು {(x2+x1)/2), (y2+ y1)/2}:  (ಮಧ್ಯ ಬಿಂದು ಸೂತ್ರ)

ಗಮನಿಸಿ:  ಮೇಲಿನ ಸೂತ್ರವನ್ನು ಉಪಯೋಗಿಸಿ ಯಾವುದೇ ಚತುರ್ಭುಜದ ಮಧ್ಯಬಿಂದುಗಳನ್ನು ಸೇರಿಸಿದಾಗ ದೊರಕುವ ಚತುರ್ಭುಜವು ಸಮಾನಾಂತರ ಚತುರ್ಭುಜ ಎಂದು ಸಾಧಿಸಬಹುದು            

2. ಒಂದು ರೇಖೆಯನ್ನು   k:1 ಅನುಪಾತದಲ್ಲಿ ವಿಭಜಿಸುವ ಬಿಂದುವಿನ ನಿರ್ದೇಶಾಂಕಗಳು ಯಾವುವು?

ಅವು : {(kx2+x1)/(k+1), (ky2+ y1)/(k+1)}

ಗಮನಿಸಿ: ಅನುಪಾತ :ನ್ನು:1 ಎಂದೂ ಬರೆಯಬಹುದು. ಇನ್ನೂ ಸುಲಭವಾಗಿ k:1 ಆಗ k=.

 

7.2 ಸಮಸ್ಯೆ 5:  A (15,5) ಮತ್ತು B(9,20) ಗಳನ್ನು ಸೇರಿಸುವ ರೇಖೆಯ ಮೇಲಿನ P(11,15) ಬಿಂದುವು ಆ ರೇಖೆಯನ್ನು ಯಾವ  ಅನುಪಾತದಲ್ಲಿ ವಿಭಜಿಸಿದೆ?

ಪರಿಹಾರ:

P(x,y) ಯು AB ಯನ್ನು k:1  ಅನುಪಾತದಲ್ಲಿ ವಿಭಜಿಸಲಿ.

x1=15, y1=5, x2=9, y2=20,x=11, y=15

ಮೇಲೆ ತಿಳಿಸಿದಂತೆ, ಒಂದು ರೇಖೆಯನ್ನು   k:1 ಅನುಪಾತದಲ್ಲಿ ವಿಭಜಿಸುವ ಬಿಂದುವಿನ ನಿರ್ದೇಶಾಂಕಗಳು {(kx2+x1)/(k+1), (ky2+ y1)/(k+1)}

 x = (kx2+x1)/(k+1) ಮತ್ತು  y = (ky2+ y1)/(k+1)

 x = 9k+15/(k+1)

11 = 9k+15/(k+1)( x=11 ದತ್ತ)

 11k+11 = 9k+15

2k=4 or k=2

ಆದುದರಿಂದ P  ಯು ರೇಖೆಯನ್ನು  2:1 ಅನುಪಾತದಲ್ಲಿ ವಿಭಜಿಸಿದೆ.

 

 

 


7.2 ಸಮಸ್ಯೆ 6:  A(6,-2) ಮತ್ತು B(-8,10) ಗಳನ್ನು ಸೇರಿಸುವ ರೇಖೆಯನ್ನು ಸರಿಯಾಗಿ ಮೂರು ಭಾಗ ಮಾಡುವ ಮಧ್ಯದಲ್ಲಿನ ಬಿಂದುಗಳ ನಿರ್ದೇಶಾಂಕಗಳನ್ನು ಕಂಡುಹಿಡಿ.

ಪರಿಹಾರ:

AP=PQ=QB (1:1:1) ಎಂದಿರುವಂತೆ P ಮತ್ತು Q ಗಳ ನಿರ್ದೇಶಾಂಕಗಳನ್ನು ಕಂಡುಹಿಡಿಯಬೇಕಾಗಿದೆ.

ಈ ಸಮಸ್ಯೆಯನ್ನು ಎರಡು ಹಂತದಲ್ಲಿ ಬಿಡಿಸಬೇಕು:

1.  AP:PB = 1:2 ಎಂದಿರುವಂತೆ  P(x1,y1) ಕಂಡುಹಿಡಿ.

2.  AQ:QB = 2:1 ಎಂದಿರುವಂತೆ Q(x2,y2) ಕಂಡುಹಿಡಿ.

ಅವು P (4/3,2) ಮತ್ತು Q (-10/3,6).

 

 

 


7.2 ಸಮಸ್ಯೆ 7:   ತ್ರಿಕೋನ ABC ಯಲ್ಲಿ  D(-2,5) ಯು ABಮಧ್ಯ ಬಿಂದು. E(2,4) ಯು BC ಮಧ್ಯ ಬಿಂದು  ಮತ್ತು F(-1,2) ಯು AC  ಮಧ್ಯ ಬಿಂದು. A, B ಮತ್ತು C ಬಿಂದುಗಳ ನಿರ್ದೇಶಾಂಕಗಳನ್ನು ಕಂಡುಹಿಡಿ.

ಪರಿಹಾರ:

A =(x1,y1), B=(x2,y2) ಮತ್ತು C=(x3,y3) ಆಗಿರಲಿ.

D(-2,5) ಯು ABಮಧ್ಯ ಬಿಂದು ಆಗಿರುವುದರಿಂದ   (x1+x2)/2 = -2 ಮತ್ತು (y1+y2)/2 = 5 ---(1)

E(2,4) ಯು BC  ಮಧ್ಯ ಬಿಂದು ಆಗಿರುವುದರಿಂದ  (x2+x3)/2 = 2 ಮತ್ತು (y2+y3)/2 = 4   ----(2)

F(-1,2) ಯು AC  ಮಧ್ಯ ಬಿಂದು ಆಗಿರುವುದರಿಂದ  (x1+x3)/2 = -1 ಮತ್ತು (y1+y3)/2 = 2  ---(3)

ಈ ಮೂರೂ  ಸಮೀಕರಣಗಳನ್ನು ಬಿಡಿಸಿದಾಗ x1= -5, x2=1, x3= 3 ಮತ್ತು y1= 3, y2=7, y3= 1

ಮೂರು ಶೃಂಗಬಿಂದುಗಳು: A(-5,3), B(1,7) ಮತ್ತು C(3,1).

 

           7.2.4 ತ್ರಿಕೋನದ ಶೃಂಗಗಳ ನಿರ್ದೇಶಾಂಕಗಳನ್ನು ನೀಡಿದಾಗ ತ್ರಿಭುಜದ ವಿಸ್ತೀರ್ಣ

 

ಪಕ್ಕದ ಚಿತ್ರದಲ್ಲಿ  A (x1, y1), B(x2, y2) ಮತ್ತು C(x3, y3) ಗಳು ತ್ರಿಬುಜದ  ಬಾಹುಗಳ ನಿರ್ದೇಶಾಂಕಗಳಾಗಿರಲಿ. 

BL, AM ಮತ್ತು CN ಗಳು B, A ಮತ್ತು C ಶೃಂಗಗಳಿಂದ x  ಅಕ್ಷಕ್ಕೆ ಎಳೆದ  ಲಂಬಗಳಾಗಿರಲಿ.

 OL = x2, OM = x1, ON = x3 ಮತ್ತು  BL = y2, AM = y1, CN = y3

ABC ವಿಸ್ತೀರ್ಣ = ತ್ರಾಪಿಜ್ಯ BLMA ವಿಸ್ತೀರ್ಣ + ತ್ರಾಪಿಜ್ಯ AMNC ವಿಸ್ತೀರ್ಣ - ತ್ರಾಪಿಜ್ಯ BLNC ವಿಸ್ತೀರ್ಣ

=  (BL+AM)LM +  (AM+NC)MN -  (BL+NC)LN

=  (y2+ y1) (x1- x2) +  (y1+ y3) (x3- x1) -  (y2+ y3) (x3- x2)

=  [x1(y2- y3) + x2(y3- y1) +x3(y1- y2)] --------- (ಪದಗಳ ಮರುಹೊಂದಾಣಿಕೆ)

A B ಮತ್ತು C ಗಳು ಏಕರೇಖಾಗತವಾಗಿದ್ದರೆ ವಿಸ್ತೀರ್ಣ ಸೊನ್ನೆಯಾಗಿರುತ್ತವೆ ಎನ್ನುವುದನ್ನು ಗಮನಿಸಿ.


7.2 ಸಮಸ್ಯೆ 8: D(3,-1), E(2,6) ಮತ್ತು F(-5,7) ಗಳು ABC  ಯ ಬಾಹುಗಳ ಮಧ್ಯಬಿಂದುಗಳಾದರೆ  ABC ಯ ವಿಸ್ತೀರ್ಣ ಎಷ್ಟು?

 

DEF ಯ ವಿಸ್ತೀರ್ಣ

=  [3(6-7)+2(7-(-1))+(-5)(-1-6)]

= [-3+16+35]= (48) = 24 ಚದರ ಮಾನಗಳು 

ABC ಯ ವಿಸ್ತೀರ್ಣ DEF ನ ನಾಲ್ಕರಷ್ಟು ಅಗಿದೆ.( ಮೂಲ ಸಮಾನುಪಾತತೆಯ ಪ್ರಮೇಯ- ಪಾಠ  6.13ನೋಡಿ)

ABC ಯ ವಿಸ್ತೀರ್ಣ = 4*24 = 96 ಚದರ ಮಾನಗಳು

 

          


7.2 ಸಮಸ್ಯೆ 9: ಒಂದು ಚತುರ್ಭುಜದ ಅನುಕ್ರಮ ಬಾಹುಗಳ ನಿರ್ದೇಶಾಂಕಗಳು (-4,-2), (-3,-5),(3,-2), ಮತ್ತು (2,3) ಆಗಿದ್ದರೆ ಅದರ ವಿಸ್ತೀರ್ಣ ಎಷ್ಟು?

 

ABCD ಚತುರ್ಭುಜದ ಒಂದು ಕರಡು ಚಿತ್ರ ರಚಿಸಿ.  A ಮತ್ತು C ಸೇರಿಸಿ.

ಆಗ ಎರಡು ತ್ರಿಭುಜಗಳು ದೊರೆಯುತ್ತವೆ.

 

ತ್ರಿಭುಜದ ವಿಸ್ತೀರ್ಣ =  [x1(y2- y3) + x2(y3- y1) +x3(y1- y2)]

ABC ವಿಸ್ತೀರ್ಣ = [ -4*(-5-(-2))+ -3*(-2-(-2))+ 3*(-2-(-5))] = [12+0+9]= *21

ACD ವಿಸ್ತೀರ್ಣ = [ -4*(3-(-2))+ 2*(-2-(-2))+ 3*(-2-3)] = [-20+0-15]= *(-35)=*(+35) (ವಿಸ್ತೀರ್ಣ  ಋಣವಾಗಲು ಸಾಧ್ಯವಿಲ್ಲ) 

ಚತುರ್ಭುಜದ ವಿಸ್ತೀರ್ಣ = 2 ತ್ರಿಭುಜಗಳ ವಿಸ್ತೀರ್ಣ = (21+35) = 28 ಚದರ ಮಾನಗಳು