1.3 ಘನಗಳು ಮತ್ತು
ಘನಮೂಲಗಳು (Cubes and Cube roots):
ಘನ
ಎಂದಾಗ ನೆನಪಾಗುವುದು
ಉದ್ದ ಅಗಲ ಮತ್ತು
ಎತ್ತರ ಎನ್ನುವ 3 ಅಳತೆ ಪ್ರಮಾಣಗಳಲ್ಲಿ
ಎಲ್ಲವೂ ಸಮವಾಗಿರುವ
(ಉದ್ದ = ಅಗಲ = ಎತ್ತರ) ಬದಿಯಲ್ಲಿನ
ಆಕೃತಿಯಂತಹ ವಸ್ತು. ಒಂದು
ಘನಾಕೃತಿಯ ಗಾತ್ರ(ಘನ
ಫಲ) = ಉದ್ದ*ಅಗಲ*ಎತ್ತರ.(
ರೇಖಾಗಣಿತದಲ್ಲಿ
ಕಲಿತಿದ್ದೇವೆ.) ಒಂದು
ಘನವು ಸಮಾನ ಉದ್ದ, ಅಗಲ, ಎತ್ತರಗಳನ್ನು
ಹೊಂದಿರುತ್ತದೆ. ಒಂದು
ಘನದ ಗಾತ್ರ(ಘನ ಫಲ) = ಉದ್ದ * ಉದ್ದ * ಉದ್ದ = (ಉದ್ದ)3 ಇಲ್ಲಿ a ಯು 1,2,3 ಆದಾಗ ಅದರ
ಘನ ಫಲ ಕ್ರಮವಾಗಿ 1*1*1
= 1, 2*2*2=8, 3*3*3=27 ಆಗುತ್ತದೆ. |
|
1,
2, 3, 4… ಗಳ ಗುಂಪಿಗೂ
ಮತ್ತು 1,
8, 27, 64 . . . ಗುಂಪಿಗೂ
ಇರುವ ಸಂಬಂಧ
ಏನು?
ಮೊದಲ ಗುಂಪಿನಲ್ಲಿ
ಇರುವ ಸಂಖ್ಯೆಯನ್ನು
ಅದರಿಂದಲೇ ಮೂರು
ಬಾರಿ ಗುಣಿಸಿದಾಗ
ಎರಡನೇ ಗುಂಪಿನ ಸಂಖ್ಯೆಗಳು
ದೊರಕಿದವು. ಇವುಗಳನ್ನು
ಘನಗಳೆನ್ನುತ್ತೇವೆ.
ಘನ ಸಂಖ್ಯೆಗಳು
ಯಾವುದೇ ಸಂಖ್ಯೆಯನ್ನು
3
ರ ಘಾತಕ್ಕೆ
ಏರಿಸಿದ ಸಂಖ್ಯೆಗಳು.
ಇವು n3 ರೂಪದಲ್ಲಿವೆ.
n3 ಎಂಬುದು n ನ ಘನವಾದರೆ (cube), n ಎಂಬುದು n3 ದ ಘನಮೂಲ
cube root). ಘನಮೂಲವನ್ನು ಸಂಕೇತದಿಂದ
ಸೂಚಿಸುತ್ತೇವೆ.
ಆದ್ದರಿಂದ, 1,2,3,4 ಈ ಸಂಖ್ಯೆಗಳು
ಕ್ರಮವಾಗಿ 1, 8, 27, 64 ರ ಘನಗಳು.
ವ್ಯಾಖ್ಯೆ:
ಸರ್ವಸಮವಾದ
ಮೂರು ಅಪವರ್ತನಗಳ
ಗುಣಲಬ್ಧವಾಗಿರುವ
ಯಾವುದೇ ಸಂಖ್ಯೆಯನ್ನು
ಆ ಅಪವರ್ತನದ ಘನ(cube) ಎಂದು ಕರೆಯುತ್ತೇವೆ..
1.3 ಸಮಸ್ಯೆ 1 : ಒಂದು ಘನದ
ಒಂದು ಬದಿಯ ಉದ್ದ
7 ಸೆಂ.ಮಿ. ಆದರೆ ಅದರ
ಗಾತ್ರ ಕಂಡುಹಿಡಿ..
ಪರಿಹಾರ:
ಘನದ ಗಾತ್ರ = (ಉದ್ದ)3
7 ಸೆಂ.ಮಿ.
ಅಂಚುಳ್ಳ ಘನದ
ಗಾತ್ರ = (7)3
=7*7*7 = 343 ಘನ ಸೆಂ.ಮಿ.
1.3.1
ಅಪವರ್ತನ
ವಿಧಾನದಿಂದ ಘನಮೂಲವನ್ನು ಕಂಡುಹಿಡಿಯುವುದು(Finding cube root by factorization):
1.3.1 ಸಮಸ್ಯೆ 1 : 42875 ರ ಘನಮೂಲ ಕಂಡುಹಿಡಿ.
ಪರಿಹಾರ:
42875 ರ ಅಪವರ್ತನಗಳು:
5,5,5,7,7,7
42875 = 5*5*5*7*7*7 = 53*73=
(5*7)3
= 5*7 = 35
1.3.1 ಸಮಸ್ಯೆ 2: 432 ನ್ನ ಒಂದು
ಪೂರ್ಣ ಘನ ಸಂಖ್ಯೆಯನ್ನಾಗಿ
ಮಾಡಲು ಅದಕ್ಕೆ ಗುಣಿಸಬೇಕಾದ
ಅಥವಾ ಭಾಗಿಸಬೇಕಾದ
ಕನಿಷ್ಟ ಸಂಖ್ಯೆ
ಕಂಡುಹಿಡಿ.
ಪರಿಹಾರ:
432 = 3,3,3,4.4 = (3)3*(4)2
ಇಲ್ಲಿ ಅಪವರ್ತನ ‘4’ ಎರಡೇ ಬಾರಿ
ಬಂದಿದೆ.
1. ಈಗ ನಾವು
432 ನ್ನು 4 ರಿಂದ ಗುಣಿಸಿದರೆ, 432*4 = (3)3*(4)3=
(3*4)3 ಬರುತ್ತದೆ.
ಆದ್ದರಿಂದ 432 ನ್ನು 4 ರಿಂದ ಗುಣಿಸಿದಾಗ
ಅದು ಒಂದು ಪೂರ್ಣಘನ (1728) ಆಗುತ್ತದೆ.
2. ಈಗ ನಾವು 432 ನ್ನು 16 ರಿಂದ ಭಾಗಿಸಿದರೆ, 432/16=
33
ಬರುತ್ತದೆ.
ಆದ್ದರಿಂದ 432 ನ್ನು 16 ರಿಂದ ಭಾಗಿಸಿದಾಗ
, ಅದು ಪೂರ್ಣಘನ (27) = 33
ಆಗುತ್ತದೆ.
1.3.1 ಸಮಸ್ಯೆ 3: ಒಂದು
ಘನ ಸೆಂಟಿಮೀಟರ್
ನೀರು 1 ಗ್ರಾಂ ತೂಗಿದರೆ, ಒಂದು ಘನ
ಮೀಟರ್ ನೀರಿನ ತೂಕವನ್ನು
ಕಂಡುಹಿಡಿಯಿರಿ.
ಪರಿಹಾರ:
1
ಮೀಟರ್ = 100 ಸೆಂ.ಮೀ. 1
ಘನ
ಮೀಟರ್ = 1 ಮೀ.*1 ಮೀ.*1 ಮೀ. = 100 ಸೆಂ.ಮೀ.*100 ಸೆಂ.ಮೀ.* 100 ಸೆಂ.ಮೀ. =
1000000 ಘನ
ಸೆಂ.ಮೀ. 1 ಘನ
ಸೆಂ.ಮೀ ನೀರಿನ ತೂಕ= 1 ಗ್ರಾಂ 1 ಘನ ಮೀ. ನೀರಿನ
ತೂಕ = 1000000 ಘನ
ಸೆಂ.ಮೀ. ನೀರಿನ ತೂಕ= 1000000 ಗ್ರಾಂ =
1000 ಕಿ.. ಗ್ರಾಂ |
|
1.3 ಕಲಿತ ಸಾರಾಂಶ
ಸಂಖ್ಯೆ |
ಕಲಿತ
ಮುಖ್ಯಾಂಶಗಳು |
1 |
ಘನಗಳು, ಅಪವರ್ತನ
ವಿಧಾನದಲ್ಲಿ ಘನಮೂಲವನ್ನು
ಕಂಡುಹಿಡಿಯುವುದು. |