4.14 ತೆರಿಗೆಗಳು( ಮಾರಾಟ,
ಮೌಲ್ಯವರ್ಧಿತ,ಆದಾಯ)-Taxes
(Sales, VAT, Income Tax)
ಒಂದು
ಪ್ರದೇಶದ ಕಾನೂನು
ಪಾಲನೆ, ರಕ್ಷಣಾ
ವ್ಯವಸ್ಥೆ,
ಶಿಕ್ಷಣ, ಅರೋಗ್ಯ,
ನೈರ್ಮಲ್ಯ,
ಸ್ತ್ರೀಯರ,
ಮಕ್ಕಳ, ಹಿರಿಯ
ನಾಗರೀಕರ
ಯೋಗಕ್ಷೇಮ
ನಿರ್ವಹಣೆ
ಮುಂತಾದ
ಸಾಮಾಜಿಕ
ಜವಾಬ್ದಾರಿ
ದೇಶದ/ರಾಜ್ಯದ
ಜವಾಬ್ದಾರಿಯಾಗಿರುತ್ತದೆ.
ಇವುಗಳಲ್ಲಿ
ಕೆಲವು ಕೇಂದ್ರ
ಸರಕಾರದ ಜವಾಬ್ದಾರಿಗಳಾಗಿದ್ದರೆ ಉಳಿದವು
ರಾಜ್ಯಸರಕಾರಗಳ
ಜವಾಬ್ದಾರಿಯಾಗಿರುತ್ತದೆ.
ಈ
ಎಲ್ಲಾ
ಕರ್ತವ್ಯಗಳನ್ನು
ನಿರ್ವಹಿಸಲು
ಹಣದ
ಅಗತ್ಯವಿರುತ್ತದೆ.
ಇದರಿಂದಾಗಿಯೇ ಸರಕಾರಗಳು
ಸಾರ್ವಜನಿಕರಿಂದ
ತೆರಿಗೆ
ರೂಪದಲ್ಲಿ ಸಂಗ್ರಹಿಸಬೇಕಾಗುತ್ತದೆ.
ಹೇಗೆ
ಶಾಲೆಗಳು
ಶೈಕ್ಷಣಿಕ
ವರ್ಷವನ್ನು( ಜೂನ್
ನಿಂದ
ಮಾರ್ಚ್/ಏಪ್ರಿಲ್
ತನಕ)
ಅನುಸರಿಸುತ್ತಾರೋ
ಅದೇ ರೀತಿ ಅವುಗಳ
ಆಯ ವ್ಯಯ
ಲೆಕ್ಕಹಾಕಲು ನಮ್ಮಲ್ಲಿನ
ಸರಕಾರಗಳು ವಿತ್ತೀಯ
ವರ್ಷ( ಏಪ್ರಿಲ್
1
ರಿಂದ ಮಾರ್ಚ್ 31 ರ
ವರೆಗೆ) ವನ್ನು
ಅನುಸರಿಸುತ್ತಾರೆ.
ಸಾಮಾನ್ಯವಾಗಿ
ಪ್ರತೀ ವರ್ಷದ
ಫೆಬ್ರವರಿ
ತಿಂಗಳಲ್ಲಿ
ಮುಂದಿನ
ವರ್ಷಕ್ಕೆ
ಅನ್ವಯಿಸುವಂತೆ ಆಯವ್ಯಯಪತ್ರವನ್ನು( ‘budget’ ),
ಕೇಂದ್ರ/ರಾಜ್ಯ
ಸರಕಾರಗಳ
ಹಣಕಾಸಿನ
ಮಂತ್ರಿಗಳು ಲೋಕಸಭೆ/ ರಾಜ್ಯಸಭೆ/
ವಿಧಾನಸಭೆಗಳಲ್ಲಿ
ಮಂಡಿಸುತ್ತಾರೆ. ಈ
ಆಯವ್ಯಯ
ಪತ್ರವು ವಿವಿಧ
ಮೂಲಗಳಿಂದ
ಆದಾಯ ಮತ್ತು
ವಿವಿಧ
ಕಾರ್ಯಕ್ರಮಗಳಿಗೆ
ನಿಗದಿಪಡಿಸುವ
ಹಣದ
ಪರಿಮಾಣವನ್ನು
ಸೂಚಿಸುತ್ತದೆ.
ಕೇಂದ್ರ ಸರಕಾರ
ಸಂಗ್ರಹಿಸುವ
ತೆರಿಗೆ
ಹಣದಲ್ಲಿ
ಬಹುಪಾಲನ್ನು ವಿವಿಧ
ರಾಜ್ಯಗಳಿಗೂ
ನೀಡಲಾಗುತ್ತದೆ.
ತೆರಿಗೆಯನ್ನು
ನೇರ ಹಾಗೂ
ಪರೋಕ್ಷ
ತೆರಿಗೆ ಎಂದು ವಿಂಗಡಿಸಲಾಗುತ್ತದೆ.
ನೇರ
ತೆರಿಗೆಯನ್ನು
ವ್ಯಕ್ತಿ
ಮತ್ತು ಸಂಘ
ಸಂಸ್ಥೆಗಳ
ಮೇಲೆ
ವಿಧಿಸುವುದಾದರೆ
ಪರೋಕ್ಷ
ತೆರಿಗೆಯನ್ನು ವಸ್ತು
ಮತ್ತು ಸೇವೆಗಳ
ಮೇಲೆ
ವಿಧಿಸಲಾಗುತ್ತದೆ.
ವಿಧ |
ತೆರಿಗೆ
ಹೆಸರು |
ಕೇಂದ್ರ ಸರಕಾರದಿಂದ |
ರಾಜ್ಯ
ಸರಕಾರದಿಂದ |
ನೇರ ತೆರಿಗೆ |
ವರಮಾನ
ತೆರಿಗೆ |
|
|
ಸಂಪತ್ತು
ತೆರಿಗೆ |
|
|
|
ಆಸ್ತಿ
ತೆರಿಗೆ |
|
|
|
ವೃತ್ತಿ
ತೆರಿಗೆ |
|
|
|
ದಸ್ತಾವೇಜು
ಸುಂಕ |
|
|
|
ಪರೋಕ್ಷ
ತೆರಿಗೆ |
ಅಬಕಾರಿ
ಸುಂಕ |
|
|
ಆಮದು
ಸುಂಕ |
|
|
|
ಸೇವಾ
ತೆರಿಗೆ |
|
|
|
ಮಾರಾಟ
ತೆರಿಗೆ |
|
|
|
ಮೌಲ್ಯವರ್ಧಿತ
ತೆರಿಗೆ |
|
|
|
ಮನರಂಜನಾ
ತೆರಿಗೆ |
|
|
4.14.1
ಮಾರಾಟ
ತೆರಿಗೆ
(Sales Tax):
ಈ ತೆರಿಗೆಯನ್ನು
ರಾಜ್ಯಸರಕಾರಗಳು
ತಮ್ಮ ತಮ್ಮ ರಾಜ್ಯದಲ್ಲಿ
ಮಾರಾಟವಾಗುವ
ವಸ್ತುಗಳ
ಅವುಗಳ ಮಾರಾಟದ ಬೆಲೆಯ
ಮೇಲೆ ಪ್ರತಿಶತ (%)
ಪ್ರಮಾಣದಲ್ಲಿ
ವಿಧಿಸುತ್ತಾರೆ.
ಇದರಿಂದ ಬರುವ ಪೂರ್ತಿ
ಆದಾಯ ರಾಜ್ಯದ
ಪಾಲು
ಆಗಿರುತ್ತದೆ. ಕೆಲವು
ರಾಜ್ಯಗಳು ಬಡವರು
ಬಳಸುವ
ವಸ್ತುವಿನ
ಮೇಲೆ ಮಾರಾಟ
ತೆರಿಗೆಯನ್ನು
ವಿಧಿಸದೇ
ಇರಬಹುದು( ಉದಾ:
ಉಪ್ಪು, ಸೈಕಲ್,
ಬೀಜಗಳು,
ಬೆಂಕಿಪೆಟ್ಟಿಗೆ
..) ಅಂತರ
ರಾಜ್ಯಗಳ ಮೂಲಕ ವಸ್ತುವಿನ
ಸಾಗಾಟವು ಆಗುವಂತಿದ್ದರೆ
ಅಂತಹ
ವಸ್ತುವಿನ
ಮಾರಾಟದ ಬೆಲೆಯ ಮೇಲೆ
ಕೇಂದ್ರ
ಸರಕಾರವೂ ಈ
ತೆರಿಗೆಯನ್ನು
ವಿಧಿಸಬಹುದು.
ಅದನ್ನು
ಕೇಂದ್ರ ಮಾರಾಟ
ತೆರಿಗೆ (Central
Sales tax -CST) ಎಂದು
ಕರೆಯುತ್ತಾರೆ.
ಅಂತಹ ಮೂಲದಿಂದ
ಬಂದ
ಆದಾಯವನ್ನು
ಕೇಂದ್ರ
ಸರಕಾರವು
ಎಲ್ಲಾ ರಾಜ್ಯಗಳಿಗೆ
ಹಂಚುತ್ತದೆ. ಪಾಠ 4.1 ರಲ್ಲಿ ನಾವು
ಅಸಲು ಬೆಲೆ,
ಮಾರಾಟದ ಬೆಲೆ,
ಲಾಭ ನಷ್ಟ ಕುರಿತಾಗಿ
ಕಲಿತಿದ್ದೇವೆ.
ಮಾರಾಟ
ತೆರಿಗೆಯನ್ನು ಮಾರಿದ
ಬೆಲೆ ಮೇಲೆ
ಲೆಕ್ಕ
ಹಾಕಬೇಕು.
ಮಾರಾಟಗಾರ
ಸೋಡಿ ನೀಡುವುದಾದರೆ
ಸೋಡಿಯನ್ನು
ಕಳೆದ ನಂತರ
ಬರುವ ಮಾರಿದ ಬೆಲೆಯ
ಮೇಲೆ ಈ ತೆರಿಗೆಯನ್ನು
ಲೆಕ್ಕಹಾಕಬೇಕು.
ಮಾರಾಟದ
ತೆರಿಗೆ
ಹಣ = (ಮಾರಿದ
ಬೆಲೆ * ಮಾರಾಟದ
ತೆರಿಗೆ %)/100.
ಮಾರಾಟದ
ತೆರಿಗೆ % = (ಮಾರಾಟದ
ತೆರಿಗೆ
ಹಣ / ಮಾರಿದ
ಬೆಲೆ)*100
4.14 ಸಮಸ್ಯೆ 1: ಒಬ್ಬ
ವ್ಯಕ್ತಿಯು ರೂ 5460
ಬೆಲೆಯ
ವಸ್ತುಗಳನ್ನು
ಕೊಳ್ಳುತ್ತಾನೆ.
ಆ ವಸ್ತುವಿನ
ಮೇಲೆ ಮಾರಾಟ
ತೆರಿಗೆ 8%
ಆಗಿದೆ.
ಈತನು ಈ ವಸ್ತುವನ್ನು
ಇನ್ನೊಂದು
ರಾಜ್ಯಕ್ಕೆ
ತೆಗೆದುಕೊಂಡು
ಹೋಗುತ್ತಿರುವುದರಿಂದ
ಅದರ ಮೇಲೆ ಕೇಂದ್ರ ಮಾರಾಟದ
ತೆರಿಗೆ 3% ಇರುತ್ತದೆ.
ಹಾಗಾದರೆ ಅವನು
ಎಷ್ಟು ಹಣ
ನೀಡಬೇಕಾಗುತ್ತದೆ?
ಪರಿಹಾರ:
ಮಾರಿದ
ಬೆಲೆ = 5460, ಮಾರಾಟದ
ತೆರಿಗೆ % =8
ಮಾರಾಟದ
ತೆರಿಗೆ
ಹಣ = (ಮಾರಿದ
ಬೆಲೆ * ಮಾರಾಟದ
ತೆರಿಗೆ %)/100
= 5460*8/100 =
436.8
ಕೇಂದ್ರ ಮಾರಾಟದ
ತೆರಿಗೆ = (ಮಾರಿದ
ಬೆಲೆ * ಕೇಂದ್ರ
ಮಾರಾಟದ
ತೆರಿಗೆ %)/100
= 5460*3/100 =
163.8
ಒಟ್ಟು
ತೆರಿಗೆ = ಮಾರಾಟದ
ತೆರಿಗೆ
ಹಣ + ಕೇಂದ್ರ
ಮಾರಾಟದ
ತೆರಿಗೆ ಹಣ =
436.8+163.8 = Rs. 600.60
ಅವನು
ನೀಡಿದ ಹಣ= ಮಾರಿದ
ಬೆಲೆ + ತೆರಿಗೆಗಳು =
5460+600.60 = ರೂ. 6060.6
4.14 ಸಮಸ್ಯೆ 2: ತೆರಿಗೆ
ಬಿಟ್ಟು ಒಂದು
ಕೈಚೀಲದ ಬೆಲೆ ರೂ
654 ಆಗಿರಲಿ.
ಅದರ ಮೇಲಿನ
ಮಾರಾಟ ತೆರಿಗೆ 9%. ಆದರೆ,
ತೆರಿಗೆ ಸೇರಿ
ನೀವು ಕೇವಲ ರೂ. 654
ನೀಡಿದರೆ ಆತ
ನೀಡಿದ ಸೋಡಿ
ಎಷ್ಟು?
ಪರಿಹಾರ:
ಅಂಗಡಿಯವನು
ಮಾರಾಟ
ತೆರಿಗೆಯನ್ನು
ವಸೂಲು ಮಾಡದೆ
ಮಾರಾಟ
ಮಾಡುವುದಿಲ್ಲ ಹಾಗೂ ನೀವು
ನೀಡುವ ರೂ. 654 ಮಾರಾಟ
ತೆರಿಗೆಯನ್ನು
ಒಳಗೊಂಡಿರುತ್ತದೆ.
x ಎನ್ನುವುದು
ಸೋಡಿ ನೀಡಿದ ನಂತರದ
ಮಾರಿದ ಬೆಲೆಯಾಗಿರಲಿ
ಇದರ ಮೇಲೆ ಮಾರಾಟದ
ತೆರಿಗೆ
ಹಣ = 9x/100
ನೀವು ನೀಡಿದ
ಹಣ
= x+(9x/100)
654= x+(9x/100)
654*100 =109x
x = 65400/109 = Rs 600
ಅಂದರೆ
ಅಂಗಡಿಯವನು
ನೀಡಿದ ಸೋಡಿ= 54
(=654-600)
ತಾಳೆ:
ಕೈ
ಚೀಲದ ಬೆಲೆ = 654
ಸೋಡಿ = 54
ರಿಯಾಯಿತಿಯ
ಬೆಲೆ = 600
ಮಾರಾಟದ
ತೆರಿಗೆ =
(600*9)/100= 54
ನೀವು
ನೀಡಿದ ಹಣ = ರಿಯಾಯಿತಿಯ
ನಂತರದ ಬೆಲೆ + ಮಾರಾಟದ
ತೆರಿಗೆ
ಹಣ = 600+54 = 654
ಉತ್ತರ
ಲೆಕ್ಕದಲ್ಲಿ
ನೀಡಿದಂತೆಯೇ
ಇದೆ.
4.14.2
ಮೌಲ್ಯವರ್ಧಿತ
ತೆರಿಗೆ
VAT(Value
Added Tax):
ಮಾರಾಟ
ತೆರಿಗೆ
ಲೆಕ್ಕಹಾಕುವಾಗ
ತೆರಿಗೆಯ ಮೇಲೆ
ತೆರಿಗೆ
ಬೀಳುತ್ತದೆ.
ಇಂತಹ
ದ್ವಿಗುಣ
ಲೆಕ್ಕವನ್ನು
ತಪ್ಪಿಸಲೋಸುಗ
ಹೆಚ್ಚಿನ
ರಾಜ್ಯಗಳು
ಮೌಲ್ಯವರ್ಧಿತ
ತೆರಿಗೆಯನ್ನು
ಜಾರಿಗೆ
ತಂದಿವೆ. ಹೆಸರೇ
ಸೂಚಿಸುವಂತೆ ಈ
ತೆರಿಗೆಯ
ಪ್ರಕಾರ
ಪ್ರತೀ
ಹಂತದಲ್ಲಿ
ವಸ್ತುವಿನ
ಮೌಲ್ಯದಲ್ಲಿ ’ಹೆಚ್ಚಾದ ಮೌಲ್ಯ’ ದ
ಮೇಲೆ ಮಾತ್ರ
ತೆರಿಗೆಯನ್ನು
ಲೆಕ್ಕಹಾಕಲಾಗುತ್ತದೆ.
ಮುಂದಿನ
ಹಂತದಲ್ಲಿನ
ಬೆಲೆಯ ಮೇಲೆ
ತೆರಿಗೆ ವಿಧಿಸುವಾಗ
ಹಿಂದಿನ
ಹಂತದಲ್ಲಿ
ಲೆಕ್ಕ ಹಾಕಿದ
ತೆರಿಗೆಯನ್ನು
ಕಳೆಯಲಾಗುತ್ತದೆ.
ಇದು
ಗ್ರಾಹಕರಿಗೆ
ಅನುಕೂಲವಾಗುವಂತಹ
ತೆರಿಗೆ
ವ್ಯವಸ್ಥೆ.
ಇದನ್ನು 10% ಮಾರಾಟ
ತೆರಿಗೆ
ಮತ್ತು
10% ಮೌಲ್ಯವರ್ಧಿತ
ತೆರಿಗೆ
ಉದಾಹರಣೆ ಮೂಲಕ
ಅಭ್ಯಸಿಸುವಾ.
ಉದಾಹರಣೆಯಾಗಿ
ಒಬ್ಬ ತಯಾರಕ ರೂ
100
ಗಳ
ಕಚ್ಚಾಮಾಲನ್ನು
ಕೊಂಡು
ರೂ 10
ಮೌಲ್ಯದ
ಸಂಸ್ಕರಣೆ
ಮಾಡುತ್ತಾನೆ
ಎಂದು
ತಿಳಿಯೋಣ.
ಮಾರಾಟ ತೆರಿಗೆ
ಮತ್ತು
ಮೌಲ್ಯವರ್ಧಿತ
ತೆರಿಗೆ ಗಳಿಗೆ
ಇರುವ
ವ್ಯತ್ಯಾಸವನ್ನು
ತಿಳಿಯೋಣ.
ಹಂತ |
ಪ್ರಕ್ರಿಯೆ |
10% ಮಾರಾಟ
ತೆರಿಗೆಯಂತೆ |
10% ಮೌಲ್ಯವರ್ಧಿತ
ತೆರಿಗೆಯಂತೆ |
1 |
ಕಚ್ಚಾಮಾಲಿಗೆ
ನೀಡಿದ ಬೆಲೆ=(ಕಚ್ಚಾಮಾಲು
+
ಮಾರಾಟ
ತೆರಿಗೆ) |
110=100+ 10 (10%
ST on 100) |
110=100+ 10 (10%
VAT on 100) |
2 |
ಸಂಸ್ಕರಣೆಯ
ವೆಚ್ಚ |
10 |
10 |
3 |
ವಸ್ತುವಿನ
ಬೆಲೆ =(ಹಂತ 1 ಮತ್ತು 2 ರ
ಒಟ್ಟು ವೆಚ್ಚ) |
120=110+10 |
120=110+10 |
4 |
ತೆರಿಗೆ (ಹಂತ
3
ರ ಮೌಲ್ಯದ
ಮೇಲೆ) |
12(10% ST on 120) |
12(10% VAT on 120) |
5 |
ಮಾರಾಟದ
ಬೆಲೆ
=ವಸ್ತುವಿನ
ಬೆಲೆ +ತೆರಿಗೆ(ಹಂತ
3,4
ರ ಮೌಲ್ಯದ
ಮೇಲೆ) |
132=120+12 |
132=120+12 |
6 |
VAT
ಅಡಿ
ರಿಯಾಯಿತಿ |
0 |
10(ಹಿಂದಿನ
ಹಂತ: ಹಂತ 1
ರಲ್ಲಿ
ಕಟ್ಟಿದ VAT) |
7 |
ಗ್ರಾಹಕ
ನೀಡಬೇಕಾದ ಬೆಲೆ (ಹಂತ 5- ಹಂತ 6) |
132-0 = 132 |
=
132-10 =122 |
8
|
ಸರಕಾರಕ್ಕೆ
ನೀಡಬೇಕಾದ
ತೆರಿಗೆ ಹಣ |
22
= (10+12) |
12
= 10+12-10 |
ನೀವು
ಈಗಾಗಲೇ
ಗಮನಿಸಿದಂತೆ,
ಗ್ರಾಹಕನಿಗೆ
ಮೌಲ್ಯವರ್ಧಿತ
ತೆರಿಗೆಯಡಿ
ವಸ್ತುವಿನ
ಬೆಲೆಯಲ್ಲಿ ರೂ. 10
ಕಡಿತದಿಂದ
ಅವನಿಗೆ
ಅನುಕೂಲವಾಗುತ್ತದೆ.
ಆದರೆ
ಸರಕಾರಕ್ಕೆ ಈ
ನೂತನ
ಲೆಕ್ಕಾಚಾರದಂತೆ
ರೂ. 10 ರಂತೆ
ತೆರಿಗೆಯಲ್ಲಿ
ಖೋತಾ
ಆಗುವುದಿಲ್ಲವೇ? ಆದರೆ ಈ
ನೂತನ ಪದ್ಧತಿ
ಅನುಸರಿಸಿದಾಗ
ಉತ್ಪಾದಕರು
ಸರಿಯಾಗಿ
ಲೆಕ್ಕ ಇಡಲು
ಪ್ರೋತ್ಸಾಹ
ಸಿಕ್ಕಿ,
ತೆರಿಗೆಯ
ವಂಚನೆ
ಕಡಿಮೆಯಾಗುವುದರಿಂದ
ಸರಕಾರಕ್ಕೆ
ಒಟ್ಟಿನಲ್ಲಿ
ಲಾಭವೇ.
4.14.3
ವರಮಾನ
ತೆರಿಗೆ:
ಯಾವುದೇ
ವ್ಯಕ್ತಿಗೆ,
ಸಂಘಸಂಸ್ಥೆಗೆ,ಕಂಪೆನಿಗೆ
ನಿರ್ದಿಷ್ಟ
ವರಮಾನವಿದ್ದಲ್ಲಿ
ಅಂತಹವರು ಆದಾಯ
ತೆರಿಗೆ
ನೀಡಬೇಕಾಗುತ್ತದೆ.ಇದನ್ನು
ಕೇಂದ್ರ ಸರಕಾರ
ವಿಧಿಸುತ್ತದೆ.
ವ್ಯಕ್ತಿಗೆ
ವ್ಯವಸಾಯದಿಂದ
ವರಮಾನ/ಲಾಭ
ವಿದ್ದರೂ ಆತ
ಆದಾಯ ತೆರಿಗೆ
ನೀಡಬೇಕಾಗಿಲ್ಲ.
ಆದರೆ ಯಾವುದೇ
ರೀತಿಯ ನೌಕರ,ವ್ಯಾಪಾರಿ,ವೈದ್ಯ,ವಕೀಲ
.. ಇಂತಹವರು
ಆದಾಯ ತೆರಿಗೆ
ನೀಡಬೇಕಾಗುತ್ತದೆ. ಒಬ್ಬನ
ವರಮಾನದಲ್ಲಿ
ಕೆಲವು ರೀತಿಯ ಉಳಿತಾಯದ/ಸಾಮಾಜಿಕ
ಯೋಜನೆಗಳಲ್ಲಿ
ಹಣತೊಡಗಿಸಿದರೆ
ಅಂತಹ ಉಳಿತಾಯದ
ಮೇಲೆ ತೆರಿಗೆ
ವಿನಾಯಿತಿ ಇರುತ್ತದೆ. ಮಕ್ಕಳ
ವಿದ್ಯಾಭ್ಯಾಸಕ್ಕೆ
ತಗಲುವ
ವೆಚ್ಚದಲ್ಲಿ
ಒಂದು
ನಿರ್ದಿಷ್ಟ
ಹಣದ ವರೆಗೆ ತೆರಿಗೆ
ನೀಡಬೇಕಾಗಿಲ್ಲ.
ಹಿರಿಯ
ನಾಗರೀಕರ
ವರಮಾನದಲ್ಲು
ಹಲವು
ರಿಯಾಯಿತಿಗಳಿವೆ.
ಒಂದು
ನಿರ್ದಿಷ್ಟ
ನಮೂನೆಯಲ್ಲಿ
ತೆರಿಗೆದಾರರು
ಪ್ರತೀ ವರ್ಷ
ಜುಲೈ 31 ರ
ಒಳಗೆ ಹಿಂದಿನ
ವರ್ಷಕ್ಕೆ( ಏಪ್ರಿಲ್-
ಮಾರ್ಚ್) ಸಂಬಂಧಿಸಿದ
ಹಾಗೆ
ವಿವರಗಳನ್ನು( ‘Income tax return’ ) ಸಲ್ಲಿಸಬೇಕು.
ತೆರಿಗೆ ದರ,
ವರಮಾನದ ಮಿತಿ
ಇವು ವರ್ಷ
ವರ್ಷಕ್ಕೆ
ಬದಲಾಗುತ್ತಾ ಇರುತ್ತವೆ.
ವಿವರಗಳಿಗೆ www.incometaxindia.gov.in
ನೋಡಿ.
1. ಒಟ್ಟು
ಆದಾಯ = ಸಂಬಳ+ ಪಿಂಚಣಿ
+
ಬಡ್ಡಿ + ಇತರ
ವರಮಾನ.
2. ರಿಯಾಯಿತಿಗಳು
= ಭವಿಷ್ಯ
ನಿಧಿ + ಜೀವ
ವಿಮೆ ಕಂತು +
ಮಕ್ಕಳ
ವಿದ್ಯಾಭ್ಯಾಸದ
ಖರ್ಚು +
ರಾಷ್ಟ್ರೀಯ
ಉಳಿತಾಯ ಪತ್ರ + . . .
3. ನಿವ್ಹಳ
ಆದಾಯ = ಒಟ್ಟು
ಆದಾಯ - ಕಡಿತಗಳು (ರೂ. 1,50,000 ಮೀರದಂತೆ)
31 ಮಾರ್ಚಿ 2015 ಕ್ಕೆ
ಸಂಬಂಧಿಸಿದ
ಹಾಗೆ ತೆರಿಗೆಯ
ದರ ಮತ್ತು ವರಮಾನದ
ಮಿತಿ
ಕೆಳಗಿನಂತಿದೆ.
Slab/ಶ್ರೇಣಿ |
Net income range/ ವರಮಾನದ
ವ್ಯಾಪ್ತಿ |
Income-tax rates/ತೆರಿಗೆ ದರ |
Surcharge /ಮೇಲ್ತೆರಿಗೆ |
Education cess ಶೈಕ್ಷಣಿಕ
ತೆರಿಗೆ |
1 |
Up to Rs. 2,50,000 |
Nil |
Nil |
Nil |
2 |
Rs. 2,50,000– Rs.
5,00,000 |
10% of (total income minus Rs. 2,50,000) |
Nil |
|
3 |
Rs. 5,00,000 – Rs. 10,00,000 |
Rs. 25,000 + 20% of (total income minus Rs. 5,00,000) |
Nil |
2% of income-tax |
4 |
Above Rs. 10,00,000 |
Rs. 2,50,000 + 30% of
(total income minus Rs.
10,00,000) |
10% of Income-tax |
2% of income-tax and
surcharge |
ಉದಾಹರಣೆಯಾಗಿ
31/03/05 ಕ್ಕೆ
ಸಂಬಂಧಿಸಿದ
ಹಾಗೆ ಒಬ್ಬ
ವ್ಯಕ್ತಿಯ ಆದಾಯ
ತೆರಿಗೆಯನ್ನು
ಲೆಕ್ಕ ಹಾಕುವಾ
4.14 ಸಮಸ್ಯೆ 3: A ಒಬ್ಬ
ವ್ಯಕ್ತಿಯ
ತಿಂಗಳ ಸಂಬಳ ರೂ. 50,000. ಅವನು
ವರ್ಷದಲ್ಲಿ ರೂ.
70,000 ಬಡ್ಡಿಯನ್ನು
ಗಳಿಸುತ್ತಾನೆ.
ಭವಿಷ್ಯನಿಧಿಯಲ್ಲಿ ರೂ. 53,000 ವನ್ನು,
ರಾಷ್ಟ್ರೀಯ ಉಳಿತಾಯ
ಯೋಜನೆಯಲ್ಲಿ ರೂ. 26,000 ವನ್ನು ತೊಡಗಿಸುತ್ತಾನೆ.ಮಕ್ಕಳ
ವಿದ್ಯಾಭ್ಯಾಸಕ್ಕೆ
ಶುಲ್ಕ
ರೂಪದಲ್ಲಿ ರೂ. 51,000 ಖರ್ಚು
ಮಾಡುತ್ತಾನೆ. ಜೀವವಿಮೆಯಲ್ಲಿ
ರೂ. 35,000
ಕಂತನ್ನು ಪಾವತಿಸುತ್ತಾನೆ. ಆತನ
ವರಮಾನ
ತೆರಿಗೆಯನ್ನು
ಲೆಕ್ಕಿಸಿ.
ಪರಿಹಾರ:
1) ಆದಾಯ :
ವಾರ್ಷಿಕ
ಸಂಬಳ = 6,00,000(=50,000*12 ತಿಂಗಳು)
ಬಡ್ಡಿ = 70,000
ಒಟ್ಟು
ಆದಾಯ = 6,70,000
2)ರಿಯಾಯಿತಿಗಳು
:
ಭವಿಷ್ಯನಿಧಿ =
53,000
ರಾಷ್ಟ್ರೀಯ ಉಳಿತಾಯ
ಯೋಜನೆ =
26,000
ಮಕ್ಕಳ
ವಿದ್ಯಾಭ್ಯಾಸಕ್ಕೆ
ಶುಲ್ಕ = 51,000
ಜೀವವಿಮೆ = 35,000
ಒಟ್ಟು
ರಿಯಾಯಿತಿ = 165,000
ಒಟ್ಟು
ರಿಯಾಯಿತಿ ರೂ. 1,50,000 ಮೀರಿರುವುದರಿಂದ,
ರಿಯಾಯಿತಿ
ರೂ. 1,50,000 ಗೆ ಮಾತ್ರ
ಸೀಮಿತ..
ತೆರಿಗೆ
ಒಳಪಡುವ ವರಮಾನ = 5,20,000 ( 6,70,000 - 1,50,000)
ಮೇಲೆ
ನೀಡಿದ
ಪಟ್ಟಿಯಂತೆ
ಅತನಿಗೆ
ಶ್ರೇಣಿ 3 ರಲ್ಲಿ
ನೀಡಿರುವ ತೆರಿಗೆ
ದರ
ಅನ್ವಯವಾಗುತ್ತದೆ.
ತೆರಿಗೆ = ರೂ. 25,000 + (ಆದಾಯ- 5,00,000)ರ 20%
= ರೂ. 25,000 +
20%( 5,20,000-5,00,000)
= ರೂ. 25,000 + 20%(
20,000)
= ರೂ.25,000
+ 4000
= ರೂ. 29,000
ಆತನ
ಆದಾಯ ರೂ. 10,00,000 ಗಳಿಗಿಂತ
ಕಡಿಮೆ
ಇರುವದರಿಂದ ಆತ
ಮೇಲ್ತರಿಗೆ
ನೀಡಬೇಕಿಲ್ಲ.
ಆದರೆ
ಆತ ಶೈಕ್ಷಣಿಕ
ತೆರಿಗೆ 2% ರಂತೆ ರೂ. 29000
ರ ಮೇಲೆ
ಕಟ್ಟಬೇಕಾಗುತ್ತದೆ
= Rs 580
ಆತ
ನೀಡಬೇಕಾದ
ಒಟ್ಟು ತೆರಿಗೆ =
ತೆರಿಗೆ
+ ಶೈಕ್ಷಣಿಕ ತೆರಿಗೆ = 5400+580 = 5980
4.14 ಕಲಿತ
ಸಾರಾಂಶ
ಕ್ರ.ಸಂ.
|
ಕಲಿತ
ಮುಖ್ಯಾಂಶಗಳು |
1 |
ಮಾರಾಟ
ತೆರಿಗೆ,
ಮೌಲ್ಯವರ್ಧಿತ
ತೆರಿಗೆ,ಸರಕು
ಮತ್ತು ಸೇವಾ
ತೆರಿಗೆ
ವರಮಾನ
ತೆರಿಗೆ |