3.5  ಾತೃಕೆಗಳ ವಿಧಗಳು (Types of Matrices):

 

 

ವ್ಯಾಖ್ಯೆಗಳು:

1)   ಒಂದ  ವರ್ಗ ಮಾತೃಕೆ(‘Square Matrix’ ) ಯಲ್ಲಿ ಅಡ್ಡಸಾಲುಗಳು ಮತ್ತು ಕಂಬಸಾಲುಗಳ ಸಂಖ್ಯೆ(m) ಸಮವಾಗಿರುತ್ತದೆ. ವರ್ಗ ಮಾತೃಕೆಯ ಶ್ರೇಣಿ (order):  (m x m)

A=  ಶ್ರೇಣಿ: 3X3

B=  ಶ್ರೇಣಿ:  2X2

 

ಮಾತೃಕೆ A ಯಲ್ಲಿ ಪ್ರಧಾನ ಕರ್ಣದ (‘Diagonal’) ಅಂಶಗಳು {1,5,9}(ಎಡಮೇಲ್ತುದಿಯಿಂದ ಬಲ ಕೆಳತುದಿಯವರೆಗೆ)

 

ಮಾತೃಕೆ B ಯಲ್ಲಿ ಪ್ರಧಾನ ಕರ್ಣದ (‘Diagonal’) ಅಂಶಗಳು {1,4}(ಎಡಮೇಲ್ತುದಿಯಿಂದ ಬಲ ಕೆಳತುದಿಯವರೆಗೆ)

 

A=          

B=

 

ಮಾತೃಕೆ A 3X2 ಮತ್ತು ಮಾತೃಕೆ B 2X3 ಶ್ರೇಣಿಯ ಮಾತೃಕೆಗಳನ್ನು ಗಮನಿಸಿ.

 

ಇವೆರಡೂ ವರ್ಗ ಮಾತೃಕೆಗಳಲ್ಲ. ಆದ್ದರಿಂದ ಇವುಗಳಲ್ಲಿ ಪ್ರಧಾನ ಕರ್ಣಾಂಶಗಳಿಲ್ಲ.

2)  ಒಂದು ವರ್ಗ ಮಾತೃಕೆಯಲ್ಲಿ ಪ್ರಧಾನ ಕರ್ಣಾಂಶಗಳನ್ನು ಬಿಟ್ಟು ಉಳಿದೆಲ್ಲಾ ಅಂಶಗಳು ಸೊನ್ನೆಯಾಗಿದ್ದರೆ ಅದು ಕರ್ಣ ಮಾತೃಕೆ (‘Diagonal matrix’).

 

A=ಪ್ರಧಾನ ಕರ್ಣಾಂಶಗಳು: {2,4,6}

B=  ಪ್ರಧಾನ ಕರ್ಣಾಂಶಗಳು: {3,6}

 

 

 

 

A ಮತ್ತು B ಮಾತೃಕೆಗಳಲ್ಲಿ ಪ್ರಧಾನ ಕರ್ಣದ ಅಂಶಗಳನ್ನು ಬಿಟ್ಟು ಉಳಿದೆಲ್ಲಾ ಅಂಶಗಳು ಸೊನ್ನೆ.

3)  ಪ್ರಧಾನ ಕರ್ಣದ ಅಂಶಗಳೆಲ್ಲವೂ ಸಮವಾಗಿರುವ ಕರ್ಣಮಾತೃಕೆಯು ಒಂದು ಪರಿಮಾಣ ಮಾತೃಕೆ (‘Scalar matrix’).

A=  ಪ್ರಧಾನ ಕರ್ಣಾಂಶಗಳು: {2,2,2}

 B=  ಪ್ರಧಾನ ಕರ್ಣಾಂಶಗಳು: {5,5}

 

 

 

 

A ಮತ್ತು B ಮಾತೃಕೆಗಳಲ್ಲಿ ಪ್ರಧಾನ ಕರ್ಣದ ಅಂಶಗಳು ಸಮ

4)  ಒಂದು ಕರ್ಣಮಾತೃಕೆಯ ಕರ್ಣದ ಅಂಶವೂ 1 ಕ್ಕೆ ಸಮವಾಗಿದ್ದರೆ ಅದು ಘಟಕ ಮಾತೃಕೆ ಅಥವಾ ಅನನ್ಯ ಮಾತೃಕೆ (‘Identity matrix’)

A= ಪ್ರಧಾನ ಕರ್ಣಾಂಶಗಳು: {1,1,1}

B=  ಪ್ರಧಾನ ಕರ್ಣಾಂಶಗಳು: {1,1}

 

 

 

A ಮತ್ತು B ಮಾತೃಕೆಗಳಲ್ಲಿ ಪ್ರಧಾನ ಕರ್ಣದ ಅಂಶಗಳು 1.

5)  ಪ್ರಧಾನ ಕರ್ಣಕ್ಕೆ ಸಮಮಿತಿಯನ್ನು ಹೊಂದಿದ ಅಂಶಗಳು ಸಮವಾಗಿದ್ದರೆ ಅದು  ಸಮಮಿತಿ ಮಾತೃಕೆ (‘Symmetric matrix’)

A= ಪ್ರಧಾನ ಕರ್ಣಾಂಶಗಳು: {5,9,7}

 

B=  ಪ್ರಧಾನ ಕರ್ಣಾಂಶಗಳು: {7, 9}

 

 

 

A ನ ಪ್ರಧಾನ ಕರ್ಣದ ಎರಡೂ ಬದಿಗಳಲ್ಲಿರುವ ಅಂಶಗಳು ಒಂದೇ: {-2,-2},{-4,-4},{6,6}

 

B ನ ಪ್ರಧಾನ ಕರ್ಣದ ಎರಡೂ ಬದಿಗಳಲ್ಲಿರುವ ಅಂಶಗಳು ಒಂದೇ:{-2,-2}.

 

6)  ಪ್ರಧಾನ ಕರ್ಣಾಂಶಗಳೆಲ್ಲಾ ಸೊನ್ನೆಯಾಗಿದ್ದು, ಪ್ರಧಾನ ಕರ್ಣಕ್ಕೆ ಸಮಮಿತಿ ಹೊಂದಿರುವ ಅಂಶಗಳು ಸಮವಾಗಿದ್ದು, ಚಿಹ್ನೆಗಳಲ್ಲಿ ವಿರುದ್ಧವಾಗಿರುವ ಒಂದು ವರ್ಗ ಮಾತೃಕೆಯನ್ನು ವಿಷಮ ಸಮಮಿತಿ ಮಾತೃಕೆ (‘Skew symmetric matrix’ ) ಎನ್ನುವರು.

A= ಪ್ರಧಾನ ಕರ್ಣಾಂಶಗಳು:  {0,0,0}

 

B=  ಪ್ರಧಾನ ಕರ್ಣಾಂಶಗಳು: {0,0}

 

A ನ ಪ್ರಧಾನ ಕರ್ಣದ ಎರಡೂ ಬದಿಗಳಲ್ಲಿರುವ ಅಂಶಗಳು ಒಂದೇ ಆಗಿದ್ದು ವಿರುದ್ಧ ಚಿಹ್ನೆಗಳನ್ನು ಹೊಂದಿವೆ:

{-2,2},{4,-4},{-6,6}

 

 

B ನ ಪ್ರಧಾನ ಕರ್ಣದ ಎರಡೂ ಬದಿಗಳಲ್ಲಿರುವ ಅಂಶಗಳು ಒಂದೇ ಆಗಿದ್ದು ವಿರುದ್ಧ ಚಿಹ್ನೆಗಳನ್ನು ಹೊಂದಿವೆ: {-2,2}

A= ಶ್ರೇಣಿ:1X4

B= ಶ್ರೇಣಿ: 1X2

7)  ಒಂದು ಮಾತೃಕೆಯು ಕೇವಲ ಒಂದು ಅಡ್ಡ ಸಾಲನ್ನು ಹೊಂದಿದ್ದರೆ. ಅಡ್ಡಸಾಲು ಮಾತೃಕೆ (‘Row matrix’).

ಅಡ್ಡಸಾಲು ಮಾತೃಕೆಯ ಶ್ರೇಣಿ: (1 x n).

 

A= ಶ್ರೇಣಿ: 4X1

 B= ಶ್ರೇಣಿ:  2X1

 

8)  ಒಂದು ಮಾತೃಕೆಯು ಕೇವಲ ಒಂದು ಕಂಬ ಸಾಲನ್ನು ಹೊಂದಿದ್ದರೆ. ಅದು ಕಂಬಸಾಲು ಮಾತೃಕೆ (‘Column  matrix’).

 

 

ಕಂಬಸಾಲು ಮಾತೃಕೆಯ ಶ್ರೇಣಿ: (m x 1)

 

A= ಶ್ರೇಣಿ: 3X4

B=  ಶ್ರೇಣಿ:2X3

 

 

9)  ಒಂದು ಮಾತೃಕೆಯ ಎಲ್ಲಾ ಅಂಶಗಳೂ ಸೊನ್ನೆಯಾಗಿದ್ದರೆ, ಅದು ಶೂನ್ಯ ಮಾತೃಕೆ (‘Zero  matrix’)

 

(ಶೂನ್ಯ ಮಾತೃಕೆಯು ವರ್ಗ ಮಾತೃಕೆಯೂ ಆಗಿರಬಹುದು, ಆಯತ ಮಾತೃಕೆಯೂ ಆಗಿರಬಹುದು.)

 

 

A=

B=   ದಾಗ  A=B

 

 

 

 

ಎರಡು ಮಾತೃಕೆಗಳು ಒಂದೇ ಶ್ರೇಣಿಯುಳ್ಳವುಗಳಾಗಿದ್ದು, ಒಂದು ಮಾತೃಕೆಯ ಪ್ರತಿಯೊಂದು ಅಂಶವೂ ಎರಡನೇ ಮಾತೃಕೆಯ ಅನುರೂಪ ಅಂಶಕ್ಕೆ ಸಮವಾಗಿದ್ದರೆ, ಆ ಎರಡು ಮಾತೃಕೆಗಳು ಸಮ.  A=B

A= ; B =  

ಮತ್ತ  A=B  ಎಂದಿದ್ದರ 

 

 

 

 

ಆಗ a=1, b=2,c=3,d=4,e=5,f=6,g=7,h=8,i=9,j=2,k=4,l=6.

 

10)  ಮಾತೃಕೆಯ ಸ್ಧಳಾಂತರ: ಒಂದು ಮಾತೃಕೆಯಲ್ಲಿನ ಅಡ್ಡಸಾಲುಗಳನ್ನು ಕಂಬಸಾಲುಗಳನ್ನಾಗಿಯೂ, ಕಂಬಸಾಲುಗಳನ್ನು ಅಡ್ಡಸಾಲುಗಳನ್ನಾಗಿಯೂ ಬರೆದರೆ ದೊರೆಯುವ ಮಾತೃಕೆಯೇ ಮೊದಲಿನ ಮಾತೃಕೆಯ ಸ್ಧಳಾಂತರಿಸಿದ ಮಾತೃಕೆ (Transpose of a matrix’) .  A  ಾತೃಕೆಯ ಸ್ಧಳಾಂತರಿಸಿದ ಮಾತೃಕೆಯನ್ನು  A1 ಎಂದು ಸೂಚಿಸುತ್ತೇವೆ.

A=   ಈ ಮಾತೃಕೆಯ ಶ್ರೇಣಿ: 4X3

 

A1=    ಶ್ರೇಣಿ: 3X4

 

 

ಅಡ್ಡ ಸಾಲುಗಳು: {2,4,6},{8,9,1},{3,5,7},{2,4,6}. ಕಂಬ ಸಾಲುಗಳು: {2,8,3,2},{4,9,5,4},{6,1,7,6}

 

         

ಅಡ್ಡ ಸಾಲುಗಳು:  {2,8,3,2},{4,9,5,4},{6,1,7,6}.  ಕಂಬ ಸಾಲುಗಳು: {2,4,6},{8,9,1},{3,5,7},{2,4,6}

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

3.5 ಕಲಿತ ಮುಖ್ಯಾಂಶಗಳು   

 

 

ಕ್ರ.ಸಂ.

ಮುಖ್ಯಾಂಶಗಳು

1

 

 

 

 

ಮಾತೃಕೆಗಳ ವಿಧಗಳು: ವರ್ಗಮಾತೃಕೆ, ಆಯತ ಮಾತೃಕೆ, ಕರ್ಣ ಮಾತೃಕೆ, ಪರಿಮಾಣ ಮಾತೃಕೆ, ಅನನ್ಯ ಮಾತೃಕೆ, ಸಮಮಿತಿ ಮಾತೃಕೆ, ವಿಷಮ ಸಮಮಿತಿ ಮಾತೃಕೆ, ಶೂನ್ಯ ಮಾತೃಕೆ.

2

ಮಾತೃಕೆಗಳನ್ನು ಸ್ಧಳಾಂತರಿಸುವುದು.