6.4 ಚತುರ್ಭುಜಗಳು (Quadrilateral)
6.7.1 ಚತುರ್ಭುಜಗಳ ಲಕ್ಷಣಗಳು(Properties of Quadrilaterals)
ವ್ಯಾಖ್ಯೆ: ಒಂದು ಸಮತಲದಲ್ಲಿ ನಾಲ್ಕು ರೇಖಾ ಖಂಡಗಳಿಂದ ಸುತ್ತುವರಿಯಲ್ಪಟ್ಟ ಆಕೃತಿಯೇ ‘ಚತುರ್ಭುಜ’ (quadrilateral).
ಲಕ್ಷಣಗಳು
ಪ್ರತೀ ಕರ್ಣವೂ ಚತುರ್ಭುಜವನ್ನು 2 ತ್ರಿಕೋನಗಳಾಗಿ ವಿಭಾಗಿಸುತ್ತದೆ. (BAC ಮತ್ತು ADC ಗಳಲ್ಲಿ AC ಸಾಮಾನ್ಯ ಪಾದ). (BAD ಮತ್ತು BDC ಗಳಲ್ಲಿ BD ಸಾಮಾನ್ಯ ಪಾದ).
|
|
ಪಾರ್ಶ್ವ ಬಾಹುಗಳು ( ಸಾಮಾನ್ಯ ಶೃಂಗ ಇದೆ) |
ಅಭಿಮುಖ ಬಾಹುಗಳು ( ಸಾಮಾನ್ಯ ಶೃಂಗ ಇಲ್ಲ) |
ಅನುಕ್ರಮ ಕೋನಗಳು (ಸಾಮಾನ್ಯ ಬಾಹು ಇದೆ) |
ಅಭಿಮುಖ ಕೋನಗಳು (ಸಾಮಾನ್ಯ ಬಾಹು ಇಲ್ಲ) |
(AB,BC) : B ಸಾಮಾನ್ಯ ಶೃಂಗ (BC,CD) : C ಸಾಮಾನ್ಯ ಶೃಂಗ (CD,DA) : D ಸಾಮಾನ್ಯ ಶೃಂಗ (DA,AB) : A ಸಾಮಾನ್ಯ ಶೃಂಗ |
(AB,CD) (AD,BC) |
(
ABC, BCD) : BC ಸಾಮಾನ್ಯ ಬಾಹು (BCD, CDA) : CD ಸಾಮಾನ್ಯ ಬಾಹು (
CDA, DAB) : DA ಸಾಮಾನ್ಯ ಬಾಹು (
DAB,
ABC) : AB ಸಾಮಾನ್ಯ ಬಾಹು |
(ABC, ADC) (BAD , BCD) |
ಒಂದು ಚತುರ್ಭುಜದ ನಾಲ್ಕು ಒಳಕೋನಗಳ ಮೊತ್ತ 3600 ಇದನ್ನ ಗಣಿತ ಶಾಸ್ತ್ರದ ಪ್ರಕಾರ ಸಾಧಿಸಬಹುದೆ?
6.7.1 ಸಮಸ್ಯೆ 1: ಒಂದು ಚತುರ್ಭುಜದ ನಾಲ್ಕು ಕೋನಗಳು 4:5:6:9. ಅನುಪಾತದಲ್ಲಿವೆ. ಆ ಕೋನಗಳುನ್ನು ಕಂಡುಹಿಡಿಯಿರಿ.
ಪರಿಹಾರ:
ಒಂದು ಚತುರ್ಭುಜದ ನಾಲ್ಕು ಕೋನಗಳ ಮೊತ್ತ = 3600
ಕೋನಗಳ ಅನುಪಾತ = 4:5:6:9 ಆ ಕೋನಗಳ ಪರಿಮಾಣ = 4x, 5x, 6x, 9x ಆಗಿರಲಿ. ನಾಲ್ಕು ಕೋನಗಳ ಮೊತ್ತ = 4x+5x+6x+9x = 3600: 24x = 3600: x = 360/24 = 150 1 ನೇ ಕೋನ = 4x = 4*15 = 600,2 ನೇ ಕೋನ = 5x = 5*15 =750 3 ನೇ ಕೋನ = 6x = 6*15 =900,4 ನೇ ಕೋನ = 9x= 9*15 = 1350 ಚತುರ್ಭುಜದ ನಾಲ್ಕು ಕೋನಗಳು = 600, 750, 900 ಮತ್ತು 1350. |
|
6.7.1
ಸಮಸ್ಯೆ 2: ಒಂದು ಚತುರ್ಭುಜದ ಕೋನಗಳು: 3x, 3x+150,
3x+300 ಮತ್ತು 900 ಆದರೆ ಎಲ್ಲಾ ಕೋನಗಳನ್ನು ಕಂಡುಹಿಡಿ.
ಪರಿಹಾರ:
ಚತುರ್ಭುಜದ ನಾಲ್ಕು ಕೋನಗಳ ಮೊತ್ತ = 3600 3x+3x+150+3x+300+900 = 3600 9x+1350=3600 9x=2250 x= 250 1 ನೇ ಕೋನ 3x = 750, ,2 ನೇ ಕೋನ 3x+150 =750+150=900 3 ನೇ ಕೋನ 3x+300 = 1050, 4 ನೇ ಕೋನ = 900 (ದತ್ತ) ಈ ನಾಲ್ಕು ಕೋನಗಳ ಮೊತ್ತ 3600 ಆಗಿದೆಯೇ ಎಂದು ಪರೀಕ್ಷಿಸಿ. |
|
ನಾವೀಗಾಗಲೇ ತಿಳಿದಿರುವಂತೆ ಒಂದು ತ್ರಿಭುಜದಲ್ಲಿ ಆರು ಅಂಶಗಳಿವೆ. (3 ಬಾಹುಗಳು ಮತ್ತು 3 ಕೋನಗಳು). ಒಂದು ತ್ರಿಭುಜವನ್ನು ನಿಖಿರವಾಗಿ ರಚಿಸಲು(3 ಬಾಹುಗಳು ಅಥವಾ 2 ಬಾಹುಗಳು ಮತ್ತು 1 ಕೋನ ಅಥವಾ 1 ಬಾಹು ಮತ್ತು 2 ಕೋನಗಳು) ಇವುಗಳ ಅಳತೆಗಳು ಸಾಕು ಎಂಬುದನ್ನು ತಿಳಿದಿದ್ದೇವೆ(ಪಾಠ 6.4.3)
[3 ಕೋನಗಳನ್ನು ಮಾತ್ರ ನೀಡಿದಾಗ ಒಂದು ನಿರ್ದಿಷ್ಟ ತ್ರಿಭುಜ ರಚಿಸಲು ಸಾಧ್ಯವಿಲ್ಲ.]
ತ್ರಿಭುಜಗಳಿಗೆ ಹೋಲಿಸಿದಾಗ ಒಂದು ಚತುರ್ಭುಜದಲ್ಲಿ 10 ಅಂಶಗಳಿವೆ(4 ಬಾಹುಗಳು, 4 ಕೋನಗಳು, 2 ಕರ್ಣಗಳು). ಹಾಗಾದರೆ ಒಂದು ಚತುರ್ಭುಜ ರಚಿಸಲು ಎಲ್ಲಾ 10 ಅಂಶಗಳು ಬೇಕೇ? ಬರೇ 4 ಅಂಶಗಳಿಂದ ಒಂದು ನಿರ್ದಿಷ್ಟ ಚತುರ್ಭುಜವನ್ನ ರಚಿಸಲು ಸಾಧ್ಯವಿಲ್ಲ. ಒಂದು ಚತುರ್ಭುಜವನ್ನ ನಿಖಿರವಾಗಿ ರಚಿಸಲು ಕನಿಷ್ಠ 5 ಅಂಶಗಳು ಬೇಕು. (ಅವುಗಳಲ್ಲಿ ಕನಿಷ್ಠ ಎರಡು ಬಾಹುಗಳು ಇರಲೇ ಬೇಕು)
6.7.1 ತಃಖ್ತೆ1:
ಸಂ. |
ದತ್ತ ಬಾಹುಗಳು |
ದತ್ತ ಕರ್ಣಗಳು |
ದತ್ತ ಕೋನಗಳು |
ಒಟ್ಟು ಬೇಕಾದ ಅಂಶಗಳು |
1 |
2 |
2 |
1 |
5 |
2 |
2 |
1 |
2 |
5 |
3 |
4 |
1 |
- |
5 |
4 |
4 |
- |
1 |
5 |
5 |
3 |
- |
2 (ಅಂತರ್ಗತ) |
5 |
6 |
3 |
2 |
- |
5 |
7 |
2 (ಪಾರ್ಶ್ವ) |
- |
3 |
5 |
ಚತುರ್ಭುಜವನ್ನು ರಚಿಸುವ ಕ್ರಮ (General method for construction of quadrilateral):
(ಮೇಲಿನ ತಃಖ್ತೆಯಲ್ಲಿ ಕೊಟ್ಟಂತೆ ಯಾವುದೇ ಅಂಶದ ಅಳತೆ ಕೊಟ್ಟಾಗಲೂ, ಚತುರ್ಭುಜಗಳ ರಚನೆಯ ಸಾಮಾನ್ಯ ಕ್ರಮ ಒಂದೇ ಆಗಿರುತ್ತದೆ.)
ಗಮನಿಸಿ:
a) ಒಂದು ಬಾಹುವನ್ನು ಎಳೆಯುವ ಕ್ರಮ:
ಮೊದಲು ಒಂದು ಸರಳ ರೇಖೆಯನ್ನೆಳೆಯಿರಿ. ಅದರಲ್ಲಿ ಒಂದು ಬಿಂದುವನ್ನು ಗುರುತಿಸಿ. ಈ ಬಿಂದುವನ್ನು ಕೇಂದ್ರವಾಗಿಟ್ಟುಕೊಂಡು, ದತ್ತ ಬಾಹುವಿನ ಅಳತೆಯ ತ್ರಿಜ್ಯದಿಂದ ಈ ರೇಖೆಯನ್ನ ಕಡಿದು, ಆ ಬಾಹುವನ್ನ ಪಡೆಯಿರಿ.
b) ಕೋನಗಳನ್ನ ರಚಿಸುವಾಗ ಕೋನ ಮಾರ್ಪಕವನ್ನ ಉಪಯೋಗಿಸಿರಿ.
c) ಯಾವುದೇ ಆಕೃತಿಯನ್ನು ರಚಿಸುವಾಗ ಅನುಸರಿಸಬೇಕಾದ ಕ್ರಮ.
ಹಂತ 1: ಮೊದಲ ದತ್ತಾಂಶಗಳನ್ನು ಸೂಚಿಸುವ ಕರಡು ಚಿತ್ರವನ್ನು ಬರೆಯಿರಿ.
ಹಂತ 2: ಬೇಕಾದ ಬಾಹುಗಳು ಮತ್ತು ಕೋನಗಳನ್ನ ಪಡೆಯಲು ಮೇಲೆ ತಿಳಿಸಿದ (a,b) ಕ್ರಮವನ್ನು ಅನುಸರಿಸಿ.
1. ಎರಡು ಬಾಹುಗಳು, ಎರಡು ಕರ್ಣಗಳು ಮತ್ತು ಒಂದು ಕೋನವನ್ನು ಕೊಟ್ಟಾಗ ಚತುರ್ಭುಜದ ರಚನೆ:-
6.7.1 ಸಮಸ್ಯೆ 3: AB=4 ಸೆಂ.ಮಿ.BC=2 ಸೆಂ.ಮಿ.AC=5 ಸೆಂ.ಮಿ.BD=4 ಸೆಂ.ಮಿ.DAB= 600 ಇರುವಂತೆ ABCD ಚತುರ್ಭುಜವನ್ನು ರಚಿಸಿ.
ಮೊದಲು ಒಂದು ಕರಡು ಚಿತ್ರವನ್ನು ರಚಿಸಿರಿ.
1. A ಬಿಂದುವನ್ನ ಗುರುತಿಸಿ, ಇದರಮೂಲಕ ಒಂದು ಸರಳರೇಖೆಯನ್ನೆಳೆಯಿರಿ. 2. ಯನ್ನ ಕೇಂದ್ರವಾಗಿಟ್ಟುಕೊಂಡು 4 ಸೆಂ.ಮಿ. ತ್ರಿಜ್ಯದಿಂದ ಈ ರೇಖೆಯನ್ನ ಛೇದಿಸಿ.ಈ ಬಿಂದುವೇ B
(AB=4 ಸೆಂ.ಮಿ.) 3. B ಯನ್ನ ಕೇಂದ್ರವಾಗಿಟ್ಟುಕೊಂಡು 2 ಸೆಂ.ಮಿ.ತ್ರಿಜ್ಯದಿಂದ ಒಂದು ಕಂಸವನ್ನೆಳೆಯಿರಿ. 4. A ಯನ್ನ ಕೇಂದ್ರವಾಗಿಟ್ಟುಕೊಂಡು 5 ಸೆಂ.ಮಿ. ತ್ರಿಜ್ಯದಿಂದ ಮೇಲಿನ ಕಂಸವನ್ನ ಅ ಯಲ್ಲಿ ಛೇದಿಸುವಂತೆ ಒಂದು ಕಂಸವನ್ನೆಳೆಯಿರಿ. (AC=5 ಸೆಂ.ಮಿ.., 5. Aಯಲ್ಲಿAB ಯ ಜೊತೆ 600
ಕೋನವಾಗುವಂತೆ ಒಂದು ರೇಖೆಯನ್ನೆಳೆಯಿರಿ. 6. B ಯಿಂದ,4 ಸೆಂ.ಮಿ.
ತ್ರಿಜ್ಯದಿಂದ ಮೇಲಿನ ರೇಖೆಯನ್ನ D
ಯಲ್ಲಿ ಕಡಿಯುವಂತೆ ಒಂದು ಕಂಸವನ್ನೆಳೆಯಿರಿ. (DAB= 600, BD=4ಸೆಂ.ಮಿ..) DC ಜೋಡಿಸಿ. ABCD ಯು ನಮಗೆ ಬೇಕಾದ ಚತುರ್ಭುಜ. |
|
2. ಎರಡು ಬಾಹುಗಳು, ಒಂದು ಕರ್ಣ ಮತ್ತು ಎರಡು ಕೋನಗಳನ್ನ ಕೊಟ್ಟಾಗ ಚತುರ್ಭುಜದ ರಚನೆ:
6.7.1 ಸಮಸ್ಯೆ 4: AB=4 ಸೆಂ.ಮಿ.BC=3 ಸೆಂ.ಮಿ.BD=5 ಸೆಂ.ಮಿ.ABC= 600, BCD= 650 ಇರುವಂತೆ ABCD ಚತುರ್ಭುಜವನ್ನ ರಚಿಸಿ.
ಮೊದಲು ಒಂದು ಕರಡು ಚಿತ್ರವನ್ನು ರಚಿಸಿರಿ.
1. A ಬಿಂದುವನ್ನ ಗುರುತಿಸಿ, ಇದರಮೂಲಕ ಒಂದು ಸರಳರೇಖೆಯನ್ನೆಳೆಯಿರಿ. 2. A ಯನ್ನ ಕೇಂದ್ರವಾಗಿಟ್ಟುಕೊಂಡು 4 ಸೆಂ.ಮಿ. ತ್ರಿಜ್ಯದಿಂದ ಈ ರೇಖೆಯನ್ನ B
ಯಲ್ಲಿ ಕಡಿಯುವಂತೆ ಒಂದು ಕಂಸವನ್ನೆಳೆಯಿರಿ (AB=4 ಸೆಂ.ಮಿ.) 3. B ಯಲ್ಲಿ AB ಯ ಜೊತೆ 600 ಕೋನ ಆಗುವಂತೆ ಒಂದು ರೇಖೆಯನ್ನೆಳೆಯಿರಿ. 4. B ಯನ್ನ ಕೇಂದ್ರವಾಗಿಟ್ಟುಕೊಂಡು, 3 ಸೆಂ.ಮಿ. ತ್ರಿಜ್ಯದಿಂದ ಮೇಲಿನ ರೇಖೆಯನ್ನ C ಯಲ್ಲಿ ಕಡಿಯುವಂತೆ ಒಂದು ಕಂಸವನ್ನೆಳೆಯಿರಿ. (BC=3 ಸೆಂ.ಮಿ.ABC=600) 5. C ಯಲ್ಲಿ BC ಯ ಜೊತೆ 650 ಕೋನ ಆಗುವಂತೆ ಒಂದು ರೇಖೆಯನ್ನೆಳೆಯಿರಿ. 6. B ಯನ್ನ ಕೇಂದ್ರವಾಗಿಟ್ಟುಕೊಂಡು, 5 ಸೆಂ.ಮಿ. ತ್ರಿಜ್ಯದಿಂದ ಮೇಲಿನ ರೇಖೆಯನ್ನ ಆ ಯಲ್ಲಿ ಕಡಿಯುವಂತೆ ಒಂದು ಕಂಸವನ್ನೆಳೆಯಿರಿ ABCD ಯು ನಮಗೆ ಬೇಕಾದ ಚತುರ್ಭುಜ. |
|
3. ನಾಲ್ಕು ಬಾಹುಗಳು, ಒಂದು ಕೋನವನ್ನ ಕೊಟ್ಟಾಗ ಚತುರ್ಭುಜದ ರಚನೆ:-
6.7.1 ಸಮಸ್ಯೆ 5: PQ=4 ಸೆಂ.ಮಿ.QR=3 ಸೆಂ.ಮಿ.RS=2.5 ಸೆಂ.ಮಿ.PS=3.5 ಸೆಂ.ಮಿ.SPQ= 500 ಇರುವಂತೆ PQRS ಚತುರ್ಭುಜವನ್ನ ರಚಿಸಿ.
ಮೊದಲು ಒಂದು ಕರಡು ಚಿತ್ರವನ್ನ ರಚಿಸಿ.
1. P ಬಿಂದುವನ್ನ ಗುರುತಿಸಿ ಒಂದು ಸರಳ ರೇಖೆಯನ್ನ ಎಳೆಯಿರಿ. 2. P ಯನ್ನ ಕೇಂದ್ರವಾಗಿಟ್ಟುಕೊಂಡು 4 ಸೆಂ.ಮಿ. ತ್ರಿಜ್ಯದಿಂದ ಈ ರೇಖೆಯನ್ನ Q
ಯಲ್ಲಿ ಕಡಿಯುವಂತೆ ಒಂದು ಕಂಸವನ್ನೆಳೆಯಿರಿ (PQ
=4 ಸೆಂ.ಮಿ.) 3. B ಯಲ್ಲಿ PQ ಯ ಜೊತೆ 500 ಕೋನ ಆಗುವಂತೆ ಒಂದು ರೇಖೆಯನ್ನೆಳೆಯಿರಿ. 4. B ಯನ್ನ ಕೇಂದ್ರವಾಗಿಟ್ಟುಕೊಂಡು, 3.5 ಸೆಂ.ಮಿ. ತ್ರಿಜ್ಯದಿಂದ ಮೇಲಿನ ರೇಖೆಯನ್ನ S ಯಲ್ಲಿ ಕಡಿಯುವಂತೆ ಒಂದು ಕಂಸವನ್ನೆಳೆಯಿರಿ. (PS=3.5 ಸೆಂ.ಮಿ.SPQ= 500) 5. S ನ್ನ ಕೇಂದ್ರವಾಗಿಟ್ಟುಕೊಂಡು, 2.5 ಸೆಂ.ಮಿ. ತ್ರಿಜ್ಯದಿಂದ ಒಂದು ಕಂಸವನ್ನೆಳೆಯಿರಿ. 6. Q ಯನ್ನ ಕೇಂದ್ರವಾಗಿಟ್ಟುಕೊಂಡು, 3 ಸೆಂ.ಮಿ. ತ್ರಿಜ್ಯದಿಂದ ಮೇಲಿನ ರೇಖೆಯನ್ನ R ಲ್ಲಿ ಕಡಿಯುವಂತೆ ಒಂದು ಕಂಸವನ್ನೆಳೆಯಿರಿ.
(SR=2.5 ಸೆಂ.ಮಿ.,QR=3 ಸೆಂ.ಮಿ.) SR ಮತ್ತು QR ಗಳನ್ನ ಜೋಡಿಸಿ. PQRS ನಮಗೆ ಬೇಕಾದ ಚತುರ್ಭುಜ. |
|
ಅಭ್ಯಾಸ: ತಃಖ್ತೆ 6.7.1 ರಲ್ಲಿ 7 ರೀತಿಗಳಲ್ಲಿ(ವಿವಿಧ ಅಳತೆಗಳನ್ನು ಕೊಟ್ಟಾಗ) ಚತುರ್ಭುಜವನ್ನ ನಿಖರವಾಗಿ ರಚಿಸಬಹುದೆಂದು ಪಟ್ಟಿ ಮಾಡಿದ್ದೇವೆ. ಇವುಗಳಲ್ಲಿ 3 ವಿಧವಾಗಿ (ಹಸಿರು ಬಣ್ಣ) ರಚಿಸುವುದು ಮೇಲಿನಂತಿವೆ. ಇನ್ನು ಉಳಿದ 4 ವಿಧಗಳಲ್ಲಿ (ಹಳದಿ ಬಣ್ಣ) ಅಳತೆಗಳಿಗನುಸಾರವಾಗಿ ಚತುರ್ಭುಜಗಳನ್ನ ರಚಿಸಿ.
6.7.2 ತ್ರಿಭುಜದ ವಿಸ್ತೀರ್ಣ (Area of a Triangle)
ಪಕ್ಕದ ABC ಯ ಚಿತ್ರದಲ್ಲಿ AD,
BF, CE ಗಳು BC,
AC ಮತ್ತು AB ಗಳಿಗೆ ಅಭಿಮುಖ ಶೃಂಗ ಬಿಂದುಗಳಾದ A, B , C ಗಳಿಂದ ಎಳೆದ ಲಂಬಗಳು. ತ್ರ್ರಿಭುಜದ ವಿಸ್ತೀರ್ಣ =(1/2) ಪಾದ * ಎತ್ತರ (ಲಂಬೋನ್ನತೆ) ABC ಯ ವಿಸ್ತೀರ್ಣ = (1/2)BC*AD = (1/2)AC*BF =(1/2)AB*CE
ಈ ಸೂತ್ರವನ್ನ 6.8.7 ರಲ್ಲಿ ಸಾಧಿಸಲಿದ್ದೇವೆ. |
|
6.7.2 ಸಮಸ್ಯೆ 1: ಒಂದು ತ್ರಿಭುಜಾಕಾರದ ಹೊಲದ ಪಾದವು ಎತ್ತರದ ಮೂರರಷ್ಟಿದೆ. ಅಲ್ಲಿ ವ್ಯವಸಾಯ ಮಾಡಲು 100 ಚ.ಮೀಟ್ರಿಗೆ ರೂ. 36.72 ರಂತೆ 49,572 ರೂ. ಖರ್ಚಾದರೆ, ಹೊಲದ ಪಾದ ಮತ್ತು ಎತ್ತರ ಎಷ್ಟು?
ಪರಿಹಾರ:
ಹೊಲದ ವ್ಯವಸಾಯ ಮಾಡಲು ತಗಲುವ ಖರ್ಚು = ರೂ. 49,572 = ಹೊಲದ ವಿಸ್ತೀರ್ಣ* ಖರ್ಚು(ಚ.ಮಿ ನಲ್ಲಿ) = ಹೊಲದ ವಿಸ್ತೀರ್ಣ *(36.72/100). ಹೊಲದ ವಿಸ್ತೀರ್ಣ =
49572*(100/36.72) = 135000 ಚ.ಮಿ. ಹೊಲದ ಎತ್ತರ = x ಆಗಿರಲಿ ಪಾದ = 3x ಹೊಲದ ವಿಸ್ತೀರ್ಣ = (1/2) *ಪಾದ*ಎತ್ತರ =
(1/2)*3x*x = 3x2/2 =13500 x2
=135000*2/3 =90000 x =300 ಮಿ. ಹೊಲದ ಎತ್ತರ = 300 ಮಿ.
ಪಾದ = 900 ಮಿ |
|
ತಾಳೆ:
ತ್ರಿಭುಜದ ವಿಸ್ತೀರ್ಣ = (1/2)*900*300
= 900*150 = 135000
ವ್ಯವಸಾಯ ಖರ್ಚು = 135000*(36.72/100) = 49572 ದತ್ತಾಂಶವೇ ಆಗಿದೆ.
6.7.3 ಚರ್ತುರ್ಭುಜದ ವಿಸ್ತೀರ್ಣ (Area of a quadrilateral)
ಒಂದು ಚತುರ್ಭುಜದ ಕರ್ಣ ಅದನ್ನ ಎರಡು ತ್ರಿಕೋನಗಳಾಗಿ ವಿಭಾಗಿಸುತ್ತದೆ ಎಂದು ನಮಗೆ ಗೊತ್ತಿದೆ. ಈ ಲಕ್ಷಣವನ್ನೇ ನಾವು ಚತುರ್ಭುಜದ ವಿಸ್ತೀರ್ಣ ಕಂಡುಹಿಡಿಯಲು ಉಪಯೋಗಿಸುತ್ತೇವೆ.
PQRS ಒಂದು ಚತುರ್ಭುಜದ PR
ಕರ್ಣವನ್ನೆಳೆಯಿರಿ. Qದಿಂದ PR ಗೆ ಒಂದು ಲಂಬವನ್ನೆಳೆಯಿರಿ (QA= h1). Sನಿಂದ PR ಗೆ ಒಂದು ಲಂಬವನ್ನೆಳೆಯಿರಿ (SB=h2) h1 ಮತ್ತು h2
ಗಳು PQR ಮತ್ತು PRS ಗಳ ಎತ್ತರಗಳು. PQR ನ ವಿಸ್ತೀರ್ಣ =
½(ಪಾದ *ಎತ್ತರ) =1/2(PR* h1) PRS ನ ವಿಸ್ತೀರ್ಣ = ½(ಪಾದ *ಎತ್ತರ) = 1/2(PR* h2) ಚತುರ್ಭುಜ PQRS ನ ವಿಸ್ತೀರ್ಣ = PQR ನ ವಿಸ್ತೀರ್ಣ +
PRS ನ ವಿಸ್ತೀರ್ಣ = ½(PR* h1)+ ½(PR* h1) = 1/2*PR* (h1+h2)
ಚದರ ಮಾನಗಳು ಚತುರ್ಭುಜದ ವಿಸ್ತೀರ್ಣ = 1/2 * ಕರ್ಣ* ಪಾದಕರ್ಣಕ್ಕೆಳೆದ ಲಂಬೋನ್ನತಿಗಳ ಮೊತ್ತ |
|
6.7.4 ಚತುರ್ಭುಜಗಳ ವಿಧಗಳು (Types of
quadrilaterals)
ವಿಧಗಳು |
ಲಕ್ಷಣಗಳು |
ಚಿತ್ರ |
ಬಾಹುಗಳೊಳಗೆ ಸಂಬಂಧ |
ಕೋನಗಳ ಸಂಬಂಧ |
ಕರ್ಣಗಳ ಸಂಬಂಧ |
|||
ಸಮಾಂತರ ಚತುರ್ಭುಜ |
ಎರಡೂ ಜತೆ ಅಭಿಮುಖ ಬಾಹುಗಳು ಸಮಾಂತರ |
|
1. ಎರಡೂ ಜತೆ ಅಭಿಮುಖ ಬಾಹುಗಳು ಸಮಾಂತರ 2. ಎರಡೂ ಜತೆ ಅಭಿಮುಖ ಬಾಹುಗಳು ಸಮ.. |
1. ಅಭಿಮುಖ ಕೋನಗಳು ಸಮ 2. ಯಾವುದೇ 2 ಅನುಕ್ರಮ ಕೋನಗಳ ಮೊತ್ತ 1800 |
1. ಕರ್ಣವು ಸಮಾಂತರ ಚತುರ್ಭುಜವನ್ನು ಎರಡು ಸರ್ವ ಸಮ ತ್ರಿಕೋನಗಳಾಗಿ ವಿಭಾಗಿಸುತ್ತದೆ 2. ಕರ್ಣಗಳು ಪರಸ್ಪರ ಅರ್ಧಿಸುತ್ತವೆ. |
|||
ತ್ರಾಪಿಜ್ಯ |
ಕೇವಲ ಒಂದು ಜೊತೆ ಅಭಿಮುಖ ಬಾಹುಗಳು ಸಮಾಂತರ |
|
ಒಂದು ಜೊತೆ ಅಭಿಮುಖ ಬಾಹುಗಳು ಸಮಾಂತರ |
ಸಮಾಂತರವಲ್ಲದ ಬಾಹುಗಳ ಅಂತ್ಯ ಬಿಂದುಗಳಲ್ಲಿ ಅನುಕ್ರಮವಾಗಿರುವ ಕೋನಗಳು ಪರಿಪೂರ್ಣ |
|
|||
ಸಮದ್ವಿಬಾಹು ತ್ರಾಪಿಜ್ಯ
|
ಒಂದು ಜೊತೆ ಅಭಿಮುಖ ಬಾಹುಗಳು ಸಮಾಂತರ. ಸಮಾಂತರ ವಲ್ಲದ ಬಾಹುಗಳು ಸಮ. |
|
1. ಒಂದು ಜೊತೆ ಅಭಿಮುಖ ಬಾಹುಗಳು ಸಮಾಂತರ 2.
ಸಮಾಂತರ ಅಲ್ಲದ ಬಾಹುಗಳು ಸಮ. |
ಸಮಾಂತರವಲ್ಲದ ಬಾಹುಗಳ ಅಂತ್ಯ ಬಿಂದುಗಳಲ್ಲಿ ಅನುಕ್ರಮವಾಗಿರುವ ಕೋನಗಳು ಪರಿಪೂರ್ಣ. ಸಮಾಂತರ ಬಾಹುಗಳ ಅಂತ್ಯ ಬಿಂದುಗಳಲ್ಲಿ ಅನುಕ್ರಮವಾಗಿರುವ ಕೋನಗಳು ಸಮ. |
ಕರ್ಣಗಳು ಸರ್ವಸಮ. |
|||
ಆಯತ |
ಎರಡೂ ಜೊತೆ ಅಭಿಮುಖ ಬಾಹುಗಳು ಸಮಾಂತರ ಎಲ್ಲಾ ಕೋನಗಳು ಲಂಬ ಕೋನಗಳು |
|
1. ಅಭಿಮುಖ ಬಾಹುಗಳು ಸಮ. 2.
ಅಭಿಮುಖ ಬಾಹುಗಳು ಸಮಾಂತರ. |
ಎಲ್ಲಾ ಕೋನಗಳು ಸಮವಾಗಿದ್ದು ಲಂಬ ಕೋನಗಳಾಗಿರುತ್ತವೆ. |
1. ಕರ್ಣವು ಆಯತವನ್ನು ಎರಡು ಸರ್ವ ಸರ್ವಸಮ ತ್ರಿಕೋನಗಳಾಗಿ ವಿಭಾಗಿಸುತ್ತವೆ. 2.
ಕರ್ಣಗಳು ಸಮ. 3.
ಕರ್ಣಗಳು ಪರಸ್ಪರ ಅರ್ಧಿಸುತ್ತವೆ. |
|||
ವಜ್ರಾಕೃತಿ |
ಎಲ್ಲಾ ಬಾಹುಗಳು ಸಮ. ಎರಡೂ ಜೊತೆ ಅಭಿಮುಖ ಬಾಹುಗಳು ಸಮಾಂತರ |
|
1. ಎಲ್ಲಾ ಬಾಹುಗಳು ಸಮ. 2.
ಎರಡೂ ಜೊತೆ ಅಭಿಮುಖ ಬಾಹುಗಳು ಸಮಾಂತರ |
1. ಅಭಿಮುಖ ಕೋನಗಳು ಸರ್ವಸಮ. 2. ಯಾವುದೇ 2 ಅನುಕ್ರಮ ಕೋನಗಳ ಮೊತ್ತ 1800 |
1. ಕರ್ಣಗಳು ವಜ್ರಾಕೃತಿಯನ್ನು 2 ಸರ್ವಸಮ ತ್ರಿಕೋನಗಳಾಗಿ ವಿಭಾಗಿಸುತ್ತವೆ. 2. ಕರ್ಣಗಳು ಪರಸ್ಪರ ಲಂಬವಾಗಿ ಅರ್ಧಿಸುತ್ತವೆ. |
|||
ಚೌಕ |
ಎಲ್ಲಾ ಬಾಹುಗಳು ಸಮ ಮತ್ತು ಎಲ್ಲಾ ಕೋನಗಳು ಲಂಬಕೋನಗಳು |
|
1. ಎಲ್ಲಾ ಬಾಹುಗಳು ಸಮ. 2.
ಎರಡೂ ಜೊತೆ ಅಭಿಮುಖ ಬಾಹುಗಳು ಸಮಾಂತರ. |
ಎಲ್ಲಾ ಕೋನಗಳು ಸಮವಾಗಿದ್ದು ಲಂಬಕೋನಗಳಾಗಿರುತ್ತವೆ.. |
1. ಕರ್ಣಗಳು ಚೌಕವನ್ನ ಎರಡು ಸರ್ವಸಮ ತ್ರಿಕೋನಗಳಾಗಿ ವಿಬಾಗಿಸುತ್ತವೆ. 2.
ಕರ್ಣಗಳು ಸಮ. 3. ಕರ್ಣಗಳು ಪರಸ್ಪರ ಲಂಬವಾಗಿ ಅರ್ಧಿಸುತ್ತವೆ. |
ಚತುರ್ಭುಜಗಳ ಪರಿವಾರ ನಕ್ಷೆಯನ್ನು ಈ ಕೆಳಗಿನಂತೆ ಸೂಚಿಸಬಹುದು:
|
6.7.4
ಸಮಸ್ಯೆ 1: ಒಂದು ಸಮಾಂತರ ಚತುರ್ಭುಜದ ಅನುಕ್ರಮ ಎರಡು ಕೋನಗಳು, (x+30) ಮತ್ತು (2x-60) ಆಗಿವೆ. ಹಾಗಾದರೆ ಆ ಸಮಾಂತರ ಚತುರ್ಭುಜದ ಎಲ್ಲಾ ಕೋನಗಳನ್ನು ಕಂಡುಹಿಡಿಯಿರಿ.
ಪರಿಹಾರ:
¸ ಸಮಾಂತರ ಚತುರ್ಭುಜದ ಯಾವುದೇ ಎರಡು ಅನುಕ್ರಮ ಕೋನಗಳ ಮೊತ್ತ =1800 (x+30)+(2x-60) = 1800 {(x+30) ಮತ್ತು (2x-60) ಎರಡು ಅನುಕ್ರಮ ಕೋನಗಳು } 3x-30 = 1800 x =700 ಆ ಕೋನಗಳು: x+30 = 1000 ಮತ್ತು 2x-60 = 800 ಸಮಾಂತರ ಚತುರ್ಭುಜದಲ್ಲಿ ಅಭಿಮುಖ ಕೋನಗಳು ಸರ್ವಸಮ. ಉಳಿದೆರಡು ಕೋನಗಳು 1000
ಮತ್ತು 800. ನಾಲ್ಕು ಕೋನಗಳು:- 1000,
800, 1000 ಮತ್ತು 800 |
|
6.7.4
ಸಮಸ್ಯೆ 2: ABCD
ಸಮಾಂತರ ಚತುರ್ಭುಜದಲ್ಲಿ, DAB= 700, DBC = 800 ಆದರೆ CDB ಮತ್ತು ABD ಗಳನ್ನ ಕಂಡುಹಿಡಿಯಿರಿ.
ಪರಿಹಾರ:
ಒಂದು ಸಮಾಂತರ ಚತುರ್ಭುಜದಲ್ಲಿ ಯಾವುದೇ ಎರಡು ಅನುಕ್ರಮ ಕೋನಗಳ ಮೊತ್ತ 1800. BAD + ABD+DBC = 1800 :700+ABD+800 = 1800 ABD = 1800-700-800 =300 BA || CD, ಪರ್ಯಾಯ ಕೋನಗಳು ಸಮ. CDB = ABD ಮತ್ತು ADB =DBC CDB = 300 , ADB = 800 ABC = ABD+DBC = 300+800 =1100 ಸಮಾಂತರ ಚತುರ್ಭುಜದಲ್ಲಿ ಅಭುಮುಖ ಕೋನಗಳು ಸರ್ವಸಮ. BCD = 700. ನಾಲ್ಕು ಕೋನಗಳು:- 700, 1100, 700 ಮತ್ತು 1100 |
|
6.7.4
ಸಮಸ್ಯೆ 3: ಒಂದು ಸಮಾಂತರ ಚತುರ್ಭುಜದ ಎರಡು ಬಾಹುಗಳು 3:5 ಅನುಪಾತದಲ್ಲಿವೆ ಮತ್ತು ಸುತ್ತಳತೆ 48 ಸೆಂ.ಮಿ. ಆದರೆ ಆ ಸಮಾಂತರ ಚತುರ್ಭುಜದ ಬಾಹುಗಳನ್ನು ಕಂಡುಹಿಡಿ.
ಪರಿಹಾರ:
ಒಂದು ಸಮಾಂತರ ಚತುರ್ಭುಜದಲ್ಲಿ,ಸುತ್ತಳತೆ =
ನಾಲ್ಕು ಬಾಹುಗಳ ಮೊತ್ತ ಅನುಕ್ರಮ ಬಾಹುಗಳ ಅನುಪಾತ =
3:5: ಆ ಬಾಹುಗಳು 3x
ಮತ್ತು 5x ಆಗಿರಲಿ 3x+5x+3x+5x = 48: 16x
=48 x = 48/16 = 3 3x = 3*3 = 9 ಸೆಂ.ಮಿ.5x = 5*3 = 15 ಸೆಂ.ಮಿ. ಅನುಕ್ರಮ ಬಾಹುಗಳು 9
ಸೆಂ.ಮಿ.ಮತ್ತು 15 ಸೆಂ.ಮಿ. ಸಮಾಂತರ ಚತುರ್ಭುಜದ ಬಾಹುಗಳು 9 ಸೆಂ.ಮಿ.15 ಸೆಂ.ಮಿ.9 ಸೆಂ.ಮಿ.. ಮತ್ತು 15 ಸೆಂ.ಮಿ. ತಾಳೆ: ಸುತ್ತಳತೆ = ನಾಲ್ಕು ಬಾಹುಗಳ ಮೊತ್ತ = 9+15+9+15 = 48 ಸೆಂ.ಮಿ(ದತ್ತಾಂಶ) |
|
6.7.1
ಹೆರಾನ್
ಸೂತ್ರದಂತೆ ತ್ರಿಭುಜದ ವಿಸ್ತೀರ್ಣ:
a,
b ಮತ್ತು c ಗಳು ಒಂದು ತ್ರಿಭುಜದ ಬಾಹುಗಳ ಉದ್ದಗಳಾದರೆ ಹೆರಾನ್
ಸೂತ್ರದಂತೆ ತ್ರಿಭುಜದ
ವಿಸ್ತೀರ್ಣ = ಇಲ್ಲಿ s = (a+b+c)/2 (ತ್ರಿಭುಜದ ಅರ್ಧ ಸುತ್ತಳತೆ) ಗಮನಿಸಿ: ಇದನ್ನು
ಹೆರಾನ್ ಸೂತ್ರ ಎಂದು ಕರೆಯುತ್ತೇವೆಯಾದರೂ ಭಾಸ್ಕರ ತನ್ನ ‘ಲೀಲಾವತಿ ‘
ಗ್ರಂಥದಲ್ಲಿ ಇದನ್ನು ಸಾಧಿಸಿದ್ದಾನೆ(ಶ್ಲೋಕ 169). |
|
6.7.1 ಸಮಸ್ಯೆ 1: ಒಂದು ತ್ರಿಭುಜಾಕೃತಿಯ ಉದ್ಯಾನವನದ ಬಾಹುಗಳ
ಉದ್ದ 18m, 24m ಮತ್ತು 30m ಆದರೆ ಅದರ ವಿಸ್ತೀರ್ಣ ಎಷ್ಟು?
ಹಾಗೆಯೇ ಅತೀ ಉದ್ದದ ಬಾಹುವಿನಿಂದ ಎಳೆದ ಲಂಬದ ಎತ್ತರ ಎಷ್ಟು?
ಪರಿಹಾರ:
a=18, b=24 ಮತ್ತು c=30 ಆಗಿರಲಿ.
s = (a+b+c)/2 =
36
ವಿಸ್ತೀರ್ಣ = = = = 216
ಅತೀ ಉದ್ದದ ಬಾಹು 30m ಆಗಿದೆ. h ಎನ್ನುವುದು ಎತ್ತರ ಆಗಿರಲಿ.
ಆಗ
216 = 1/2*30*h (ತ್ರಿಭುಜದ
ವಿಸ್ತೀರ್ಣ = (1/2)* ಪಾದ *ಎತ್ತರ)
h = 216/15 =
14.4m
ತಾಳೆ:
ತ್ರಿಭುಜದ ವಿಸ್ತೀರ್ಣ
= 1/2*30*14.4 = 216
6.7.1
ಸಮಸ್ಯೆ 2: 32 cm ಕರ್ಣ
ಇರುವ ಚೌಕವನ್ನು ಹಾಗೂ 8 cm ಪಾದವನ್ನು
ಮತ್ತು ಪ್ರತೀ ಬಾಹು 6 cm ಇರುವ
ಸಮದ್ವಿಬಾಹು ತ್ರಿಭುಜದ ಆಕಾರದಲ್ಲಿರುವ ಗಾಳಿಪಟವು ಮೂರು ಬೇರೆ ಬೇರೆ ಛಾಯೆಗಳನ್ನು ಹೊಂದಿದೆ. ಇದರಲ್ಲಿ ಉಪಯೋಗಿಸಿರುವ ಪ್ರತೀ ಛಾಯೆಯ ಕಾಗದದ
ವಿಸ್ತೀರ್ಣವೆಷ್ಟು?
ಪರಿಹಾರ:
ಗಾಳಿಪಟ ವಜ್ರಾಕೃತಿಯಲ್ಲಿರುವುದರಿಂದ
ಕರ್ಣ AC2 = AB2 + BC2 ಮತ್ತು
AB=BC 322=
2AB2 I
ಛಾಯೆಯ ವಿಸ್ತೀರ್ಣ =II ಛಾಯೆಯ ವಿಸ್ತೀರ್ಣ ಚ.
ಸೆ.ಮೀ. = (ABCD ಚೌಕದ ವಿಸ್ತೀರ್ಣ) = (AB*AB)= AB2=16*32=256 ಚ. ಸೆ.ಮೀ. ಗಾಳಿಪಟದ
ಪಾದ ತ್ರಿಭುಜವಾಗಿರುವುದರಿಂದ ಹೆರಾನ್ ಸೂತ್ರದ
s ==10. ಪಾದದ
ವಿಸ್ತೀರ್ಣ
= = = = 8 |
|
Note: ಒಂದು ಚತುರ್ಭುಜದ 4 ಬಾಹುಗಳ ಮತ್ತು 1 ಕರ್ಣದ ಉದ್ದ ಕೊಟ್ಟಿದ್ದರೆ ಅದರ ವಿಸ್ತೀರ್ಣವನ್ನು ಹೆರಾನ್ ಸೂತ್ರ ಉಪಯೋಗಿಸಿ ಕೆಳಗಿನ ಲೆಕ್ಕದಂತೆ
ಸುಲಭವಾಗಿ ಕಂಡುಹಿಡಿಯಬಹುದು.
6.7.1
ಸಮಸ್ಯೆ 3: ನೆಲದ
ಮೇಲಿರುವ ಒಂದು ಹೂವಿನ ವಿನ್ಯಾಸವು 8 ಚತುರ್ಭುಜಾಕಾರದ ಹಾಸುಗಲ್ಲುಗಳಿಂದ ಮಾಡಲ್ಪಟ್ಟಿದೆ. ಇದರ ಬಾಹುಗಳು 28cm,9cm, 9cm ಮತ್ತು 28cm ಆಗಿವೆ. ಇದರ ಕರ್ಣದ ಉದ್ದ 35cm ಆಗಿದೆ. ಈ ಹಾಸುಗಲ್ಲುಗಳನ್ನು ಪ್ರತಿ cm2 ಗೆ 50 ಪೈಸೆಯಂತೆ ನುಣುಪು ಮಾಡಲು ತಗಲುವ ವೆಚ್ಚ
ಎಷ್ಟು?
ಪರಿಹಾರ:
ಪ್ರತಿ ಹಾಸುಗಲ್ಲಿನ
ವಿಸ್ತೀರ್ಣ= ಚತುರ್ಭುಜದ
ವಿಸ್ತೀರ್ಣ = 2*
ತ್ರಿಭುಜಗಳ ವಿಸ್ತೀರ್ಣ ತ್ರಿಭುಜದ ಬಾಹುಗಳು: a=28, b=9 ಮತ್ತು c=35. s = (a+b+c)/2 = 36 ತ್ರಿಭುಜದ ವಿಸ್ತೀರ್ಣ = = = =88.2 ಚ. ಸೆಂ.ಮೀ ಹಾಸುಗಲ್ಲಿನ ವಿಸ್ತೀರ್ಣ = 2* ತ್ರಿಭುಜಗಳ ವಿಸ್ತೀರ್ಣ = 176.4 ಚ. ಸೆಂ.ಮೀ ನುಣುಪು ಮಾಡಬೇಕಾದ ಜಾಗದ ವಿಸ್ತೀರ್ಣ = ಹಾಸುಗಲ್ಲುಗಳ
ಸಂಖ್ಯೆ * ಹಾಸುಗಲ್ಲಿನ
ವಿಸ್ತೀರ್ಣ =
8*176.4 = 1411.2 ಚ.
ಸೆಂ.ಮೀ ನುಣುಪು ಮಾಡಲು ತಗಲುವ
ವೆಚ್ಚ = ರೂ 0.5*1411.2 = ರೂ. 705.6 |
|
6.7 ಕಲಿತ ಸಾರಾಂಶ
ಸಂ. |
ಕಲಿತ ಮುಖ್ಯಾಂಶಗಳು |
1 |
ಚತುರ್ಭುಜದ ವಿಸ್ತೀರ್ಣ = 1/2
* ಕರ್ಣ * ಪಾದ ಕರ್ಣಕ್ಕೆಳೆದ ಲಂಬೋನ್ನತಿಗಳ ಮೊತ್ತ. |
2 |
ಹೆರಾನ್ ಸೂತ್ರ :ತ್ರಿಭುಜದ ವಿಸ್ತೀರ್ಣ ; s = (a+b+c)/2 |