4.1 ಲಾಭ ಮತ್ತು ನಷ್ಟ: (Profit & Loss)
ಕೆಳಗಿನ ಸಮಸ್ಯೆಗಳಿಗೆ ನಿಮ್ಮ ಸಲಹೆ/ಉತ್ತರ ಏನು?
1. ನಿಮಗೊಬ್ಬ ವ್ಯಾಪಾರಿ ಸ್ನೇಹಿತನಿದ್ದಾನೆ. ಅವನು ಇತರ ಸಾಮಾನುಗಳ ಜೊತೆಗೆ ಚಾಕಲೇಟುಗಳನ್ನು ಮತ್ತು ಬಿಸ್ಕತ್ತನ್ನೂ ಮಾರಾಟ ಮಾಡುತ್ತಾನೆ.
1. ಅವನು 10 ರೂ.ಗಳಿಗೆ ತೆಗೆದುಕೊಂಡ ಚಾಕಲೇಟ್ ಬಾರ್ನ್ನ 11ರೂ.ಗಳಿಗೆ ಮಾರುತ್ತಾನೆ.
2. 20 ರೂ.ಗಳಿಗೆ ತೆಗೆದುಕೊಂಡ ಬಿಸ್ಕತ್ ಪ್ಯಾಕೇಟನ್ನು 23 ರೂ.ಗಳಿಗೆ ಮಾರುತ್ತಾನೆ.
ಅವನಿಗೆ ಹೆಚ್ಚಿಗೆ ಲಾಭ ಬೇಕಿದೆ. ಅದಕ್ಕಾಗಿ ಅವನಿಗೆ ಹೆಚ್ಚು ಬಿಸ್ಕತ್ತುಗಳನ್ನ ಮಾರಬೇಕೋ, ಹೆಚ್ಚು ಚಾಕಲೇಟುಗಳನ್ನು ಮಾರಬೇಕೋ ಗೊತ್ತಾಗುತ್ತಿಲ್ಲ. ಆಗ ನೀವು ಹೆಚ್ಚು ಚಾಕಲೇಟು ಮಾರಲು ಹೇಳುತ್ತೀರೋ, ಇಲ್ಲ ಬಿಸ್ಕತ್ತು ಮಾರಲು ಹೇಳುತ್ತೀರೋ?
2.
ಒಬ್ಬ ತೆಂಗಿನ ಕಾಯಿ ವ್ಯಾಪಾರಿಯು 1000 ತೆಂಗಿನ ಕಾಯಿಗಳನ್ನು 6000ರೂ.ಗಳಿಗೆ ಕೊಂಡನು. ಅವುಗಳಲ್ಲಿ 100 ಕಾಯಿಗಳು ಹಾಳಾದವು. ಉಳಿದ ತೆಂಗಿನ ಕಾಯಿಗಳನ್ನು ಅವನು ತಲಾ ರೂ.5 ರಂತೆ ಮಾರಿದರೆ. ಅವನಿಗೆ ಲಾಭವಾಯಿತೇ ಇಲ್ಲ ಅಥವಾ ನಷ್ಟವಾಯಿತೇ?
ನಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಎದುರಿಸುವ ಇಂತಹ ಸಮಸ್ಯೆಗಳಿಗೆ ಉತ್ತರ ಇಲ್ಲಿ ಮತ್ತು ಮುಂದಿನ ಪಾಠಗಳಲ್ಲಿ ಕಲಿಯೋಣ.
4.1.1 ಶೇಕಡಾ (Percentage):
‘ಶೇಕಡಾ’ (%ಅಂಕಗಳು, % ಬಡ್ಡಿದರ, %ಪರೀಕ್ಷೆಯಲ್ಲಿ ಉತ್ತೀರ್ಣತೆ … ಇತ್ಯಾದಿ)
ಶೇಕಡಾ ಎಂದರೆ 100ಕ್ಕೆ ಇಂತಿಷ್ಟು ಎಂದು ಅರ್ಥ.
ವ್ಯಾಖ್ಯೆ: ‘ಶೇಕಡಾ’ವು (‘Percentage’) 100 ಛೇದವಾಗಿಯಳ್ಳ ಒಂದು ಭಿನ್ನರಾಶಿಯಾಗಿದ್ದು ಅದನ್ನ (%) ಸಂಕೇತದಿಂದ ಸೂಚಿಸುತ್ತೇವೆ.
ಉದಾ:
7% = 100 ರಲ್ಲಿ 7 = 7÷100 = 0.07
0.025 = 2.5÷100 = 2.5% (ಅಂದರೆ 100 ಕ್ಕೆ 2.5 )
1÷5 = 20÷100 = 20% (ಅಂದರೆ 100 ಕ್ಕೆ 20 )
100% ಎಂದರೆ ನೂರರಲ್ಲಿ ನೂರು ಎಂದು ಅರ್ಥ (100 ರಲ್ಲಿ 100).
4.1.1 ಉದಾ 1:
ನಿಮಗೆ ಗಣಿತದಲ್ಲಿ ಸಿಕ್ಕ ಅಂಕಗಳು ಈ ಕೆಳಗಿನಂತಿರಲಿ:-
1) ಮೊದಲ ತಿಂಗಳ ಪರೀಕ್ಷೆಯಲ್ಲಿ 25 ರಲ್ಲಿ 15 ( 15/25)
2) ಮಧ್ಯವಾರ್ಷಿಕ ಪರೀಕ್ಷೆಯಲ್ಲಿ 100 ರಲ್ಲಿ 65 (65/100)
3) ಮೂರನೇ ಕಿರುಪರೀಕ್ಷೆಯಲ್ಲಿ 50 ರಲ್ಲಿ 34 (34/50)
4) ವಾರ್ಷಿಕ ಪರೀಕ್ಷೆಯಲ್ಲಿ 150 ರಲ್ಲಿ 105 ( 105/150)
ಈ ಮೇಲಿನ ವಿಷಯಗಳಿಂದ ಆ ವರ್ಷ ಗಣಿತದಲ್ಲಿ ನಿಮ್ಮ ಪ್ರಗತಿಯನ್ನು ನೋಡಲು ಸಾಧ್ಯವಿಲ್ಲ. ಆಗ ನೀವೆಣಿಸುತ್ತೀರಿ: “ಎಲ್ಲಾ ಪರೀಕ್ಷೆಗಳನ್ನೂ
100 ಅಂಕಗಳಲ್ಲಿಯೇ ಮಾಡಿದ್ದರೆ, ಪ್ರಗತಿಯ ಹೋಲಿಕೆ ಸುಲಭವಾಗುತ್ತಿತ್ತು:” ನಾವು ಪ್ರಗತಿಯನ್ನು ಲೆಕ್ಕಹಾಕಲು ಶೇಕಡಾ ಕ್ರಮವನ್ನು ಅನುಸರಿಸುತ್ತೇವೆ.
ಈಗ
ನಾವು ಮೇಲಿನ ಉದಾಹರಣೆಯಲ್ಲಿ ಹೋಲಿಕೆಯ ಮಾನವನ್ನು 100
ಕ್ಕೆ ಬದಲಾಯಿಸುವಾ.
1. ಮೊದಲ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು = 25 ರಲ್ಲಿ 15
ಹಾಗಾದರೆ 100 ರಲ್ಲಿ ಎಷ್ಟು? =
(15÷25)*100 = 60
ಮೊದಲ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು = 60%
2. ಮಧ್ಯವಾರ್ಷಿಕ ಪರೀಕ್ಷೆ ನಡೆದದ್ದೇ 100 ಅಂಕಗಳಲ್ಲಿ:
ಮಧ್ಯವಾರ್ಷಿಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು = 65%
3. ಮೂರನೇ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು 50 ರಲ್ಲಿ 34
100 ರಲ್ಲಿ = (34÷50)*100 = 68
ಮೂರನೇ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು =
68%
4. ವಾರ್ಷಿಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು = 150 ರಲ್ಲಿ 105
100 ರಲ್ಲಿ = (105÷150)*100 = 35*2 = 70
ವಾರ್ಷಿಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು = 70%
ನಾಲ್ಕು ಗಣಿತ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳು 60%, 65%, 68% ಮತ್ತು 70%.
4.1.1 ಸಮಸ್ಯೆ 1: ಒಬ್ಬ ವಾಸ್ತುಶಿಲ್ಪಿಯ ದರ ಮೊದಲು 25,000 ರೂ.ಗಳಿಗೆ 10% ಮತ್ತು ಉಳಿದ ವೆಚ್ಚಕ್ಕೆ 4%. ಒಂದು ಮನೆಯ ಕ್ರಯ ರೂ.1,
50,000 ಆದರೆ.
(1) ವಾಸ್ತುಶಿಲ್ಪಿಗೆ ಕೊಡಬೇಕಾದ ಹಣ.
(2) ಒಟ್ಟು ಬೆಲೆಗೆ ವಾಸ್ತುಶಿಲ್ಪಿಯ ದರ ಕಂಡುಹಿಡಿಯಿರಿ.
ಪರಿಹಾರ:
ಮನೆಯ ಕ್ರಯವನ್ನು ರೂ. 25,000 ಮತ್ತು ರೂ.1,25,000 ಎಂದು ವಿಭಾಗಿಸಬಹುದು. (1,50,000 = 25000+125000) ವಾಸ್ತುಶಿಲ್ಪಿಗೆ ಕೊಡಬೇಕಾದ ಹಣವು ಬೇರೆ ಬೇರೆ ಬೆಲೆಗಳಿಗೆ ಬೇರೆ ಬೇರೆಯಾಗಿರುವುದರಿಂದ, ರೂ.25,000 ಮತ್ತು ರೂ.1,25.000 ಕ್ಕೆ ಪ್ರತ್ಯೇಕವಾಗಿ ಲೆಕ್ಕಹಾಕಬೇಕು. 1. ಶಿಲ್ಪಿಗೆ ಕೊಡಬೇಕಾದ ಹಣ: ರೂ.25,000 ಕ್ಕೆ 10% =25,000 *10% =
25000*(10÷100) = 2500 ರೂ 2. ರೂ. 1,25,000ಕ್ಕೆ ಶಿಲ್ಪಿಗೆ ಕೊಡಬೇಕಾದ ಹಣ 4% =125000*4 % = 125000 *(4÷100) = ರೂ 5000 ವಾಸ್ತುಶಿಲ್ಪಿಗೆ ಕೊಡಬೇಕಾದ ಒಟ್ಟು ಹಣ =
2500+5000 = 7500 ರೂ ರೂ 1, 50,000 ಬೆಲೆಗೆ ಶಿಲ್ಪಿಗೆ ಕೊಡಬೇಕಾದ್ದು 7500 ರೂ 100 ರೂ. ಬೆಲೆಗೆ ಶಿಲ್ಪಿಗೆ ಕೊಡಬೇಕಾದ್ದು =(7500÷150000 )*100 =5 ಶಿಲ್ಪಿಯು ಒಟ್ಟು ಬೆಲೆಯ 5% ದರ ವಿಧಿಸಿದ್ದಾನೆ. |
|
ತಾಳೆ:
150000 ದ 5% = (5÷100)* 150000 = 7500
4.1.1 ಸಮಸ್ಯೆ 2: ಭಾರತದ ಸರಕಾರವು ಒಂದು ಲಕ್ಷಕ್ಕಿಂತ ಹೆಚ್ಚಿಗೆ ಆದಾಯವಿರುವ ಜನರಿಂದ ಆದಾಯ ತೆರಿಗೆ ಕೆಳಕಂಡಂತೆ ವಸೂಲು ಮಾಡುತ್ತದೆ:-
1) ಒಟ್ಟು ಆದಾಯದಲ್ಲಿ ಮೊದಲ ಒಂದು ಲಕ್ಷಕ್ಕೆ ತೆರಿಗೆ ಇಲ್ಲ 2) ಮುಂದಿನ 1 ಲಕ್ಷ ರೂಪಾಯಿಗಳಿಗೆ (10% ರ ದರದಲ್ಲಿ ತೆರಿಗೆ). 3)
ಇನ್ನೂ ಹೆಚ್ಚಿನ ಆದಾಯಕ್ಕೆ 15 % ತೆರಿಗೆ. 4) ತೆರಿಗೆಯಲ್ಲದೆ ಒಟ್ಟು ತೆರಿಗೆಯ 2% ರಷ್ಟು ಸುಂಕವನ್ನು ವಸೂಲು ಮಾಡುತ್ತದೆ. ಒಬ್ಬನ ಆದಾಯ ರು. 4,00,000 ಇದ್ದರೆ, ಕೆಳಗಿನವುಗಳನ್ನು ಲೆಕ್ಕಹಾಕಿ: (1) ಅವನು ತೆರಬೇಕಾದ ಒಟ್ಟು ತೆರಿಗೆ. (2) ಅವನ ಒಟ್ಟು ಆದಾಯಕ್ಕೆ ಶೇಕಡಾ ತೆರಿಗೆ. |
|
ಪರಿಹಾರ:
ಒಟ್ಟು ಆದಾಯ = 4, 00,000
(ತೆರಿಗೆ ರಹಿತ ಆದಾಯ)= 1, 00,000
ತೆರಿಗೆ ಕೊಡಬೇಕಾದ ಆದಾಯ = 3, 00,000
ತೆರಿಗೆ ಹಣವು ಬೇರೆ ಬೇರೆ ಮೊತ್ತಗಳಿಗೆ ವ್ಯತ್ಯಾಸವಿರುವುದರಿಂದ, ತೆರಿಗೆ ಕೊಡಬೇಕಾದ ಹಣವನ್ನು (1,00,000 ಮತ್ತು 2,00,000) ಎಂದು ವಿಭಾಗಿಸಬೇಕು
1) ತೆರಿಗೆ ಕೊಡುವ ಆದಾಯದಲ್ಲಿ ಮೊದಲು 1 ಲಕ್ಷಕ್ಕೆ 10%
= 100000*(10÷100)
= 10,000 ರೂ
2) ಮುಂದಿನ 2 ಲಕ್ಷಕ್ಕೆ 15%
= 200000*(15÷100) = 30,000 ರೂ
ಕಟ್ಟಬೇಕಾದ ಒಟ್ಟು ತೆರಿಗೆ = 10,000+30,000
=40,000 ರೂ.
ತೆರಿಗೆಯಲ್ಲದೆ ತೆರಿಗೆಯ 2% ರಷ್ಟು ಸುಂಕವನ್ನು ಕೊಡಬೇಕು.
2% ಸುಂಕ (40,000 ಮೇಲೆ)= 40000*(2÷100) = 800 ರೂ
ಒಟ್ಟು ತೆರಿಗೆ ಕಟ್ಟಬೇಕಾದದ್ದು = ತೆರಿಗೆ +ಸುಂಕ = 40000+800 = 40800 ರೂ.
ಈಗ ಒಟ್ಟು 4 ಲಕ್ಷ ಆದಾಯಕ್ಕೆ ತೆರಿಗೆ = 40800 ರೂ.
100 ರೂ ಆದಾಯಕ್ಕೆ ತೆರಿಗೆ = (40800÷400000)*100 =10.2%
ಅವನು ಕೊಡಬೇಕಾದ ತೆರಿಗೆಯ ದರ = 10.2%
ತಾಳೆ:
4 ಲಕ್ಷದ 10.2% = (10.2÷100)* 400000 = 40800 ರೂ. – ಇದು ಕಟ್ಟಬೇಕಾದ ಒಟ್ಟು ತೆರಿಗೆ.
4.1.1 ಸಮಸ್ಯೆ 3: ಒಂದು ನಗರದ ಜನ ಸಂಖ್ಯೆ 24,000. ಗಂಡಸರ ಸಂಖ್ಯೆ 6% ಹೆಚ್ಚಾಗಿ, ಹೆಂಗಸರ ಸಂಖ್ಯೆ 9% ಹೆಚ್ಚಾಗಿ,ಒಟ್ಟು ಜನಸಂಖ್ಯೆ 25,620 ಆದರೆ, ಆ ನಗರದಲ್ಲಿರುವ ಹೆಂಗಸರ ಸಂಖ್ಯೆಯನ್ನು ಕಂಡು ಹಿಡಿಯಿರಿ.
ಪರಿಹಾರ:
ನಗರದಲ್ಲಿರುವ ಗಂಡಸರ ಸಂಖ್ಯೆ = x ಆಗಿರಲಿ. ಹೆಂಗಸರ ಸಂಖ್ಯೆ = (24,000-x) ಗಂಡಸರ ಸಂಖ್ಯೆ 6% ಹೆಚ್ಚಾಗಿದೆ. ಹೆಚ್ಚಾದ ಗಂಡಸರು = x*(6÷100) ಹೆಂಗಸರ ಸಂಖ್ಯೆ 9% ಹೆಚ್ಚಾಗಿದೆ. ಹೆಚ್ಚಾದ ಹೆಂಗಸರು = (24000-x)*(9÷100) ಒಟ್ಟು ಜನಸಂಖ್ಯೆ ಹೆಚ್ಚಳ= x*(6÷100) + (24000-x)*(9÷100) =6x/100+
240*9 -9x/100 = 2160-3x/100 ಒಟ್ಟು
ಜನಸಂಖ್ಯೆ =
ಮೂಲ
ಜನಸಂಖ್ಯೆ + ಹೆಚ್ಚಳ = 24,000 + 2160-3x/100=25,620
(ದತ್ತ) 26160 -3x/100 = 25620 3x/100 = 26160-25620 (ಎರಡೂ ಬದಿಗಳಿಗೆ 3x/100 ನ್ನು ಕೂಡಿಸಿ ಮತ್ತು 25620 ರಿಂದ ಕಳೆಯಿರಿ.) 3x/100 = 540 : 3x = 540*100(ಎರಡೂ ಬದಿಗಳಿಗೆ 100ರಿಂದ ಗುಣಿಸಿರಿ.) = 54000 : x = 18000 ಜನ ಸಂಖ್ಯೆ ಹೆಚ್ಚುವ ಮೊದಲು ಇದ್ದ ಗಂಡಸರ ಸಂಖ್ಯೆ = 18,000, ಹೆಂಗಸರ
ಸಂಖ್ಯೆ =
6000 |
|
ತಾಳೆ:
ಗಂಡಸರ ಸಂಖ್ಯೆಯ ಏರಿಕೆ: 6%
= 18000*(6÷100) = 1080
ಹೆಂಗಸರ ಸಂಖ್ಯೆಯ ಏರಿಕೆ: 9% = 6000*(9÷100) = 540
ಒಟ್ಟು ಜನಸಂಖ್ಯೆಯ ಹೆಚ್ಚಳ = 1080+540 = 1620
ಒಟ್ಟು ಜನಸಂಖ್ಯೆ = ಮೊದಲಿನ ಜನಸಂಖ್ಯೆ + ಹೆಚ್ಚಳ
= 24,000 + 1620
= 25620 - ದತ್ತಾಂಶಕ್ಕೆ ಸರಿಯಾಗಿ ಇದೆ.
4.1.1 ಸಮಸ್ಯೆ 4: A ಗೆ B ಗಿಂತ (33)1/3% ಹೆಚ್ಚು. C ಗೆ
A ಮತ್ತು B ಗಳ 60% ರಷ್ಟು ಸಿಗುವ ಹಾಗೆ ರೂ 45,500 ನ್ನ A, B ಮತ್ತು
C ಗಳಿಗೆ ಹಂಚಿರಿ.
ಪರಿಹಾರ:
B ಗೆ ಸಿಗುವ ಹಣ: x ಆಗಿರಲಿ.
A ಗೆ B ಗಿಂತ 33 1/3 % ಅಧಿಕ = B ಗೆ ಸಿಗುವಹಣ + B ಯ ಹಣದ (33) 1/3 %
= x+ {33(1/3)}x÷100
= x+(1/3)x
= 4x/3
A ಮತ್ತು B ಗೆ ದೊರೆಯುವ ಒಟ್ಟು ಹಣ = (4x/3)+x = 7x/3
C ಗೆ, A ಮತ್ತು B ಗಳ ಮೊತ್ತದ 60%
C ಗೆ ದೊರೆತ ಹಣ = A ಮತ್ತು B ಗಳ ಮೊತ್ತದ 60%
= (7x/3)*(60÷100) = 7x/5
A,B ,C ಗಳಿಗೆ ದೊರೆಯುವ ಒಟ್ಟು ಹಣ = 4x/3+x+7x/5
= (20x+15x+21x)/15 (3 ಮತ್ತು 5 ರ ಲ.ಸಾ.ಅ 15)
= 56x/15
ಹಂಚಬೇಕಾದ ಒಟ್ಟು ಹಣ = ರೂ.45,500
45500 = 56x/15
ಸುಲಭೀಕರಿಸಿದಾಗ,x = 12187.5 ರೂ – ಇದು B ಗೆ ದೊರೆಯುವ ಹಣ
A ಗೆ ದೊರೆಯುವ ಹಣ = B ಗೆ ಸಿಕ್ಕಹಣ + B ಯ ಸಿಕ್ಕಹಣ (33) 1/3 %
= 12187.5 + 33(1/3)% *12187.5
= 12187.5+ 4062.5 =16250 ರೂ
A ಮತ್ತು B ಗಳಿಗೆ ದೊರೆಯುವ ಒಟ್ಟು ಹಣ = 16250+12187.5 =28437.5
C ಗೆ ದೊರೆಯುವ ಹಣ = A ಮತ್ತು B ಗೆ ಸಿಕ್ಕ ಹಣದ 60%
= .6*28437.5 = 17062.5 ರೂ
ತಾಳೆ:
12187.5 + 16250 + 17062.5 = 45,500
ಇವುಗಳನ್ನು ಪರೀಕ್ಷಿಸಿ:-
1. 16250 – ಇದು 12187.5 ಕ್ಕಿಂತ (33)(1/3)% ಹೆಚ್ಚು.
2. 17062.5 – ಇದು (12187.5+16250) ರ 60%
4.1.2 ಲಾಭ ಮತ್ತು ನಷ್ಟ (Profit and Loss)
ನೀವು ದಿನನಿತ್ಯದ ಮನೆ ಖರ್ಚಿಗೆ ಸಾಮಾನು ತರಲು ಅಂಗಡಿಗೆ ಹೋಗುತ್ತೀರಿ. ವರ್ತಕನು ಮಾರುಕಟ್ಟೆಯಿಂದ ಅಥವಾ ಉತ್ಪಾದಕನಿಂದ ಸಾಮಾನುಗಳನ್ನು ತಂದು ನಿಮಗೆ ನಿಶ್ಚಿತದರಕ್ಕೆ ಮಾರಾಟ ಮಾಡುತ್ತಾನೆ.
ವಸ್ತುವನ್ನು ವರ್ತಕನು ನಿಮಗೆ ಮಾರಾಟ ಮಾಡಿದ ಬೆಲೆ=ಮಾರಿದ ಬೆಲೆ (SP). ನಿಮಗೆ ಸಾಮಾನುಗಳನ್ನು ಮಾರಲು, ವರ್ತಕನು ಇನ್ನೊಬ್ಬ ವರ್ತಕನಿಂದ ಅಥವಾ ಉತ್ಪಾದಕನಿಂದ ಅವುಗಳನ್ನು ಪಡೆದಿರಬೇಕು. ವಸ್ತುವನ್ನು ವರ್ತಕನು ಕೊಂಡಬೆಲೆ = ಅಸಲುಬೆಲೆ (CP). |
|
ವರ್ತಕನಿಗೆ ಅವನದ್ದೇ ಆದ ಖರ್ಚುಗಳಿವೆ.(ವ್ಯಾಪಾರ ಮಾಡಲು,ಅಂಗಡಿಯ ಬಾಡಿಗೆ ಕಟ್ಟಬೇಕು, ವಿದ್ಯುತ್ ಬಿಲ್ ಕಟ್ಟಬೇಕು, ಕೆಲಸಗಾರರಿಗೆ ಸಂಬಳಕೊಡಬೇಕು... ಇತ್ಯಾದಿ) ಆದ್ದರಿಂದ ವರ್ತಕನು ತಾನು ತಂದ ಬೆಲೆಗಿಂತ ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಬೇಕಾಗುತ್ತದೆ.
ಹೀಗೆ ಅವನಿಗೆ ಹೆಚ್ಚಿಗೆ ಸಿಗುವ ಹಣವು ಮಾರಾಟ ಬೆಲೆ ಮತ್ತು ಅಸಲು ಬೆಲೆಗಳ ವ್ಯತ್ಯಾಸವಾಗಿರುತ್ತದೆ. ಇದನ್ನು ‘ಲಾಭ’ ಎನ್ನುತ್ತಾರೆ.
ಲಾಭ = ಮಾರಾಟದಬೆಲೆ – ಅಸಲುಬೆಲೆ.
= CP-SP (SP>CP)
ಕೆಲವು ಸಾರಿ ವರ್ತಕನು ಹಳೇ ವಸ್ತುಗಳನ್ನು ಖಾಲಿಮಾಡಲು, ಅಸಲು ಬೆಲೆಗೆಂತ ಕಡಿಮೆ ಬೆಲೆಗೆ ಮಾರಬೇಕಾಗುತ್ತದೆ. ಆಗ ಅವನಿಗೆ ‘ನಷ್ಟ’ ಆಗುತ್ತದೆ.
ನಷ್ಟ = ಅಸಲುಬೆಲೆ - ಮಾರಿದಬೆಲೆ
= SP-CP ( SP<CP)
ನಾವು ಅಂಗಡಿಯಿಂದ ಸ್ವಲ್ಪ ಸ್ವಲ್ಪವೇ ಪ್ರಮಾಣದಲ್ಲಿ ಸಾಮಾನುಗಳನ್ನು ತರಬೇಕಾಗುತ್ತದೆ. ವ್ಯಾಪಾರಿಯು ಹೆಚ್ಚಿನ ಪ್ರಮಾಣದಲ್ಲಿ ಸಾಮಾನುಗಳನ್ನು ತರಿಸುವುದರಿಂದ ಅವನಿಗೆ ಬೆಲೆಯಲ್ಲಿ ಸ್ವಲ್ಪ ರಿಯಾಯಿತಿ ಇರುತ್ತದೆ. ದೊಡ್ಡಪ್ರಮಾಣದಲ್ಲಿ ಸಾಮಾನುಗಳನ್ನು ಕೊಂಡಾಗ ಅದನ್ನು ‘ಸಗಟು ದರ’(ಹೋಲ್‍ಸೇಲ್ ದರ)(Wholesale price) ಚಿಕ್ಕ ಚಿಕ್ಕ ಪ್ರಮಾಣದಲ್ಲಿ ಸಾಮಾನುಗಳನ್ನು ತೆಗೆದುಕೊಂಡಾಗ ಅದನ್ನು ‘ಚಿಲ್ಲರೆ ದರ’ (Retail price) ಎಂದೂ ಕರೆಯುತ್ತಾರೆ. ಯಾವಾಗಲೂ ಸಗಟು ದರ < ಚಿಲ್ಲರೆ
ದರ Whole sale price
< Retail Price) |
|
ನಿಮಗೊಬ್ಬ ವ್ಯಾಪಾರಿ ಸ್ನೇಹಿತನಿದ್ದಾನೆ. ಅವನು ಇತರ ಸಾಮಾನುಗಳ ಜೊತೆಗೆ ಚಾಕಲೇಟುಗಳನ್ನು ಮತ್ತು ಬಿಸ್ಕತ್ತನ್ನೂ ಮಾರಾಟ ಮಾಡುತ್ತಾನೆ..
1.
ಅವನು 10 ರೂ.ಗಳಿಗೆ ತೆಗೆದುಕೊಂಡ ಚಾಕಲೇಟ್ ಬಾರ್
ಅನ್ನು 11ರೂ.ಗಳಿಗೆ
ಮಾರುತ್ತಾನೆ
2. 20 ರೂ.ಗಳಿಗೆ ತೆಗೆದುಕೊಂಡ ಬಿಸ್ಕತ್ ಪ್ಯಾಕೇಟನ್ನು 23 ರೂ.ಗಳಿಗೆ ಮಾರುತ್ತಾನೆ. ಅವನಿಗೆ ಹೆಚ್ಚಿಗೆ ಲಾಭ ಬೇಕಿದೆ. ಅದಕ್ಕಾಗಿ ಅವನಿಗೆ ಹೆಚ್ಚು ಬಿಸ್ಕತ್ತುಗಳನ್ನ ಮಾರಬೇಕೋ, ಹೆಚ್ಚು ಚಾಕಲೇಟುಗಳನ್ನು ಮಾರಬೇಕೋ ಗೊತ್ತಾಗುತ್ತಿಲ್ಲ. ಆಗ ನೀವು ಹೆಚ್ಚು ಚಾಕಲೇಟು ಮಾರಲು ಹೇಳುತ್ತೀರೋ, ಇಲ್ಲ ಬಿಸ್ಕತ್ತು ಮಾರಲು ಹೇಳುತ್ತೀರೋ? ಮೊದಲ ಸಂಧರ್ಭದಲ್ಲಿ 10ರೂ.ಗಳ
ಪ್ರತೀ ಚಾಕಲೇಟಿಗೂ ಅವನಿಗೆ 1ರೂ. ಲಾಭವಾಯಿತು 100 ರೂ.ಗಳ ಚಾಕಲೇಟ್ ಗಳನ್ನು (=10 ಬಾರ್ ಮಾರಿದಾಗ ಅವನಿಗೆ ಆದ ಲಾಭ = 10 ರೂ (=10*1) ಎರಡನೇ ಸಂಧರ್ಭದಲಿ 20 ರೂ ಗಳ ಪ್ರತೀ ಬಿಸ್ಕತ್ ಪ್ಯಾಕ್ ಮಾರಿದಾಗ ಅವನಿಗಾದ ಲಾಭ = 3 ರೂ. 100 ರೂ ಬೆಲೆಯ (=5 ಪ್ಯಾಕ್) ಬಿಸ್ಕತ್ ಗಳನ್ನು ಮಾರಿದಾಗ ಲಾಭ 15 ರೂ (=5*3) ಸಮನಾದ ಬೆಲೆಯ ಮಾರಾಟಕ್ಕೆ (=100 ರೂ), ಬಿಸ್ಕತ್ ಮಾರಿದಾಗ ಅವನಿಗೆ 5 ರೂ (=15-10) ಹೆಚ್ಚಿಗೆ ಲಾಭಸಿಕ್ಕಿತು. ಚಾಕಲೇಟಿಗಿಂತ ಬಿಸ್ಕತ್ ಹೆಚ್ಚು ಮಾರುವುದು
ಲಾಭಕರವಲ್ಲವೇ? |
|
ನಾವಿಲ್ಲಿ ಏನು ಮಾಡಿದ್ದೇವೆ? ಎರಡೂ ಸಂದರ್ಭಗಳಲ್ಲಿ ಲಾಭಾಂಶವನ್ನು 100 ರೂ (%)ಅಸಲು ಬೆಲೆಯ ಮೇಲೆ ಲೆಕ್ಕಹಾಕಿದ್ದೇವೆ.(CP).
100 ರೂ.ಅಸಲು ಬೆಲೆಗೆ ಸಿಕ್ಕಿದ ಲಾಭವನ್ನು ಶೇಕಡಾ ಲಾಭ (profit percentage) ಎನ್ನುತ್ತೇವೆ.
100 ರೂ.ಅಸಲು ಬೆಲೆಗೆ ಆದ ನಷ್ಟವನ್ನು ಶೇಕಡಾ ನಷ್ಟ(loss percentage) ಎನ್ನುತ್ತೇವೆ.
ವಿವಿಧ ಲೆಕ್ಕಾಚಾರಗಳಿಗೆ ಉಪಯೋಗಿಸುವ ಸೂತ್ರಗಳು:
ಲಾಭ = ಮಾರಾಟದ ಬೆಲೆ - ಅಸಲು ಬೆಲೆ (SP-CP)
ನಷ್ಟ = ಅಸಲು ಬೆಲೆ - ಮಾರಾಟದ ಬೆಲೆ (CP-SP)
ಶೇಕಡಾ ಲಾಭ = (ಲಾಭ *100)÷÷ ಅಸಲು ಬೆಲೆ (Profit % = (Profit*100)÷C.P.)
ಶೇಕಡಾ ನಷ್ಟ = (ನಷ್ಟ *100)÷÷ ಅಸಲು ಬೆಲೆ (Loss % = (Loss*100)÷C.P.)
4.1.2 ಸಮಸ್ಯೆ 1: ಒಬ್ಬ ಕಿರಾಣಿ ಅಂಗಡಿಯವನು ಕೆ.ಜಿ.ಗೆ 180ರೂ.ಗಳಂತೆ 3 ಕೆ.ಜಿ.ಟೀ ಪುಡಿಯನ್ನು,ಕೆ.ಜಿ.ಗೆ 130 ರೂ.ಗಳಂತೆ 2ಕೆ.ಜಿ. ಟೀ ಪುಡಿಯ ಜೊತೆ ಬೆರೆಸುತ್ತಾನೆ. ಈ ಮಿಶ್ರಣವನ್ನು ಅವನು ಕೆ.ಜಿ.ಗೆ 192 ರೂ.ಗಳಂತೆ ಮಾರಿದರೆ, ಅವನಿಗೆ ಲಾಭವಾಯಿತೊ? ನಷ್ಟ ಆಯಿತೊ? ಅದರ ಶೇಕಡಾ ಕಂಡುಹಿಡಿಯಿರಿ
ಪರಿಹಾರ:
1. ರೂ.180 ರಂತೆ 3 ಕೆ.ಜಿ. ಟೀ ಪುಡಿಯ ಅಸಲುಬೆಲೆ = 3*180 = ರೂ.540 2. ರೂ.130 ರಂತೆ 2 ಕೆ.ಜಿ. ಟೀ ಪುಡಿಯ ಅಸಲುಬೆಲೆ = 2*130 = ರೂ. 260 ಟೀ ಪುಡಿಯ ಒಟ್ಟು ಅಸಲು ಬೆಲೆ = ರೂ.800 ಟೀ ಪುಡಿಯನ್ನು ಮಿಶ್ರಣಮಾಡಿದಾಗ, ಒಟ್ಟು ಟೀ ಪುಡಿ = 5 ಕೆ.ಜಿ. ರೂ. 192 ರಂತೆ 5 ಕೆ.ಜಿ. ಟೀ ಪುಡಿಯ ಮಾರಿದ ಬೆಲೆ = 192*5 = ರೂ. 960
ಈಗ ಮಾರಾಟದ ಬೆಲೆಯು ಅಸಲು ಬೆಲೆಗಿಂತ ಹೆಚ್ಚಾಗಿದೆ. ವ್ಯಾಪಾರಿಗೆ ಲಾಭವಾಗಿದೆ.
|
|
4.1.2 ಸಮಸ್ಯೆ 2: ಒಬ್ಬ ತೆಂಗಿನ ಕಾಯಿ ವ್ಯಾಪಾರಿಯು 1000 ತೆಂಗಿನ ಕಾಯಿಗಳನ್ನು 6000ರೂ.ಗಳಿಗೆ ಕೊಂಡನು. ಅವುಗಳಲ್ಲಿ 100 ಕಾಯಿಗಳು ಹಾಳಾದವು. ಉಳಿದ ತೆಂಗಿನ ಕಾಯಿಗಳನ್ನು ಅವನು ತಲಾ ರೂ.5 ರಂತೆ ಮಾರಿದರೆ. ಅವನಿಗಾದ ಶೇಕಡಾ ಲಾಭವನ್ನು ಕಂಡುಹಿಡಿ
ಪರಿಹಾರ:
100 ತೆಂಗಿನ ಕಾಯಿಗಳು ಹಾಳಾದ್ದರಿಂದ ವ್ಯಾಪಾರಿಗೆ ಮಾರಾಟಕ್ಕೆ ಉಳಿದ ತೆಂಗಿನ ಕಾಯಿಗಳು = 900ಕಾಯಿಗಳು.
ಈ 900 ಕಾಯಿಗಳ
ಮಾರಾಟದ ಬೆಲೆ = 900*5 = 4500 ರೂ.
ಅಸಲು ಬೆಲೆಗಿಂತ ಮಾರಾಟದ
ಬೆಲೆ ಕಡಿಮೆಯಾದ್ದರಿಂದ ಅವನಿಗೆ ವ್ಯಾಪಾರದಲ್ಲಿ ನಷ್ಟ ಉಂಟಾಯಿತು. ನಷ್ಟ = ಅಸಲುಬೆಲೆ-ಮಾರಿದಬೆಲೆ
=6000-4500 = 1500 ರೂ.
ಶೇಕಡಾ ನಷ್ಟ = ನಷ್ಟ *100÷ ಅಸಲು ಬೆಲೆ = (1500*100)÷6000 = 25%
4.1.2 ಸಮಸ್ಯೆ 3 : : ಒಬ್ಬ ವರ್ತಕನು ಒಂದು ತಿಂಗಳಿನಲ್ಲಿ ರೂ.37,125 ವ್ಯವಹಾರ ಮಾಡುತ್ತಾನೆ. ಈ ಮೊತ್ತದಲ್ಲಿ 25,000 ರೂ.ಗಳು ಸಾಮಾನು ತೆಗೆದುಕೊಳ್ಳಲು ಖರ್ಚಾಗಿದೆ. ಅವನು 9000 ರೂ.ಗಳನ್ನು ಬಾಡಿಗೆ, ಕೆಲಸಗಾರರ ಸಂಬಳ ಮತ್ತು ಇತರ ಖರ್ಚುಗಳಿಗಾಗಿ ವಿನಿಯೋಗಿಸಿದ್ದಾನೆ. ಹಾಗಾದರೆ ಅವನ ಆ ತಿಂಗಳ ಶೇಕಡಾ ಲಾಭ ಅಥವಾ ನಷ್ಟವನ್ನು ಕಂಡುಹಿಡಿ
ಪರಿಹಾರ:
ಅವನ ಖರ್ಚುಗಳು(ಅಸಲುಬೆಲೆಗೆ ಸಮ) = 25,000+9000 = 34,000 ರೂ. ಅವನ ಆದಾಯ (ಮಾರಿದ ಬೆಲೆಗೆ ಸಮ) = 37,125 ರೂ. SP>CP.
= 37,125-34,000 = 3125 ರೂ.
ನಮಗೆ ಮಾರಾಟದ ಬೆಲೆ ಮತ್ತು ಲಾಭ ಅಥವಾ ನಷ್ಟದ ಶೇಕಡಾವನ್ನು ಕೊಟ್ಟಾಗ, ಅಸಲು ಬೆಲೆಯನ್ನು ಹೀಗೆ ಕಂಡು ಹಿಡಿಯಬಹುದು: ಅಸಲು ಬೆಲೆ= 100*ಮಾರಿದ ಬೆಲೆ(100+ಶೇಕಡಾ ಲಾಭ) ಲಾಭವಾದಾಗ. ಅಸಲು ಬೆಲೆ= 100*ಮಾರಿದ ಬೆಲೆ (100-ಶೇಕಡಾ ನಷ್ಟ) ನಷ್ಟವಾದಾಗ. |
|
4.1.2 ಸಮಸ್ಯೆ 4: ಒಬ್ಬ ಹಣ್ಣಿನ ವ್ಯಾಪಾರಿಯು ಒಂದು ಪಪ್ಪಾಯಿ ಹಣ್ಣನ್ನ 12 ತುಂಡುಗಳಾಗಿ ಕತ್ತರಿಸುತ್ತಾನೆ.ಪ್ರತಿ ತುಂಡನ್ನು ರೂ.2.50ಕ್ಕೆ ಮಾರುತ್ತಾನೆ. ಅವನು 50%ಲಾಭ ಗಳಿಸಿದರೆ, ಪಪ್ಪಾಯಿ ಹಣ್ಣಿನ ಕೊಂಡಬೆಲೆಯನ್ನು ಕಂಡುಹಿಡಿಯಿರಿ.
ಪರಿಹಾರ:
ಪಪ್ಪಾಯಿ ಹಣ್ಣನ್ನು 12 ತುಂಡುಗಳಾಗಿ ಮಾಡಿದೆ ಮತ್ತು ಪ್ರತೀ ತುಂಡಿನ ಮಾರಾಟದ ಬೆಲೆ ರೂ.2.50 ಪಪ್ಪಾಯಿ ಹಣ್ಣಿನ ಮಾರಾಟದ ಬೆಲೆ (SP) = 2.50*12 = 30 ರೂ. ಅವನು ಗಳಿಸಿದ ಶೇಕಡಾ ಲಾಭ = 50% ಅಸಲು ಬೆಲೆ = 100*ಮಾರಿದ ಬೆಲೆ ÷(100+ಶೇಕಡಾ ಲಾಭ) = 100*30÷(100+50) = 100*30÷150 = 20 ರೂ. ತಾಳೆ: ಮಾರಿದ ಬೆಲೆ =30 ರೂ. ಅಸಲು ಬೆಲೆ =
20 ರೂ.
|
|
4.1.2 ಸಮಸ್ಯೆ 5: ಒಬ್ಬ ತರಕಾರಿ ವ್ಯಾಪಾರಿಯು 10 ಕಿ.ಗ್ರಾಂ
ಬದನೆಕಾಯಿ ಯನ್ನು ರೂ.71.25 ಕ್ಕೆ ಮಾರಿದಾಗ ಅವನಿಗೆ 5%ನಷ್ಟವಾದರೆ ಅವನು ಖರೀದಿಸಿದ ಅಸಲು ಬೆಲೆ ಕಂಡುಹಿಡಿಯಿರಿ.
ಪರಿಹಾರ:
ವ್ಯಾಪಾರಿಗಾದ ನಷ್ಟ = 5%
ಅಸಲು ಬೆಲೆ =
100* ಮಾರಿದ ಬೆಲೆ ÷(100- ಶೇಕಡಾ ನಷ್ಟ)
= 100*71.25÷(100-5)
= 100*71.25÷95
= 75 ರೂ.
ತಾಳೆ:
ಮಾರಿದ ಬೆಲೆ =71.25 , ಅಸಲು ಬೆಲೆ =75 ರೂ.
ನಷ್ಟ = ಅಸಲು-ಮಾರಿದ
ಬೆಲೆ =
75-71.25 = 3.75 ರೂ.
ಶೇಕಡಾ ನಷ್ಟ = ನಷ್ಟ *100÷ ಅಸಲು
= 3.75*100÷75 = 5% - (ದತ್ತಾಂಶ)
ವಸ್ತುವಿನ ಅಸಲು ಬೆಲೆ (CP) ಮತ್ತು ಲಾಭ ಅಥವಾ ನಷ್ಟದ ಶೇಕಡಾ ಪ್ರಮಾಣಕೊಟ್ಟಾಗ ವಸ್ತುವಿನ ಮಾರಾಟದ ಬೆಲೆಯನ್ನು ಕೆಳಕಂಡ ಸೂತ್ರದಿಂದ ಕಂಡು ಹಿಡಿಯಬಹುದು:
ಮಾರಿದ ಬೆಲೆ (SP) = (100+ ಶೇಕಡಾ ಲಾಭ)* ಅಸಲು ಬೆಲೆ ÷100 (ಲಾಭವಾದಾಗ)
ಮಾರಿದ ಬೆಲೆ (SP) = (100- ಶೇಕಡಾ ನಷ್ಟ)*CP÷100 (ನಷ್ಟವಾದಾಗ)
ಈಗ
ಒಂದು ವಸ್ತುವು ತಯಾರಕನಿಂದ ಗ್ರಾಹಕನಿಗೆ ತಲಪುವ ಕ್ರಮ ಹೇಗೆ?
(ತಯಾರಕ ಗ್ರಾಹಕನಿಗೆ
ನೇರವಾಗಿ ಏತಕ್ಕೆ ಮಾರುವುದಿಲ್ಲ ಎನ್ನುವುದನ್ನು ಯೋಚಿಸಿ) |
|
4.1.2 ಸಮಸ್ಯೆ 6: ಒಬ್ಬ ತಯಾರಕನು ಒಂದು ವಸ್ತುವನ್ನು ತಯಾರಿಸಿ ಗೆ ಮಾರುವಾಗ 50% ಲಾಭ ಗಳಿಸುತ್ತಾನೆ. ಸಗಟು ವ್ಯಾಪಾರಿ, ಚಿಲ್ಲರೆ ವ್ಯಾಪಾರಿಗೆ ಮಾರುವಾಗ 25% ಲಾಭ ಗಳಿಸುತ್ತಾನೆ. ಚಿಲ್ಲರೆ ವ್ಯಾಪಾರಿಯು 10% ಲಾಭವಿಟ್ಟು ವಸ್ತುವನ್ನು ಮಾರಾಟ ಮಾಡುತ್ತಾನೆ. ಒಂದು ವಸ್ತುವಿನ ತಯಾರಿಕಾ ವೆಚ್ಚ ರೂ.200. ಆದರೆ ಆ ವಸ್ತುವನ್ನು ಪಡೆಯಲು ಗ್ರಾಹಕನು ಕೊಡಬೇಕಾದ ಹಣವೆಷ್ಟು?
ಪರಿಹಾರ:
ಈಗ ನಾವು ನೋಡಬೇಕಾದ್ದು: ತಯಾರಕನಲ್ಲಿ ಸಗಟು ವ್ಯಾಪಾರಿಯಲ್ಲಿ, ಮತ್ತು ಚಿಲ್ಲರೆ ವ್ಯಾಪಾರಿಯಲ್ಲಿ ವಸ್ತುವಿನ ಮಾರಾಟದ ಬೆಲೆ.
ಪ್ರತಿಯೊಬ್ಬರೂ ಲಾಭ ಪಡೆಯುತ್ತಿರುವುದರಿಂದ ನಾವು ಉಪಯೋಗಿಸಬೇಕಾದ ಸೂತ್ರ
SP = (100 ಶೇ. ಲಾಭ)* ಅಸಲು ಬೆಲೆ ÷100
ತಯಾರಕನಲ್ಲಿ ಮಾರಾಟದ
ಬೆಲೆ = (100+50)*200÷100 =
300 ರೂ. ( ತಯಾರಕನಲ್ಲಿ CP=200)
ಸಗಟು ವ್ಯಾಪಾರಿಯಲ್ಲಿ
ಮಾರಾಟದ ಬೆಲೆ
=
(100+25)*300÷100 = 375 ರೂ. (ಸಗಟು ವ್ಯಾಪಾರಿಯಲ್ಲಿ CP=300)
ಚಿಲ್ಲರೆ ವ್ಯಾಪಾರಿಯಲ್ಲಿ
ಮಾರಿದ ಬೆಲೆ =
(100+10)*375÷100 = 412.50 ರೂ. (ಚಿಲ್ಲರೆ ವ್ಯಾಪಾರಿಗೆ ಅಸಲು ಬೆಲೆ CP=375)
ತಾಳೆ:
ನಾವೀಗ ತಯಾರಕನ, ಸಗಟು ವ್ಯಾಪಾರಿಯ, ಚಿಲ್ಲರೆ ವ್ಯಾಪಾರಿಯ, ಲಾಭವನ್ನು
ಲೆಕ್ಕಹಾಕುವಾ
ಚಿಲ್ಲರೆ ವ್ಯಾಪಾರಿಯಲ್ಲಿ ಮಾರಿದ ಬೆಲೆ = 412.50 ಅಸಲು ಬೆಲೆ = 375
ಲಾಭ = 412.50-375 = 37.5 ರೂ
ಶೇಕಡಾ ಲಾಭ = ಲಾಭ *100÷ ಅಸಲು = 37.5*100÷375 = 10% - ದತ್ತ
ಸಗಟು ವ್ಯಾಪಾರಿಯಲ್ಲಿ ಮಾರಿದ ಬೆಲೆ = 375. ಅಸಲು ಬೆಲೆ = 300
ಲಾಭ = SP-CP = 375-300 = 75
ಶೇಕಡಾ ಲಾಭ = ಲಾಭ *100÷ ಅಸಲು = 75*100÷300 = 25% - ದತ್ತ
ತಯಾರಕನಲ್ಲಿ ಮಾರಿದ ಬೆಲೆ =300. ಅಸಲು ಬೆಲೆ =200
ಲಾಭ = 300-200 = 100 ರೂ.
ಶೇಕಡಾ ಲಾಭ = ಲಾಭ *100÷ ಅಸಲು = 100*100÷200 = 50% - ದತ್ತ
4.1.2 ಸಮಸ್ಯೆ 7: ಒಂದು ವಸ್ತುವನ್ನು 23 ರೂಪಾಯಿಗಳಿಗೆ ಮಾರಿದ್ದರಿಂದ, ಒಬ್ಬ ವ್ಯಾಪಾರಿಯು 8% ನಷ್ಟ ಅನುಭವಿಸಿದನು. ಅವನು 10%ಲಾಭ ಪಡೆಯಬೇಕಾದರೆ ಅದನ್ನು ಯಾವ ಬೆಲೆಗೆ ಮಾರಬೇಕು? ಆ ವಸ್ತುವಿನ ಕೊಂಡ ಬೆಲೆ ಎಷ್ಟು?
ಪರಿಹಾರ:
ಮೊದಲು ನಾವು ಅಸಲು ಬೆಲೆ, ನಂತರ ಮಾರ ಬೇಕಾದ ಬೆಲೆಯನ್ನು ಕಂಡುಹಿಡಿಯಬೇಕು.
ವ್ಯಾಪಾರಿಯು 23 ರೂ.ಗಳಿಗೆ ಮಾರಿದ್ದರಿಂದ 8% ನಷ್ಟವಾಯಿತು.
ಅಸಲು ಬೆಲೆ = 100* ಮಾರಿದ ಬೆಲೆ ÷(100- ಶೇಕಡಾ ನಷ್ಟ) = 100*23÷(100-8)
= 100*23/92
= ರೂ 25
ಅವನಿಗೆ ವಸ್ತುವಿನ ಅಸಲು ಬೆಲೆ 25ರೂ.ಗಳ ಮೇಲೆ 10% ಲಾಭವಾಗಬೇಕಾದರೆ.
ಮಾರಬೇಕಾದ ಬೆಲೆ = (100+ ಶೇಕಡಾ ಲಾಭ)* ಅಸಲು ಬೆಲೆ ÷100 = (100+10)*25÷100
= 110*25/100
= ರೂ.27.5
ತಾಳೆ:
ವ್ಯಾಪಾರಿ ನಷ್ಟ
ಅನುಭವಿಸಿದ್ದಾನೆ.
ಅಸಲು ಬೆಲೆ = 25 ರೂ. ಮಾರಿದ ಬೆಲೆ = 23 ರೂ. ನಷ್ಟ =
25-23 =2 ರೂ.
ಶೇಕಡಾ ನಷ್ಟ = ನಷ್ಟ *100÷ ಅಸಲು
ಬೆಲೆ = 2*100÷25 = 8% - ದತ್ತ.
27.5ರೂ.ಗಳಿಗೆ
ಮಾರಿದಾಗ ಅವನು ಲಾಭ ಗಳಿಸುತ್ತಾನೆ. ಅಸಲು ಬೆಲೆ 25 ರೂ.
ಲಾಭ =
27.5-25 = 2.5 ರೂ.
ಶೇಕಡಾ ಲಾಭ = ಲಾಭ *100÷ ಅಸಲು
ಬೆಲೆ = 2.5*100÷25 =10% - ದತ್ತ.
4.1.2 ಸಮಸ್ಯೆ 8: : ಒಬ್ಬ ವ್ಯಾಪಾರಿಯು 1000
ಸೌತೆಕಾಯಿಗಳನ್ನು 3800 ರೂಪಾಯಿಗಳಿಗೆ ಕೊಂಡನು. ಅವನು 2% ರಂತೆ ತೆರಿಗೆ ಕಟ್ಟಿದನು ಮತ್ತು ಸಾಗಾಣಿಕೆಗಾಗಿ 50 ರೂಪಾಯಿಗಳನ್ನು ಖರ್ಚುಮಾಡಿದನು. ಅವುಗಳಲ್ಲಿ 40 ಹಾಳಾದವು. ಒಟ್ಟಾರೆ 1114 ರೂಪಾಯಿಗಳ
ಲಾಭ ಪಡೆಯಬೇಕಾದರೆ,ಅವನು ಉಳಿದವುಗಳನ್ನು ಯಾವ ಬೆಲೆಗೆ ಮಾರಬೇಕು?
ಪರಿಹಾರ:
ಮಾರಾಟದ ಬೆಲೆಯನ್ನು
ಕಂಡುಹಿಡಿಯಬೇಕು. ಆದಕ್ಕಿಂತ ಮುಂಚೆ ನಾವು ಅಸಲು ಬೆಲೆಯನ್ನು ಲೆಕ್ಕ ಹಾಕಬೇಕು. ಅವನು ಖರೀದಿ
ಮಾಡಿದ ಮೌಲ್ಯದಲ್ಲಿ, ತೆರಿಗೆ, ಸಾಗಾಟ ಇವುಗಳನ್ನೆಲ್ಲಾ ಕೂಡಿಸಬೇಕು.
1000 ಸೌತೆಕಾಯಿಗಳ ಕ್ರಯ = 3800 ರೂ.
2% ರಂತೆ 3800 ರೂ.ಗಳಿಗೆ ಕಟ್ಟಿದ ತೆರಿಗೆ = 3800*2÷100 = 76
ಸಾಗಾಟದ ಖರ್ಚು = 50
ಒಟ್ಟು ಅಸಲು ಬೆಲೆ = 3926 ರೂ. (3800+76+50)
ಮಾರಾಟದ ಬೆಲೆ = ಅಸಲು ಬೆಲೆ + ಬೇಕಾದ ಲಾಭ
= 3926+1114 = 5040 ರೂ.
40 ಕಾಯಿಗಳು ಹಾಳಾದ್ದರಿಂದ ಮಾರಲು ಉಳಿದ ಕಾಯಿಗಳು = 960
ಪ್ರತೀ ಸೌತೆಕಾಯಿಯನ್ನು ಮಾರಬೇಕಾದ ದರ
= 5040÷960
= ರೂ 5.25
ತಾಳೆ:
ಮಾರಿದ ಬೆಲೆ = ಸೌತೆಕಾಯಿಗಳು * ದರ
= 960*5.25 = 5040
ಲಾಭ = ಮಾರಿದ ಬೆಲೆ - ಅಸಲುಬೆಲೆ
= 5040-3926 = 1114 (ದತ್ತಾಂಶ)
4.1 ಕಲಿತ ಸಾರಾಂಶ
ಕ್ರ.ಸಂ. |
ಕಲಿತ ಮುಖ್ಯಾಂಶಗಳು |
1 |
ಲಾಭ = ಮಾರಿದ ಬೆಲೆ - ಅಸಲುಬೆಲೆ (SP>CP ಆದಾಗ) |
2 |
ನಷ್ಟ = ಮಾರಿದ ಬೆಲೆ - ಅಸಲು ಬೆಲೆ (SP<CP ಆದಾಗ) |
3 |
ಶೇಕಡಾ ಲಾಭ = ಲಾಭ *100÷ ಅಸಲು ಬೆಲೆ |
4 |
ಶೇಕಡಾ ನಷ್ಟ = ನಷ್ಟ *100÷ ಅಸಲು ಬೆಲೆ |
5 |
ಅಸಲು ಬೆಲೆ =100* ಮಾರಿದ ಬೆಲೆ ÷(100+ ಶೇಕಡಾ ಲಾಭ) (ಲಾಭವಾದಾಗ) |
6 |
ಅಸಲು ಬೆಲೆ =100* ಮಾರಿದ ಬೆಲೆ ÷(100- ಶೇಕಡಾ ನಷ್ಟ) (ನಷ್ಟವಾದಾಗ) |
7 |
ಮಾರಿದ ಬೆಲೆ = (100+ ಶೇಕಡಾ ಲಾಭ)* ಅಸಲು ಬೆಲೆ ÷100 (ಲಾಭವಾದಾಗ) |
8 |
ಮಾರಿದ ಬೆಲೆ = (100- ಶೇಕಡಾ ನಷ್ಟ)* ಅಸಲು ಬೆಲೆ ÷100 (ನಷ್ಟವಾದಾಗ) |