4.3 ದಲ್ಲಾಳಿ (Brokerage):

 

ನಾವು ಈವರೆಗೆ ವಸ್ತುಗಳ ಮಾರಾಟ ಮತ್ತು ಕೊಳ್ಳುವ ವ್ಯವಹಾರದ ಬಗ್ಗೆ ಕಲಿತಿದ್ದೇವೆ. ಈಗ ನೀಡುವ ಸೇವೆಗಳ(ಮನೆಯನ್ನು/ಹಸುವನ್ನು/ಹೊಲವನ್ನು ಕೊಳ್ಳಲು/ಮಾರಲು ಸಹಾಯ  ಮಾಡುವವನು) ಬಗ್ಗೆ ತಿಳಿಯುವಾ.

ನೀವು ವರ್ತಮಾನ ಪತ್ರಿಕೆಗಳಲ್ಲಿ ಮನೆಗಳು, ಸೈಟುಗಳು, ವಾಹನಗಳು, ಪೀಠೋಪಕರಣಗಳು ಮುಂತಾದವು ಮಾರಾಟಕ್ಕಿರುವ ಕುರಿತು ಜಾಹೀರಾತುಗಳನ್ನು ನೋಡಿರಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಮಾರುವವನೂ ಅಲ್ಲದ, ಕೊಳ್ಳುವವನೂ ಅಲ್ಲದ ಒಬ್ಬ ವ್ಯಕ್ತಿಯು/ಸಂಸ್ಥೆಯು ಈ ವ್ಯವಹಾರಗಳನ್ನು ನಡೆಸುತ್ತಾನೆ. ಮಾರುವ ಕೊಳ್ಳುವ ವ್ಯವಹಾರವನ್ನು ಇತ್ಯರ್ಥಗೊಳಿಸುವ ಈ ಮಧ್ಯವರ್ತಿಯನ್ನು ದಲ್ಲಾಳ (‘middleman’) ಅಥವಾಕಮಿಶನ್ ಏಜಂಟ್ ಎಂದು ಕರೆಯುತ್ತೇವೆ. ಮಾರುವವನಿಗೂ ಕೊಳ್ಳುವವನಿಗೂ ನೇರ ಸಂಪರ್ಕ ಇಲ್ಲದಿರುವುದರಿಂದ ದಲ್ಲಾಳನ ಅಗತ್ಯವಿರುತ್ತದೆ.

ಈ ವ್ಯವಹಾರದಲ್ಲಿ ದಲ್ಲಾಳನು ಸ್ವೀಕರಿಸುವ ಹಣಕ್ಕೆ ದಲ್ಲಾಳಿ (brokerage) ಅಥವಾ ಕಮಿಶನ್ (commission) ಎನ್ನುತ್ತೇವೆ.

 

ಗ್ರಾಹಕ ಕೊಡುವುದನ್ನು ದಲ್ಲಾಳಿಯೆಂದು, ಮಾರುವವನು ಕೊಡುವುದನ್ನು ಕಮಿಶನ್ ಎಂದು ಕರೆಯುತ್ತಾರೆ. ಹೀಗೆ ಆತನು ಎರಡೂ ಕಡೆಯಿಂದ ಹಣವನ್ನು ಪಡೆಯಬಹುದು.

 

ಈ ದಲ್ಲಾಳಿ ಅಥವಾ ಕಮಿಶನ್ ಎಂಬುದು ಮಾರಾಟದ ಬೆಲೆಯ ಶೇಕಡಾ ಕ್ರಮದಲ್ಲಿ ಇರಬೇಕೆಂದೇನೂ ಇಲ್ಲ. ಕೆಲವು ಸಾರಿ ಸ್ಧಿರ ಮೌಲ್ಯದ ರೂಪದಲ್ಲಿಯೂ ಇರುತ್ತದೆ:-

 

ಉದಾ:

ಮನೆ ಖರೀದಿಗೆ ಅಥವಾ ಬಾಡಿಗೆಗೆ ಬೇಕಾದವನಿಗೆ ಹುಡುಕಿ ಕೊಟ್ಟದ್ದಕ್ಕಾಗಿ ದಲ್ಲಾಳನಿಗೆ 1 ತಿಂಗಳ ಬಾಡಿಗೆ ಕೊಡುವುದು.

ಗ್ರಾಹಕನು ಕೊಡಬೇಕಾದ ಒಟ್ಟು ಹಣ = ಮಾರಾಟದ ಬೆಲೆ + ದಲ್ಲಾಳಿ

ಮಾರುವವನಿಗೆ ಸಿಗುವ ಹಣ = ಮಾರಾಟದ ಬೆಲೆ ಕಮಿಶನ್

ಸೋಡಿ ಲೆಕ್ಕ ಮಾಡಿದಂತೆಯೇ ದಲ್ಲಾಳಿ (ಕಮಿಶನ್) ಲೆಕ್ಕಹಾಕಲು ಸೂತ್ರವಿದೆ:-

 

1.   ಕಮಿಶನ್ (ದಲ್ಲಾಳಿ) = ಕಮಿಶನ್ ದರ * ಮಾರಿದಬೆಲೆ /100

2.   ಕಮಿಶನ್ ದರ = ಕಮಿಶನ್ *100 / ಮಾರಿದಬೆಲೆ

3.   ಮಾರಿದಬೆಲೆ (Sale price) = ಕಮಿಶನ್ *100/ ಕಮಿಶನ್ ದರ

 

 

4.3 ಸಮಸ್ಯೆ 1 :  ಒಬ್ಬ ರೈತನು ಹಸುವನ್ನು 10,000 ರೂಪಾಯಿಗಳಿಗೆ ಒಬ್ಬ ದಲ್ಲಾಳನ ಮೂಲಕ ಕೊಳ್ಳುತ್ತಾನೆ. ದಲ್ಲಾಳಿಯು 2 ½ % ಆದರೆ ದಲ್ಲಾಳಿಯ ಹಣ ಮತ್ತು ಹಸುವಿನ ಬೆಲೆಗಳನ್ನು ಕಂಡುಹಿಡಿ.

 

ಪರಿಹಾರ:

 

ದಲ್ಲಾಳಿ = ದಲ್ಲಾಳಿಯ ದರ*ಮಾರಿದ ಬೆಲೆ /100 = 2.5*10000/100 = ರೂ. 250

ಹಸುವಿನ ಬೆಲೆ = ಮಾರಿದ ಬೆಲೆ + ದಲ್ಲಾಳಿ = 10000+250 = ರೂ. 10,250

 

4.3 ಸಮಸ್ಯೆ 2:    ಒಂದು ಏಜೆನ್ಸಿಯು ಒಬ್ಬ ವರ್ತಮಾನ ಪತ್ರಿಕೆ ಹಂಚಿಕೆದಾರನಿಗೆ 15% ಕಮಿಶನ್ ಕೊಡುತ್ತದೆ. ಪ್ರತೀ ವರ್ತಮಾನ ಪತ್ರಿಕೆಯ ಬೆಲೆ 3.ರೂ.ಗಳು. ಅವನು ದಿನಕ್ಕೆ 50 ವರ್ತಮಾನ ಪತ್ರಿಕೆಗಳನ್ನು ಹಂಚಿದರೆ, ಒಂದು ತಿಂಗಳಲ್ಲಿ ಅವನಿಗೆ ದೊರೆತ ಕಮಿಶನ್ ಎಷ್ಟು? ಏಜೆನ್ಸಿಗೆ ಸಿಗುವ ನಿವ್ವಳ (Net) ಮೊಬಲಗು ಎಷ್ಟು?

 

ಪರಿಹಾರ:

 

ಪ್ರತೀ ವರ್ತಮಾನ ಪತ್ರಿಕೆಯ ಕ್ರಯ = 3 ರೂ.

ಒಂದು ದಿನದ ಮಾರಾಟದ ಹಣ = 1 ದಿನದಲ್ಲಿ ಮಾರಿದ ಪತ್ರಿಕೆ* ಪತ್ರಿಕೆಯ ಬೆಲೆ

 = 50*3 = 150 ರೂ.

ಒಂದು ತಿಂಗಳ ಮಾರಾಟದ ಹಣ = ದಿನಗಳು*ಒಂದು ದಿನದ ಹಣ

  = 30*150 = 450 ರೂ.

ಕಮಿಶನ್ = ಕಮಿಶನ್ ದರ*ಮಾರಾಟದ ಹಣ /100 = 15*450/100 = 67.5 ರೂ.

ಏಜೆನ್ಸಿಗೆ ದೊರೆಯುವ ನಿವ್ವಳ ಹಣ = ಮಾರಿದ ಹಣಕಮಿಶನ್ = 450 -67.5 = 382.5 ರೂ.

 

4.3 ಸಮಸ್ಯೆ 3: 8 ನೇ ತರಗತಿಯ ಗಣಿತ ಪಠ್ಯ ಪುಸ್ತಕದ ಬೆಲೆ ರೂ. 15.75. ಒಬ್ಬ ಪುಸ್ತಕ ವ್ಯಾಪಾರಿಯು 1200 ಪುಸ್ತಕಗಳನ್ನು ಮಾರಿ, ತನ್ನ ಕಮಿಶನ್ ಕಳೆದು ಉಳಿದ ರೂ. 17,860.50 ನ್ನ ಪ್ರಕಾಶಕರಿಗೆ ಕೊಡುತ್ತಾನೆ. ಹಾಗಾದರೆ ಕಮಿಶನ್ ದರ ಕಂಡುಹಿಡಿಯಿರಿ.

ಪರಿಹಾರ:

 

ಪುಸ್ತಕಗಳ ಒಟ್ಟು ಮಾರಾಟದ ಬೆಲೆ = ಪುಸ್ತಕಗಳ ಸಂಖ್ಯೆ* ದರ = 1200*15.75 =18900 ರೂ.

ಕಮಿಶನ್ = ಮಾರಾಟದ ಬೆಲೆ ಪ್ರಕಾಶಕರಿಗೆ ಕೊಟ್ಟ ಹಣ

 = 18900-17860.5 = 1039.5 ರೂ.

ಕಮಿಶನ್ ದರ = ಕಮಿಶನ್ *100 / ಮಾರಾಟದ ಬೆಲೆ

      = 1039.5*100/18900 = 5.5%

 

ತಾಳೆ:

 

1 ಪುಸ್ತಕಕ್ಕೆ ಕಮಿಶನ್ = ಕಮಿಶನ್ ದರ * ಮಾರಾಟದ ಬೆಲೆ /100

       = 5.5*15.75/100 = 1039.5 = 0.86625 ರೂ.

1200 ಪುಸ್ತಕಗಳಿಗೆ ಕಮಿಶನ್ = ಪುಸ್ತಕಗಳ ಸಂಖ್ಯೆ * 1 ಪುಸ್ತಕಕ್ಕೆ ಕಮಿಶನ್

      = 1200*.86625 = 1039.5 ರೂ.

ಪ್ರಕಾಶಕರಿಗೆ ಕೊಟ್ಟ ಹಣ = ಮಾರಾಟದ ಬೆಲೆ ಕಮಿಶನ್

         = 18900 – 1039.5 = 17860.5 ರೂ. ದತ್ತ

 

 

4.3 ಸಮಸ್ಯೆ 4 :  ಒಬ್ಬ ರೈತನು ತನ್ನ ಹೊಲವನ್ನು ಒಬ್ಬ ಏಜೆಂಟಿನ ಸಹಾಯದಿಂದ 68,000 ರೂಪಾಯಿಗಳಿಗೆ ಮಾರಿದನು. ಅವನು ಪಾವತಿ ಮಾಡಿದ ಕಮಿಶನ್ ಮೊಬಲಗು ರೂ.2550 ಆದರೆ. ಕಮಿಶನ್ ದರ ಮತ್ತು ರೈತನು ಪಡೆದ ಹಣ ಇವುಗಳನ್ನು ಕಂಡುಹಿಡಿ.

 

ಪರಿಹಾರ:

 

ಕಮಿಶನ್ ದರ = ಕಮಿಶನ್ *100 / ಮಾರಾಟದ ಬೆಲೆ

   = 2550*100/68000 = 3.75%

ರೈತನಿಗೆ ಸಿಕ್ಕ ಹಣ = ಮಾರಾಟದ ಬೆಲೆ ಕಮಿಶನ್

 = 68000-2550 = 65, 450 ರೂ.

 

ತಾಳೆ:

 

ಕಮಿಶನ್ = ಕಮಿಶನ್ ದರ * ಮಾರಾಟದ ಬೆಲೆ /100

  = 3.75*68000/100 = 2550 ರೂ. ದತ್ತಾಂಶ

 

4.3 ಸಮಸ್ಯೆ 5 :  ಒಬ್ಬ ರೈತನು ತರಕಾರಿಗಳನ್ನು ಮಾರುವುದಕ್ಕಾಗಿ 75 ರೂಪಾಯಿಗಳ ದಲ್ಲಾಳಿಯನ್ನು ಪಾವತಿಸಿದನು. ದಲ್ಲಾಳಿ ದರವು  2.5% ಆದರೆ, ರೈತನು ದಲ್ಲಾಳಿಗೆ ಪಾವತಿ ಮಾಡಿದ ನಂತರ ಪಡೆದ ಮೊಬಲಗನ್ನು ಕಂಡು ಹಿಡಿಯಿರಿ.

 

 

ಪರಿಹಾರ:

ಮಾರಾಟದ ಬೆಲೆ = ಕಮಿಶನ್ *100/ ಕಮಿಶನ್ ದರ = 75*100/2.5 = 3000 ರೂ.

ರೈತನಿಗೆ ಸಿಕ್ಕ ಹಣ = ಮಾರಾಟದ ಬೆಲೆ ಕಮಿಶನ್ = 3000-75 = 2925 ರೂ.

 

ತಾಳೆ:

 

ಕಮಿಶನ್ = ಕಮಿಶನ್ ದರ * ಮಾರಾಟದ ಬೆಲೆ /100

  = 2.5*3000/100 = 75 ರೂ. ದತ್ತಾಂಶ

 

4.3 ಸಮಸ್ಯೆ 6 :  ಒಂದು ಕಂಪನಿಯು ತನ್ನ ಒಬ್ಬ ಮಾರಾಟ ಪ್ರತಿನಿಧಿಗೆ 7000 ರೂ.ಗಳ ಸಂಬಳ ಮತ್ತು ವಸ್ತುಗಳನ್ನು ಮಾರಿದ್ದಕ್ಕಾಗಿ 5% ಕಮಿಶನ್ ನೀಡುತ್ತದೆ. ಒಂದು ತಿಂಗಳಿನಲ್ಲಿ ಕಂಪನಿಯು

ಆ ಮಾರಾಟ ಪ್ರತಿನಿಧಿಗೆ ರೂ. 9500 ನ್ನ ಪಾವತಿಸಿತು. ಹಾಗಾದರೆ ಆ ಮಾರಾಟ ಪ್ರತಿನಿಧಿಯ ಮೂಲಕ ಮಾರಾಟವಾದ ವಸ್ತುಗಳ ಬೆಲೆ ಎಷ್ಟು?

 

ಪರಿಹಾರ:

 

ಮಾರಾಟ ಪ್ರತಿನಿಧಿಗೆ ಸಂಬಳ ಮತ್ತು ಕಮಿಶನ್ ಎರಡೂ ಸಿಗುವುದರಿಂದ ಮೊದಲು ನಾವು ಅವನ ಕಮಿಶನ್ ಹಣವನ್ನು ಲೆಕ್ಕ ಹಾಕಬೇಕು.

ಕಮಿಶನ್ = ಪಡೆದ ಮೊಬಲಗು ಸಂಬಳ

 = 9500-7000 = 2500 ರೂ.

ಮಾರಾಟ ಮಾಡಿದ ವಸ್ತುಗಳ ಬೆಲೆ = ಕಮಿಶನ್ *100/ ಕಮಿಶನ್ ದರ

 = 2500*100/5 = 50,000 ರೂ.

 

ತಾಳೆ:

 

ಕಮಿಶನ್ = ಮಾರಿದ ವಸ್ತುಗಳ ಬೆಲೆ * ಕಮಿಶನ್ ದರ /100

  =50000*5/100 = 2500 ರೂ.

ಪ್ರತಿನಿಧಿಗೆ ಸಿಕ್ಕ ಹಣ = ಸಂಬಳ + ಕಮಿಶನ್ = Rs 7000+2500 = 9500 ರೂ. ದತ್ತ

 

4.3 ಕಲಿತ ಸಾರಾಂಶ

 

 

ಕ್ರ.ಸಂ.

ಕಲಿತ ಮುಖ್ಯಾಂಶಗಳು

1

ಕಮಿಶನ್ (ದಲ್ಲಾಳ) = ಕಮಿಶನ್ ದರ * ಮಾರಾಟದ ಬೆಲೆ /100

2

ಕಮಿಶನ್ ದರ = ಕಮಿಶನ್ *100 / ಮಾರಾಟದ ಬೆಲೆ

3

ಮಾರಾಟದ ಬೆಲೆ = ಕಮಿಶನ್ *100/ ಕಮಿಶನ್ ದರ